ಸುದ್ದಿಲೈವ್/ಶಿವಮೊಗ್ಗ
ಜ.7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾಕಾರ್ಯಕರ್ತರ ಅನಿರ್ದಿಷ್ಟಿತ ಹೋರಾಟದ ಹಿನ್ನಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಹೋರಾಟಕ್ಕೆ ಎಯುಟಿಐ ಸಾಂಕೇತಿಕ ಪ್ರತಿಭಟನೆಗೆ ಇಳಿದಿದೆ.
ನಗರದ ನೆಹರೂ ಸ್ಟೇಡಿಯಂನಿಂದ ಹೊರಟ ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ 15000 ಮಾಸಿಕ ಗೌರವಧನ ನೀಡಬೇಕು, ನಗರ ಆಶಾ ಕಾರ್ಯಕರ್ತೆಯರ 2 ಸಾವಿರ ಗೌರವಧನ ಹೆಚ್ಚಿಸಬೇಕು. ಪಶ್ಚಿಮ ಬಂಗಾಳದಲ್ಲಿರುವವಂತೆ ಆಶಾಕಾರ್ಯಕರ್ತರ ನಿವೃತ್ತಿಹೊಂದುವವರಿಗೆ 5 ಲಕ್ಷ ರೂ ನೀಡಬೇಕು.
ನಿಶ್ಚಿತ ಗೌರವಧನ, ನಿಗದಿತ ಪ್ರೋತ್ಸಾಹಧನ, ಆಶಾಕಾರ್ಯಕರ್ತರೆಯರಿಗೆ ಅನಾಹುತಗಳು ಸಂಭವಿಸಿದರೆ ಇಲಾಖೆಗಳೆ ಸಂಪೂರ್ಣ ಜವಬ್ದಾರಿಯನ್ನ ವಹಿಸಿಕೊಳ್ಳಬೇಕು. ಎರಡು ಮೂರು ತಿಂಗಳು ಬಾಕಿಯಿರುವ ಕಾರ್ಯಕರ್ತೆಯರ ಗೌರವಧನವನ್ನ ಕೂಡಲೆ ಬಿಡುಗಡೆ ಮಾಡಬೇಕು.
ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರದಂತೆ, ಮೊಬೈಲ್ ನಲ್ಲಿ ಕೆಲಸ ಬಾರದವರಿಗೆ ಪರ್ಯಾಯ ವ್ಯವಸ್ಥೆಕಲ್ಪಿಸಿ, ಮೊಬೈಲ್ ಡಾಟಾ, ಪ್ರೋತ್ಸಾಹಧನ ನೀಡಬೇಕು. ಆಶಾ ಕಾರ್ಯಕರ್ತರದ್ದಲ್ಲದ ಕೆಲಸಗಳಿಗೆ ಬ್ರೇಕ್ ಹಾಕಬೇಕು. ಕಾರ್ಯಕರ್ತೆಯರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಬೇಕು.
ತೀವ್ರ ಕಾಯಿಲೆಗಳಿದ್ದಲ್ಲಿ ಕೂಡಲೆ ಉಚಿತ ಚಿಕಿತ್ಸೆ ಮಾಡಬೇಕು. ಆಶಾ ಸುಮಗಕಾರರಿಗೆ 7500 ರೂ. ಗೌರವಧನ ನಿಗದಿ ಪಡಿಸಬೇಕು. ಅವರ ಗೌರವಧನವನ್ನ ಕೂಡಲೇ ಬಿಡುಗಡೆ ಮಾಡಬೇಕು. ಕಾರ್ಯಕರ್ತೆಯರನ್ನ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠವೇತನ, ಗ್ರಾಜ್ಯುಟಿ, ಪಿಎಫ್ ಇಎಸ್ಐ ಸೌಲಭ್ಯ ನೀಡುವಂತೆ ಆಗ್ರಹಿಸಲಾಯಿತು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ರಾಜೇಶ್ವರಿ, ಜಿಲ್ಲಾ ಸಂಚಾಲಕರಾದ ಸುಬ್ಬರಾಜು, ಸರಸ್ವತಿ, ರೇಣುಕಾ, ಚಂದ್ರಕಲಾ, ಪೂರ್ಣಿಮಾ, ಪ್ರೇಮಾ ನಾಗರತ್ನ ತಾಲೂಕು ಕಾರ್ಯಕರ್ತರು ಭಾಗಿಯಾಗಿದ್ದರು.