ಸುದ್ದಿಲೈವ್/ಶಿವಮೊಗ್ಗ
ನಾಳೆ ಹೊಸವರ್ಷದ ಆಚರಣೆಯ ಗುಂಗಿನಲ್ಲಿ ಇಡಿ ಯುವ ಸಮೂಹ ಕಳೆಯುವ ಸಾಧ್ಯತೆಯಿದೆ. ಬಹುತೇಕ ಯುವಕರು ಈ ಸಂಭ್ರಮಾಚರಣೆಯಲ್ಲಿ ಮುಳುಗುವುದರಿಂದ ಪೊಲೀಸ್ ಇಲಾಖೆ ಕೆಲ ಕಟ್ಟೆಚ್ಚರಿಕೆಯನ್ನ ಪಾಲಿಸದಿದ್ದರೆ ಕಷ್ಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ.
ಕಾನೂನು ಸುವ್ಯವಸ್ಥೆ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿರುವ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಕೆಲ ಎಚ್ಚರಿಕೆಯನ್ನ ನೀಡಿದ್ದಾರೆ. ರಾತ್ರಿ 12 ರಿಂದ 1 ಗಂಟೆಯ ವರೆಗೆ ಈ ವರ್ಷಾಚರಣೆಯ ಸಂಭ್ರಮಕ್ಕೆ ಅವಕಾಶವಿದ್ದು 1 ಗಂಟೆಯ ನಂತರವೂ ಮದ್ಯ ಸೇವನೆ ಮಾಡಿ ರಸ್ತೆಯಲ್ಲಿ ಕಂಡು ಬಂದರೆ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಈ ಸಂಬಂಧ ಬಂದೋಬಸ್ತ್ ನ್ನೂ ಸಹ ಮಾಡಿಕೊಳ್ಳಲಾಗಿದೆ. ಕಿಮ್ಮನೆ ರೆಸಾರ್ಟ್, ಕಿಫ್ ಆಂಬೆಸಿ, ಮಲ್ನಾಡ್ ಶೈರ್, ರಾಯಲ್ ಆರ್ಕಿಡ್, ಸಿಟಿ ಕ್ಲಬ್, ಎಲೈಟ್, ಕಾಸ್ಮೋಕ್ಲಬ್, ಕಂಟ್ರಿ ಕ್ಲಬ್, ಗಳಲ್ಲಿ ಹೊಸವರ್ಷ ಆಚರಣೆಗೆ ವ್ಯವಸ್ಥೆ ಮಾಡಿಕೊಂಡಿವೆ. ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಇಲ್ಲಿ ಸೂಚಿಸಲಾಗಿದೆ. ಇಲ್ಲಿ ಎಲ್ಲೆಡೆ ಸಿಸಿ ಟಿವಿ ಫೂಟೇಜ್ ಸಹ ಅಳವಡಿಸಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆಗಾಗಿ 2100 ಪೊಲಿಸ್ ಸಿಬ್ವಂದಿಗಳು, 200 ಹೋಮ್ ಗಾರ್ಡ್, 5 ಕೆಎಸ್ ಆರ್ ಪಿ ಗಳು ತುಕಡಿಗಳನ್ನ ನಿಯೋಜಿಸಲಾಗಿದೆ ಎಂದರು.