ಪತಿಯಿಂದಲೇ ಪತ್ನಿಯ ಕೊಲೆ



ಸುದ್ದಿಲೈವ್/ಶಿವಮೊಗ್ಗ

ವೈಯುಕ್ತಿಕ ಕಾರಣಕ್ಕೆ ಪತಿಯಿಂದಲೇ ಪತ್ನಿಯ ಕೊಲೆಯಾಗಿದೆ. ವಾದಿ-ಏ-ಹುದಾ ಎರಡನೇ ಮುಖ್ಯ ರಸ್ತೆ, ಐದನೇ ತಿರುವಿನಲ್ಲಿರುವ ಮನೆಯಲ್ಲಿ ಪತಿಯಿಂದಲೇ ಪತ್ನಿಯ ಕೊಲೆ ನಡೆದಿದೆ. 

ರುಕ್ಸಾನಾ ಎಂಬ 38 ವರ್ಷದ ಮಹಿಳೆಯನ್ನ ಪತಿ ಯೂಸಫ್ ಎಂಬಾತ ಕೊಲೆ ಮಾಡಿದ್ದಾನೆ. ರುಕ್ಸಾನಾ ಮತ್ತು ಪತಿ ಯೂಸಫ್ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ವರಿಗೂ ಮೂವರು ಮಕ್ಕಳಿದ್ದರು. 

ಇಂದು ಯೂಸಫ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವೈಯುಕ್ತಿಕ ಕಾರಣಗಳು ಎಂದು ಹೇಳಲಾದರೂ ಅನೈತಿಕ ಸಂಬಂಧದ ವಾಸನೆಯೂ ಹೊಡೆಯುತ್ತಿದೆ. ಯೂಸಫ್ ಎಸಿ, ಫ್ರಿಡ್ಜ್ ರಿಪೇರಿ ಮಾಡಿಕೊಂಡಿದ್ದನು. 

ಪ್ರಕರಣ ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಯೂಸಫ್ ನನ್ನ ಬಂಧಿಸಲಾಗಿದೆ. 


ಡಿ.12 ರಂದು ಶಿಕಾರಿಪುರದ ರಾಘವೇಂದ್ರ ಬಡಾವಣೆಯಲ್ಲಿ ಪತಿಯಿಂದಲೇ ಪತ್ನಿಯ ಕೊಲೆಯಾಗಿತ್ತು. ಇದಾದ ನಂತರ ಶಿವಮೊಗ್ಗ ಸಿಟಿಯಲ್ಲಿ ಪತಿಯಿಂದ ಪತ್ನಿಯ ಕೊಲೆಯಾಗಿದೆ. 10 ದಿನಗಳಲ್ಲಿ ಇದು ಎರಡನೇ ಕೊಲೆಯಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close