ಸುದ್ದಿಲೈವ್/ಶಿವಮೊಗ್ಗ
ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಊಟ ಮತ್ತು ಮೂಲಭೂತ ಸೌಕರ್ಯ ನೀಡಲು ಸಾರ್ಸ್ ಸಂಸ್ಥೆಯ ಮೂಲಕ ಅಕ್ಕಿ ನೀಡಲು ಇಂದು ಮುಷ್ಠಿ ಅಕ್ಕಿ ಹಾಗೂ ಇತರೆ ಸಾಮಾಗ್ರಗಳ ಸಂಗ್ರಹಕ್ಕೆ ಆದಿಚುಂಚನಗಿರಿ ಮಠದ ಶ್ರೀಸಾಯಿನಾಥ ಸ್ವಾಮೀಜಿ ಚಾಲನೆ ನೀಡಿದರು.
ಪ್ರತಿ ಮನೆಯಿಂದ ಮುಷ್ಠಿ ಅಕ್ಕಿ ಮತ್ತು ಇತರೆ ಸಾಮಾಗ್ರಿಗಳ ಸಂಗ್ರಹಕ್ಕೆ ವಾಹನಗಳು ಆಗಮಿಸಲಿದ್ದು, ವಾಹನಗಳ ಮೂಲಕ ದಿನಸಿಗಳನ್ನ ಸಂಗ್ರಹಿಸಿ ಡಿ.24 ರಂದು ವಿನೋಬ ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ಮೂಲಕ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂಗೆ ಕಳುಹಿಸಿ ಕೊಡಲಾಗುವುದು.
ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಶಿವಮೊಗ್ಗ ನಗರ ಘಟಕದಿಂದ ನಡೆಯುವ ಈ ಅಭಿಯಾನ ಇಂದಿನಿಂದ ಡಿ.23ರವರೆಗೆ ನಡೆಯಲಿದೆ. 6 ವಾಹನಗಳಲ್ಲಿ ಹೊರಡುವ ಪ್ರತಿದಿನ 6 ವಾರ್ಡ್ ಗಳಲ್ಲಿ ದಿನಸಿ ಸಾಮಾಗ್ರಿಗಳ ಸಂಗ್ರಹ ನಡೆಯಲಿದೆ.
ಈ ವೇಳೆ ಪುತ್ರ ಕಾಂತೇಶ್, ಇ.ವಿಶ್ವಾಸ್ ಮೊದಲಾದ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಉಪಸ್ಥಿತರಿದ್ದರು.
ಈಶ್ವರಪ್ಪನವರ ಮಾತು
ನಂತರ ಮಾಧ್ಯಮಗಳಿಗೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ನಾಲ್ಕು ವರ್ಷಗಳಲ್ಲಿ ಪ್ರತಿವರ್ಷ ಎರಡು ಲೋಡುಗಳಷ್ಟು ದಿನಸಿಯನ್ನ ಸಂಗ್ರಹಿಸಿ ಸಾಸ್ ಗೆ ಕಳುಹಿಸಲಾಗಿದೆ. ಫೆ.4 ರಂದು ಬಸವನಬಾಗೇವಾಡಿಯಲ್ಲಿ 1008 ಜನ ಸಾಧು ಸಂತರ ಪಾದಗಳನ್ನ ತೊಳೆಯುವ ಮೂಲಕ ಕ್ರಾಂತಿವೀರ ಬ್ರಿಗೇಡ್ ಆರಂಭಿಸಲಾಗುವುದು, ಅಂಲ್ಲಿಂದ ಧರ್ಮದ ಕೆಲಸ, ಹಿಂದೂಗಳ ಸಂಘಟನೆ, ದಲಿತರ ಕೆಲಸಗಳು ನಡೆಯಲಿದೆ ಎಂದರು.
ಒಂದು ದೇಶ ಒಂದು ಚುನಾವಣೆ ಸೂಕ್ತವಾಗಿದೆ
ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಬಿಲ್ ಪಾಸ್ ಆಗಲಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಚುನಾವಣೆಯ ಬಗ್ಗೆ ಆಗುವ ಸಮಯ ವ್ಯರ್ತ ಹಾಗೂ ಆರ್ಥಿಕ ಹೊರೆಯನ್ನ ಇಳಿಸಲಿದೆ. ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. 1989 ರಲ್ಲಿ ಮೊದಲಬಾರಿಗೆ ನಾನು ಶಾಸಕನಾದಾಗ ಎಂಪಿಯಾಗಿ ಆನಂದ ರಾವ್ ಆಯ್ಕೆಯಾಗಿದ್ದರು. ಆಗೆ ಶಾಸಕ ಮತ್ತು ಸಂಸತ್ ರ ಚುನಾವಣೆ ಏಖಾಲದಲ್ಲಿ ನಡೆದಿತ್ತು. ಹೊರೆಯನ್ನ ಕಡಿಮೆ ಮಾಡಲಾಗಿತ್ತು ಎಂದರು.