ಸುದ್ದಿಲೈವ್/ಭದ್ರಾವತಿ
ನಿನ್ನೆ ಜಿಮ್ ಗೆ ಆಯುಧ ಹಿಡಿದುಕೊಂಡು ಬಂದ ಪ್ರಕರಣ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಶಾರದಾ ಅಪ್ಪಾಜಿ ಗೌಡರ ಪುತ್ರ ಅಜಿತ್ ಗೌಡರ ಪೋಸ್ಟ್ ಪೊಲೀಸ್ ಇಲಾಖೆಯನ್ನೇ ಪ್ರಶ್ನಿಸುತ್ತಿದೆ.
ಕಾಂಗ್ರೆಸ್ ಏಜೆಂಟ್ರಂತೆ ವರ್ತಿಸುತ್ತಿರುವ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು, ಭದ್ರಾವತಿಯಲ್ಲಿ ಮುಂದುವರೆದ ಕಾಂಗ್ರೆಸ್ ಕಾರ್ಯಕರ್ತರ ಅಟ್ಟಹಾಸ ಎಂದು ಪೋಸ್ಟ್ ಮಾಡಿರುವ ಅಜಿತ್ ಗೌಡರು ಹ್ಯಾಶ್ ಟ್ಯಾಗ್ ಬಳಸಿ 'ಸೇವ್ ಭದ್ರಾವತಿ' ಯೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದು ಸಂಚಲನ ಉಂಟು ಮಾಡಿದೆ.
ಕೊಲೆ ಮಾಡಲು ಬಂದವರಿಗೂ Half Murder Case.. ಹಲ್ಲೆ ಮಾಡಿಸ್ಕೊಂಡವರಿಗೂ Half Murder Case #saveBhadravathi ಇನ್ನು ಮುಂದೆ ಪೊಲೀಸ್ ಸ್ಟೇಷನ್ ಕಾಂಗ್ರೆಸ್ ಅಧಿಕೃತ ಕಛೇರಿ ಆಗುತ್ತಾ? ಎಂದು ಅಜಿತ್ ಗೌಡರು ಪೋಸ್ಟ್ ಮಾಡಿದ್ದಾರೆ.
ಜೊತೆಗೆ ನಿನ್ನೆ ಭದ್ರಾವತಿಯ ಫಿಟ್ ನೆಸ್ ಜಿಮ್ ನಲ್ಲಿ ಆಯುಧ ಹಿಡಿದುಕೊಂಡು ಜೋಯೆಲ್ ನನ್ನ ಹುಡುಕಿಕೊಂಡು ಬಂದ ವಿಡಿಯೋವನ್ನ ಹರಿಬಿಟ್ಟಿದ್ದಾರೆ. ಮಾಹಿತಿ ಪ್ರಕಾರ ಜೋಯೆಲ್ ಈ ಮೊದಲು ಕಾಂಗ್ರೆಸ್ ನಲ್ಲಿದ್ದು ಈಗ ಬಿಜೆಪಿ ಸೇರಿಕೊಂಡಿದ್ದರು. ಜೋಯೆಲ್ ಮತ್ತು ವಿಶ್ವಯಾನೆ ಮುದ್ದೆಯ ಬಡಿದಾಡಿಕೊಂಡಿದ್ದು ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇತ್ತೀಚೆಗೆ ಇಸ್ಪೀಟ್ ಆಟವಾಡಿಸಿದ್ದ ವಿಶ್ವನ ವಿರುದ್ಧ ಜೋಯೆಲ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ ಎಂಬ ಕಾರಣಕ್ಕೆ ಜಿಮ್ ನಲ್ಲಿದ್ದ ಜೋಯೆಲ್ ನ್ನ ವಿಶ್ವನ ಗ್ಯಾಂಗ್ ಹುಡುಕೊಂಡು ಬಂದಿದೆ ಎಂಬುದು ಜೋಯೆಲ್ ನ ಎಫ್ಐಆರ್ ನಿಂದ ತಿಳಿದು ಬಂದಿದೆ. ಆದರೆ ಇದಕ್ಕೆ ಪ್ರತಿಯಾಗಿ ಮಧುಕುಮಾರ್ ಜೋಯೆಲ್, ವಿಯನ, ಯೋಗಿ, ರಾಖಿ, ಜಾನಿ ಮತ್ತು ಇತರರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ.
ಜೋಯೆಲ್ ಮತ್ತು ಇತರರ ಮೇಲೂ 307 ಸೆಕ್ಷನ್ ಬಿದ್ದ ಪರಿಣಾಮ ಅಜಿತ್ ಗೌಡರು ಈ ರೀತಿ ಪೋಸ್ಟ್ ಮಾಡಿದ್ದಾರೆ.