ಚಿರಾಗ್ ಎಂಟರ್ ಪ್ರೈಸಸ್ ನ ಮಾಲೀಕರ ವಿರುದ್ಧ ಬಡರೈತನಿಗೆ ಬೆದರಿಕೆ-ದೂರು ದಾಖಲು

 


ಸುದ್ದಿಲೈವ್/ಶಿವಮೊಗ್ಗ

ಗಾರ್ಡನ್ ಏರಿಯಾದಲ್ಲಿರುವ ಚಿರಾಗ್ ಎಂಟರ್ ಪ್ರೈಸಸ್ ನ ಮಾಲೀಕ ದಿನೇಶ್ ಕೊಠಾರಿ, ಪುತ್ರ ಅಭಿಷೇಕ್, ಅಕ್ಷಯ್ ಹಾಗೂ ಅಂಗಡಿ ಎದುರುಗಿನ ಆಟೋ ಹುಡುಗರ ವಿರುದ್ಧ ಬೆದರಿಕೆ, ಸಾಕ್ಷಿನಾಶದ ಯತ್ನ ಮತ್ತು ವಂಚನೆ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಿಕ್ಕೋನಹಳ್ಳಿಯ ನಿವಾಸಿ ಮಹೇಶ್ವರಪ್ಪ ಎಂಬುವರು  ಗ್ರಾಮದ ಸರ್ವೆನಂಬರ್ 4 ರಲ್ಲಿ  3 ಎಕರೆ ಜಮೀನು ಹೊಂದಿದ್ದರು. ಅಲ್ಲಿ ಬೋರ್ ಮತ್ತು ಐಪಿ ಸೆಟ್ ಕೂರಿಸಲು 2024 ನೇ ಇಸವಿಯ ಫೆಬ್ರವರಿಯಲ್ಲಿ ಚಿರಾಗ್ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಸಾಮಾಗ್ರಿಯನ್ನ ಖರೀದಿಸಿದ್ದರು.

ಇದು ಮಾ.23 ರಂದು ಮೋಟಾರು ಸುಟ್ಟುಹೋಗಿದ್ದರಿಂದ ಒಂದುವರ್ಷ  ವಾರಂಟಿ ಮತ್ತು ಗ್ಯಾರೆಂಟಿಯನ್ನ ಹಿಡಿದ ರೈತ ಮಹೇಶ್ವರಪ್ಪ ಸೀದ ಚಿರಾಗ್ ಅಂಗಡಿಗೆ ಬಂದು ಮೋಟಾರ್ ಸುಟ್ಟುಹೋಗಿದೆ ಎಂದಿದ್ದಕ್ಕೆ ಕೊಠಾರಿ ಅಂಡ್ ಸನ್ಸ್ ಒರಿಜಿನಲ್  ಬಿಲ್ ಮತ್ತು ವಾರೆಂಟಿ ತನ್ನಿ ಇದು ನಮ್ಮ ಅಂಗಡಿಯ ಬಿಲ್ ಅಲ್ಲ ಎಂದಿದ್ದಾರೆ.

ಮಾತಿಗೆ ಮಾತು ಬೆಳೆದಿದ್ದು ಬಡರೈತನ ಮೇಲೆ  ಕೊಲೆ ಬೆದರಿಕೆ ಹಾಕಲಾಗಿದೆ. 20 ಲಕ್ಷ ರೂ ಖರ್ಚಾದರೂ ಪರವಾಗಿಲ್ಲ ನಿನ್ನ ತಲೆ ಉರುಳಿಸುವುದಾಗಿ ಧಮ್ಕಿಹಾಕಿದ್ದು, ಬಲ್ ಮತ್ತು ವಾಟೆಂಟಿಯನ್ನ ಹರಿದುಹಾಕಲು ಮುಂದಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎದುರಿನ ಆಟೋ ಹಯಡುಗರನ್ನ ಕರೆಯಿಸಿ ಅವರಿಂದಲೂ ಬೆದರಿಕೆ ಹಾಕಿ ವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close