ಸುದ್ದಿಲೈವ್/ಶಿವಮೊಗ್ಗ
ಬಿಜೆಪಿ ಬಣ ರಾಜಕಾರಣವನ್ನ ಶಮನ ಮಾಡಲಾಗುವುದು, ಶಾಸಕ ಯತ್ನಾಳ ಬೇರೆಯಲ್ಲ ಎನ್ನುವ ಮೂಲಕ ಶಿವಮೊಗ್ಗದಲ್ಲಿ ಬಿಎಸ್ ವೈ ಸಾಫ್ಟ್ ಆಗಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಣ ಬಡಿದಾಟದಲ್ಲಿ ಯತ್ನಾಳ್ ಬೇರೆ ರೀತಿ ಮಾತನಾಡುತ್ತಿರಬಹುದು. ಏನೇ ಮಾತನಾಡಿದರು ಕುಳಿತುಕೊಂಡು ಚರ್ಚಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬುದು ನನ್ನದು ಮತ್ತು ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಹಾಗೂ ಸಂಸದ ರಾಘವೇಂದ್ರ ಅವರ ಅಪೇಕ್ಷೆ ಇದೆ. ಅರೊಪ ಮಾಡಿರುವ ಯತ್ನಾಳ್ ಏನು ಹೊರಗಿನವರಲ್ಲ ಎಂದು ಹೇಳಿದ್ದಾರೆ.
ನೀವು ಎಷ್ಟೇ ಸಾಫ್ಟ್ ಆಗಿ ಮಾತನಾಡಿದರೂ ಶಾಸಕ ಯತ್ನಾಳ್ ಅವರು ನಿಮ್ಮ ಹಾಗೂ ನಿಮ್ಮ ಕುಟುಂಬದವರ ವಿರುದ್ಧ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಅವರು ಏನೇ ಮಾತನಾಡಿದರೂ ನಾವು ಒಟ್ಟಾಗಿ ಹೋಗುವ ಬಗ್ಗೆ ಮಾತನಾಡುವುದಾಗಿ ಹೇಳಿರುವುದು ಗಮನಾರ್ಹವಾಗಿದೆ.
ಬೆಳಗಾವಿ ಅಧಿವೇಶನ ಡಿ.9 ರಿಂದ ಆರಂಭವಾಗಲಿದ್ದು ಬಿಜೆಪಿಯ ಎಲ್ಲಾ ಶಾಸಕರು ಭಾಯಾಗಲಿದ್ದಾರೆ. ಯಶಸ್ವಿಯಾಗಿ ಸರ್ಕಾರದ ಹಗರಣದ ಬಗ್ಗೆ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ. ಬಹಳಷ್ಟು ಹಗರಣವಿದೆ. 14 ಸೈಟ್ ಸಾಬೀತಾಗಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ವೈ ಸೈಟ್ ಗಳನ್ನ ವಾಪಾಸ್ ಕೊಟ್ಟ ತಕ್ಷಣ ಆರೋಪ ಬದಲಾಗೊಲ್ಲ. ಇಡಿ ಪುರಾವೆಗಳನ್ನ ಇಟ್ಟುಕೊಂಡು ತನಿಖೆ ನಡೆಸುತ್ತದೆ. ಸೈಟ್ ಹಂಚಿಕೆಯಲ್ಲಿ ಹಗರಣ ನಡೆದಿರುವ ಬಗ್ಗೆ ಎಲ್ಲಿ ಹೋಗಿ ನಿಲ್ಲಲಿದೆ ಕಾದು ನೋಡೋಣ ಎಂದರು.