ನಕಲಿ ಮರಣ ಪತ್ರ ಸೃಷ್ಠಿಸಿ ಆಶ್ರಯ ಬಡಾವಣೆ ನಿವೇಶ ಹಂಚಿಕೆ-ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲು



ಸುದ್ದಿಲೈವ್/ಶಿವಮೊಗ್ಗ

ಆಶ್ರಯ ಬಡಾವಣೆಯ ಸಿ ಬ್ಲಾಕ್ ನಲ್ಲಿದ್ದ 20×30 ಸುತ್ತಳತೆಯ ನಿವೇಶನವನ್ನ ಮಹಿಳೆಯ ನಕಲಿ ಪ್ರಮಾಣ ಪತ್ರ ಸೃಷ್ಠಿಸಿ ನೋದಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರ್ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಈ ರೀತಿಯ ಎಫ್ಐಆರ್ ಮೊದಲು ಸಹ ಪಾಲಿಕೆ ಅಧಿಕಾರಿಗಳ ವಿರುದ್ಧ ಬೇರೆ ಬೇರೆ ಪ್ರಕರಣದಲ್ಲಿ ದಾಖಲಾಗಿತ್ತು. ಆದರೆ ಯಾವ ಕ್ರಮ ಜರುಗಿರುವುದು ಸಹ ಕೇಳಿ ಬಂದಿಲ್ಲ. ಈ ಬಾರಿ ಏನಾದರೂ ಕ್ರಮ ಜರುಗುತ್ತಾ ಎಂಬುದು ಕಾದು ನೋಡಬೇಕಿದೆ. 

ಈಶ್ವರ್ ಮತ್ತು ಅವರ ಪತ್ನಿಯಾದ ಸುಧಾರಾಣಿಯವರರ ಹೆಸರಿನಲ್ಲಿ ಶಿವಮೊಗ್ಗ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ "ಸಿ" ಬಾಕ್ ನಲ್ಲಿ., ನಿವೇಶನ ಸಂಖ್ಯೆ 579 ರಲ್ಲಿ 20x30 ಅಡಿ ಅಳತೆಯ ನಿವೇಶನ ಮಂಜೂರಾಗಿದೆ. 

ಸುಧಾರಾಣಿಯವರ ಪತಿ ಈಶ್ವರ್ ಹೆಸರಿನಲ್ಲಿಯೇ ಯಾರೋ ಬೇರೆಯೊಬ್ಬ ಈಶ್ವರ ಎಂಬುವವನು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಸುಧಾರಾಣಿ ರವರ ನಕಲಿ ಮರಣ ಪತ್ರವನ್ನು ಸೃಷ್ಟಿಸಿ ಮಹಾನಗರ ಪಾಲಿಕೆಯಿಂದ ಈಶ್ವರ ರವರ ಹೆಸರಿಗೆ ಸಿಂಗಲ್ ಖಾತೆ ಮಾಡಿಸಿಕೊಂಡು 579 ರ ನಿವೇಶನವನ್ನು  ಬೆಳ್ಳಿಯಮ್ಮ ಕೋಂ ಶರವಣ ಎಂಬುವವರಿಗೆ ಮಾರಾಟ ಮಾಡಿದ್ದಾರೆ.

ಇದು ಸಬ್ ರಿಜಿಸ್ಟ್ರಾ‌ರ್ ಕಛೇರಿಯಲಿ. ರಿಜಿಸ್ಟರ್ ಮಾಡಿಸಿ  ವೆಳ್ಳಿಯಮ್ಮ ರವರ ಹೆಸರಿಗೆ ಕ್ರಯ ಪತ್ರ ಮಾಡಲಾಗಿದೆ. ಸುಧಾರಾಣಿಯವರ ನಕಲಿ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ಮಹಾನಗರ ಪಾಲಿಕೆಯಲಿ ಖಾತೆ ಮಾಡಿಸಿ ಸಬ್ ರಿಜಿಸ್ಟ್ರಾರ್ ಕಛೇರಿಯಲಿ ಕ್ರಯ ಪತ್ರ ಮಾಡಿಸಿದ ಈಶ್ವರ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close