ಬೆಳ್ಳಂಬೆಳಿಗ್ಗೆ ಕಂದ್ಲಿ ಬೀಸಿ ಪತ್ನಿಯ ಕೊಲೆ

 


ಸುದ್ದಿಲೈವ್/ಶಿಕಾರಿಪುರ

ಬೆಳ್ಳಂಬೆಳಿಗ್ಗೆ ಪತ್ನಿಯನ್ನ ಕಂದ್ಲಿ ಬೀಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.

ಶಿಕಾರಿಪುರದ ಟೌನ್ ನ ರಾಘವೇಂದ್ರ ಬಡಾವಣೆಯಲ್ಲಿ ನಾಗರಾಜ್ ಎಂಬ 45 ವರ್ಷದ ವ್ಯಕ್ತಿ ಪತ್ನಿ ರೇಣುಕಾ(40) ಎಂಬಾಕೆಯನ್ನ  ಕಂದ್ಲಿಯಿಂದ ಕೊಲೆ ಮಾಡಿದ್ದಾನೆ.

ರಾತ್ರಿ ಇಡೀ ಜಗಳವಾಡಿರುವ ದಂಪತಿಗಳು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಪತ್ನಿಯನ್ನ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಧಾವಿಸಿದ ಶಿಕಾರಿಪುರ ಪೊಲೀಸರಿಗೆ ಮೃತ ರೇಣುಕಾಳ ಶವ ಮನೆಯ ಹೊರಭಾಗದಲ್ಲಿ ಪತ್ತೆಯಾಗಿದೆ.

ಕೊಲೆಗೆ ಮಾಹಿತಿಗಳು ಇನ್ನಷ್ಟು ತಿಳಿದು ಬರಬೇಕಿದೆ. ಮಾಹಿತಿಯ ಪ್ರಕಾರ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಜಗಳ ನಡೆದಿದ್ದು ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ನಾಗರಾಜ್ ಪ್ಯಾಸೆಂಜರ್ ಆಟೋ ಓಡಿಸಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಶಿಕಾರಿಪುರ ಟೌನ್ ಪೊಲೀಸರು ಕೊಲೆ ಆರೋಪಿಯನ್ನ ಬಂಧಿಸಿರುವುದಾಗಿ ತಿಳಿದು ಬಂದಿದೆ. 

ಆರೋಪಿ ನಾಗರಾಜ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close