ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಸರ್ಕಾರಿ ಕಚೇರಿಗಳು ಸುರಕ್ಷಿತವಾಗಿಲ್ಲವೆಂಬುದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಆರ್ ಟಿ ಒ ಕಚೇರಿಯಲ್ಲಿ ಸರ್ಕಾರಿ ಲಾಗಿನ್ ಪಡೆದ ಬ್ರೋಕರ್ ನಿಂದ ಆಪರೇಟ್ ಆಗುತ್ತಿದ್ದ ಘಟನೆಗಳು ದಾಖಲಾಗಿತ್ತು. ಇತ್ತೀಚೆಗೆ ಡಿಡಿಪಿಐ ಕಚೇರಿಯಲ್ಲಿ ವೀಕ್ಷಕರಾಗಿದ್ದ ಶಿಕ್ಷಕಿಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಎಟಿಎಂ ಕಾರ್ಡ್ ಕಳುವಾಗಿತ್ತು. ಈಗ ಪಾಲಿಕೆಯ ಸರದಿ....
ಈಗ ಮಹಾನಗರ ಪಾಲಿಕೆಯಲ್ಲಿ ಜನನ ಮತ್ತು ಮರಣ ವಿಭಾಗದಲ್ಲಿ ಡಿಜಿಟಲ್ ರೂಪದಲ್ಲಿದ್ದ ಪೆನ್ ಡ್ರೈವ್ ಕಳುವಾಗಿರುವ ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾಲಿಕೆಯ ಜನನ-ಮರಣ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಇವರು ಸುಮಾರು 11 ವರ್ಷದಿಂದ ಕೆಲಸ ಮಾಡಿಕೊಂಡು ವಿವಿಧ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದರು.
8 ವರ್ಷದಿಂದ ಜನನ-ಮರಣ ವಿಭಾಗದಲ್ಲಿ ಕೆಲಸ ಮಾಡಿಕೊಂಡು ಜನನ-ಮರಣ ದಾಖಲೆಗಳನ್ನು ಕೊಡುವುದಕ್ಕೆ ನೋಂದಣಾಧಿಕಾರಿಗಳ ಸಹಿ ಇರುವ ಪೆನ್ ಡ್ರೈವ್ ರೂಪದಲ್ಲಿರುವ ಕಂಪ್ಯೂಟರ್ ಸಿಪಿಯುಗೆ ಅಳವಡಿಸಲಾಗಿತ್ತು.
ಇತ್ತೀಚೆಗೆ ಕಂಪ್ಯೂಟರ್ ಆಪರೇಟರ್ ಪಕ್ಕದ ಕೊಠಡಿಗೆ ಹೋಗಿಬರುವುದಾಗಿ ಮಹಿಳಾ ಅಟೆಂಡರ್ ಗೆ ಹೇಳಿ ಹೋಗಿ ಬರುವಷ್ಟರಲ್ಲಿ ಡಿಜಿಟಲ್ ಕೀ ನಾಪತ್ತೆಯಾಗಿದೆ. ಈ ಬಗ್ಗೆ ಮಹಿಳಾ ಅಟೆಂಡರ್ ನ್ನ ವಿಚಾರಿಸಿದಾಗ ಅವರೂ ಸಹ ವಾಶ್ ರೂಮ್ ಗೆ ಹೋಗಿದ್ದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಡಿಜಿಟಲ್ ಕೀಗಳ ಕಳುವು ಈ ರೀತಿ ಕಳುವಾಗಿರುವುದು ದೂರು ದಾಖಲಾಗಿದೆ. ಇಲಾಖೆಯ ಜನನ-ಮರಣ ಶಾಖೆಗೆ ಸಂಭಂದಿಸಿದ ನೋಂದಣಾಧಿಕಾರಿಗಳ ಸಹಿ ಇರುವ ಡಿಜಿಟಲ್ ಕೀಯನ್ನು ಪತ್ತೆ ಮಾಡಿ, ಆ ಡಿಜಿಟಲ್ ಕೀಯನು ಕಳ್ಳತನ ಮಾಡಿಕೊಂಡು ಹೋದ ಕಳ್ಳನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ದಾಖಲಾಗಿದೆ.