ರಸ್ತೆ ಅಪಘಾತ, ಖಾಸಗಿ ಸಂಸ್ಥೆಯ ಇಂಜಿನಿಯರ್ ಸಾವು

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯ‌ ವ್ಯಪ್ತಿಯಲ್ಲಿ ರಸ್ತೆಅಪಘಾತ ನಡೆದಿದ್ದು, ಅಪಘಾತದಲ್ಲಿ ವ್ಯಾಗನರ್ ಕಾರ್ ನಲ್ಲಿದ್ದ ಖಾಸಗಿ ಸಂಸ್ಥೆಯ ನಿವೃತ್ತ ಇಂಜಿನಿಯರ್ ಸಾವುಕಂಡಿದ್ದಾರೆ.

ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ ಹಾಗೂ ವಿಜ್ಷನಾ ಇಂಡಸ್ಟ್ರೀಸ್ ನ ನಿವೃತ್ತ ಸಹಾಯಕ ಇಂಜಿನಿಯರ್ ನಾಗರಾಜ್ ಎಂಬ 66 ವರ್ಷದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಅವರ ಪತ್ನಿ ಮತ್ತು ಮಗನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನ‌ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಶಿವಮೊಗ್ಗದ ಗಾಡಿಕೊಪ್ಪದಿಂದ ಸಾಗರದ ವಿಟ್ಲಿಕೊಪ್ಪದಲ್ಲಿದ್ದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ವಾಪಾಸ್ ಬರುವಾಗ ಆಯನೂರಿನ ದೊಡ್ಡದಾನವಂದಿ ಕ್ರಾಸ್ ಬಳಿ ಅಡ್ಡದಿಡ್ಡವಾಗಿ ಬರುತ್ತಿದ್ದ ಗೂಡ್ಸ್ ವಾಹನವನ್ನ ತಪ್ಪಿಸುವ ಸಲುವಾಗಿ ವ್ಯಾಗನರ್ ವಾಹನವನ್ನ ಎಡಕ್ಕ ತಿರುಗಿಸಿದ್ದಾರೆ.

ಎಡಗಡೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿಹೊಡೆದು ರಸ್ತೆಯ ಮೇಲೆ ಪಲ್ಟಿ ಹೊಡೆದು ನಿಂತಿದೆ. ನಾಗರಾಜ್ ಅವರೇ ಕೆಎ 05 ಎಂಹೆಚ್ 1472  ಕ್ರಮಸಂಖ್ಯೆಯ ವ್ಯಾಗನರ್ ವಾಹನವನ್ನ ಚಲಿಸುತ್ತಿದ್ದು ಅಪಘಾತದಲ್ಲಿ ತೀವ್ರಗಾಯಗೊಂಡಿದ್ದರು. ವಾಹನದಲ್ಲಿ ಪತ್ನಿ ಮತ್ತು ಮಗ ಇದ್ದು ಅವರಿಗೆ ಗಾಯಗಳಾಗಿವೆ.

ತಕ್ಷಣವೇ ಅವರನ್ನ ಮೆಗ್ಗಾನ್ ಗೆ ಸೇರಿಸಲಾಗಿದೆ. ನಾಗರಾಜ್ ಅವರನ್ನ ಪರಿಶೀಲಿಸಿದ ವೈದ್ಯರು ಅವರ ಸಾವನ್ನ ಖಚಿತ ಪಡಿಸಿದ್ದಾರೆ. ಪತ್ನಿ ಮತ್ತು ಮಗನನ್ನ ಮೆಗ್ಗಾನ್ ನಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಈ ಘಟನೆ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close