ಸುದ್ದಿಲೈವ್/ಶಿವಮೊಗ್ಗ
ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಿಧಿಗೆ ಹೋಬಳಿ ಹಸೂಡಿ ಗ್ರಾಮದ ಸರ್ವೆ ನಂಬರ್ 135 ರಲ್ಲಿರುವ ಸಣ್ಣ ರೈತರ ಬಗರ್ ಹುಕುಂ ಅರ್ಜಿಗಳಿಗೆ ಸಾಗುವಳಿ ಚೀಟಿ ಕೊಡಿಸುವಂತೆ 94 ಡಿ ಅಡಿ ಅರ್ಜಿಸಲ್ಲಿಸಿದವರ ಹಕ್ಕುಪತ್ರ ವಿಲೆ ಆಗದೆ ತಹಶೀಲ್ದಾರ್ ಕಚೇರಿಯಲ್ಲಿದ್ದು ತಕ್ಷಣವೇ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಕಾಧ್ಯಕ್ಷ ಕೆ ಸಂಜಯ್ ಕುಮಾರ್, ಕಾರ್ಯಾಧ್ಯಕ್ಷ ಕೆ.ಸುಂದರ್, ಕಾರ್ಯದರ್ಶಿ ಆರ್ಮುಗಂ, ಖಜಾಂಚಿ ಗೋಪಿ, ಸಂಚಾಲಕ ಪ್ರಕಾಶ್ ಹುಣಸವಳ್ಳಿ ಮೊದಲಾದವರು ಉಪಸ್ಥಿತರಿದ್ದರು.