ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಯಡವಟ್ಟು ಭಾಷಣ ಮಾಡಿದ್ದಾರೆ. ಗಾಂಧಿಜೀ ಕೊಂದಿದ್ದು ಸಾವರ್ಕರ್ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಂದು ಗೊಂದಲದ ಭಾಷಣ ಮಾಡಿರುವುದಾಗಿ ವಿಡಿಯೋದಲ್ಲಿ ಸೆರೆಯಾಗಿದೆ.
ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಪರಿಷತ್ತು ಸದಸ್ಯ ಆರ್ ಪ್ರಸನ್ನಕುಮಾರ್ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಯಡವಟ್ಟಾದ ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾ ಭಾಷಣದ ವೇಳೆ ಬಾಯಿತ್ತಪ್ಪಿ ಗಾಂಧಿಜೀ ಕೊಂದಿದ್ದು ಸಾವರ್ಕರ್ ಎಂದು ಹೇಳಿದ್ದಾರೆ. ಬಿಜೆಪಿಯವರು ಹಾಗೂ ಆರ್ ಎಸ್ ಎಸ್ ನವರಿಗೆ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಕಂಡರೇ ಆಗುವುದಿಲ್ಲ.ಮಹಾತ್ಮ ಗಾಂಧಿ ಗಾಂಧಿಯವರನ್ನು ವಿರೋಧ ಮಾಡುತ್ತಲೇ ಬಂದವರು.
ಗಾಂಧಿಜೀಯವರನ್ನು ಕೊಂದಂತ ಸಾವರ್ಕರ್ ಅವರನ್ನು ಪೂಜೆ ಮಾಡುವವರು ಎಂದು ಹೇಳಿಕೆ ನೀಡಿ, ನಂತರ ಹೇಳಿಕೆಯನ್ನ ಜಿಲ್ಲಾಧ್ಯಕ್ಷರು ಬದಲಾಯಿಸಿದ ಘಟನೆಯೂ ನಡೆದಿದೆ.