ಚಾಲಕನ ಆರೋಗ್ಯದಲ್ಲಿ ಏರು ಪೇರು, ಡಿವೈಡರ್ ಮೇಲೆ ನಿಂತ ಓಮಿನಿ

 ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಮಾರುತಿ ಒಮಿನಿ ವಾಹನವೊಂದು ಡಿವೈಡರ್ ಹತ್ತಿ ನಿಂತಿದೆ. ಅದೃಷ್ಟವಶಾತ್  ವಾಹನದಲ್ಲಿರುವ ಶಾಲಾ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ.

ಶಾಲಾ ಮಕ್ಕಳನ್ನ ಹೊತ್ತು ಆಲ್ಕೊಳವೃತ್ತದ ಕಡೆ ಚಲಿಸುತ್ತಿದ್ದ ಶಾಲಾ ವಾಹನದ ಚಾಲಕ ಮೆಗ್ಗಾನ್ ಪ್ರವೇಶ ದ್ವಾರದ ಬಳಿ ಡಿವೈಡರ್ ಮೇಲೆ ಹತ್ತಿಸಿದ್ದಾರೆ. ಚಾಲಕನಿಗೆ ಲೋಬಿಪಿ ಕಾಣುಸಿಕೊಂಡ ಪರಿಣಾಮ ಡಿವೈಡರ್ ಮಧ್ಯದಲ್ಲಿ ವಾಹನವನ್ನ ಚಲಾಯಿಸಿರುವುದಾಗಿ ತಿಳಿದು ಬಂದಿದೆ.

ಚಾಲಕನ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ವಾಹನದ ನಾಲ್ಕು ಚಕ್ರದ ಮಧ್ಯೆ ಡಿವೈಡರ್  ನುಸುಳಿದಂತಾಗಿದೆ. 


ಅದರಂತೆ ಸವಳಂಗ ರಸ್ತೆ ಸರ್ಜಿ ಕನ್ವೆಷನಲ್ ಹಾಲ್ ಬಳಿ ಲಾರಿ ಮತ್ತು ಕಾರು ನಡುವೆ ಡಿಕ್ಕಿ ಉಂಟಾಗಿದೆ. ಕಾರು ನುಜ್ಜುಗುಜ್ಜಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close