ಕಾಂಗ್ರೆಸ್ ಕಚೇರಿ ಮುತ್ತಿಗೆ ವಿಫಲ ಯತ್ನ, ರಾಹುಲ್ ಗಾಂಧಿ ಮತ್ತು ಅಮಿತ್ ಶಾ ವಿರುದ್ಧ ಘೋಷಣೆ

 


ಸುದ್ದಿಲೈವ್ /ಶಿವಮೊಗ್ಗ

ನಗರದ ಗೋಪಿ ವೃತ್ತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಡ್ರಾಮಾ ಹೈಡ್ರಾಮ ನಡೆದಿದೆ. ಒಂದು ಕಡೆ ಬಿಜೆಪಿ ಪಕ್ಷದ ನಗರ ಘಟಕದ ಕೆಲ ಯುವಕರು ಕಾಂಗ್ರೆಸ್ ಕಚೇರಿಗೆ  ಮುತ್ತಿಗೆ ಹಾಕಲು ಯತ್ನಿಸಿದ್ದು ಅವರನ್ನ ಪೊಲೀಸರು ಗೋಪಿ ವೃತ್ತದ ಬಳಿ ತಡೆದು ವಶಕ್ಕೆ ಪಡೆದರು.

ಪೊಲೀಸ್ ವಾಹನದಲ್ಲಿ ಕಾಂಗ್ರೆಸ್ ಕಚೇರಿ ಎದುರು ವಶಕ್ಕೆಪಡೆದ ಬಿಜೆಪಿ ಪಕ್ಷದ ಕಾರ್ಯಕರ್ತರನ್ನ ವಶಕ್ಕೆ ಪಡೆದು ವಾಹನದಲ್ಲಿ ಸಾಗಿಸುವಾಗ ಕಾಂಗ್ರೆಸ್ ಕಚೇರಿಗೆ ತೆರಳುವಾಗ ಕಾಂಗ್ರೆಸ್ ಕಾರಗಯಕರ್ತರುಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು.

ದೆಹಲಿಯಲ್ಲಿ ಸದನದ ಹೊರಗೆ ಬಿಜೆಪಿ ಸಂಸದರೊಬ್ಬರನ್ನ ರಾಹುಲ್ ಗಾಂಧಿ ತಳ್ಳಿದ ಆರೋಪದ ಮೇರೆಗೆ ಗಲಾಟೆಯಾಗಿತ್ತು. ರಾಹುಲ್ ಗಾಂಧಿ ಅವರ ನಡವಳಿಕೆಯನ್ನ ಖಂಡಿಸಿ ಬಿಜೆಪಿ ನಗರ ಘಟಕ ಮಹಾವೀರ ವೃತ್ತದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿತು.

ಈ ವೇಳೆ ಪೊಲೀಸರು ಅವರನ್ನ ವಶಕ್ಕೆ ಪಡೆದು ವಾಹನದಲ್ಲಿ ಕೂರಿಸಿಕೊಂಡು ಹೋಗಲಾಯಿತು. ಈ ವೇಳೆ ರಾಹುಲ್ ಗೂಂಡಾರನ್ನ ಬಂಧಿಸುವಮತೆ ಘೋಷಣೆ ಕೂಗಲಾಯಿತು.


ಬಾಲರಾಜ ಅರಸ್ ರಸ್ತೆಯ ಮೂಲಕ ಕರೆದುಕೊಂಡು ಹೋಗುವಾಗ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ಅಮಿತ್ ಶಾರನ್ನ ಬಂಧಿಸುವಂತೆ ಘೋಷಣೆ ಕೂಗಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close