ಆಂಜನೇಯ ಸ್ವಾಮಿಗೆ ಈಡಗಾಯಿ ಮತ್ತು ವಿಶೇಷ ಪೂಜೆ

 


ಸುದ್ದಿಲೈವ್/ಶಿವಮೊಗ್ಗ

ನಗರದ ಜ್ಯೂವೆಲ್ ರಾಕ್ ರಸ್ತೆಯಲ್ಲಿರುವ ಪಂಚಮುಖಿ ದೇವಸ್ಥಾನದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರ(ದೇವಿ) ಅವರ ನೇತೃತ್ವದಲ್ಲಿಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆ ಮತ್ತು ಈಡಗಾಯಿ ಒಡಯುವ ಕಾರ್ಯಕ್ರಮ ಜರುಗಿತು. 

ನಟ ಶಿವರಾಜ್ ಕುಮಾರ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ತೆರಳುತ್ತಿದ್ದು ಅವರ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಆರೈಸಿ ಇಂದು ದೇವೇಂದ್ರಪ್ಪನವರ ನೇತೃತ್ವದಲ್ಲಿ ಅಭಿಮಾನಿಗಳು ದೇವರಿಗೆ ಪೂಜೆ ಮತ್ತು ಈಡಗಾಯಿ ಒಡೆಯಲಾಯಿತು. 

ಈ ವೇಳೆ ಮಾತನಾಡಿದ ದೇವೇಂದ್ರಪ್ಪ, ಆರೋಗ್ಯದಲ್ಲಿ ಏರು ಪೇರಾಗಿರುವ ನಟ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಅವರ ಆದಷ್ಟುಬೇಗ ಗುಣಮುಖರಾಗಿ ರಾಜ್ಯಕ್ಕೆ ವಾಪಾಸ್ ಬರಲಿದ್ದಾರೆ. ಸಂಜೀವಿನಿ ದೇವರಾದ ಜನೇಯನಿಗೆ ಈನಿಟ್ಟಿನಲ್ಲಿ ಪುಜೆ ಮತ್ತು ಈಡಗಾಯಿ ಒಡೆಯಲಾಯಿತು ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close