ಸುದ್ದಿಲೈವ್/ಶಿವಮೊಗ್ಗ
ಇ-ಖಾತೆ ಮಾಡಿಕೊಡಲು ರೂ. 5000/-ಗಳ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕು, ಇಂಡುವಳ್ಳಿ ಗ್ರಾ.ಪಂ. ಯ ಪ್ರಭಾರ ಪಿಡಿಓ ಈಶ್ವರಪ್ಪರವನ್ನು ಟ್ರ‍್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಅಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬAಧ ವಶಕ್ಕೆ ಪಡೆದ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ರವರು ಪ್ರಕರಣದ ತನಿಖೆಯನ್ನು ಕೈಗೊಂಡಿರುತ್ತಾರೆ.
ಮಹಮ್ಮದ್ ಗೌಸ್ ರವರ ತಂದೆ ಭಾಷಾ ಸಾಬ್‌ನವರು ಇಂಡುವಳ್ಳಿ ಗ್ರಾಮದಲ್ಲಿ ಜಮೀನನ್ನು ಹೊಂದಿದ್ದು, ಅದರಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿರುತ್ತಾರೆ. ಆ ಮನೆಯ ಮೇಲೆ ಲೋನ್ ತೆಗೆದುಕೊಳ್ಳುವ ಸಂಬAಧ, ಮನೆ ಇರುವ ಜಾಗವನ್ನು ತನ್ನ ತಾಯಿ ಶ್ರೀಮತಿ ಮಮ್ರಾಜ್ ರವರ ಹೆಸರಿನಲ್ಲಿ ಈ-ಖಾತಾ ಮಾಡಿಕೊಡುವಂತೆ ಇಂಡುವಳ್ಳಿ ಗ್ರಾಮ ಪಂಚಾಯ್ತಿಗೆ ಅರ್ಜಿಯನ್ನು ಸಲ್ಲಿಸಿದ್ದು, ಇಂಡುವಳ್ಳಿ ಗ್ರಾಮದ ಪ್ರಭಾರ ಪಿಡಿಓ ರವರಾದ ಈಶ್ವರಪ್ಪ ರವರು ಮನೆ ಜಾಗಕ್ಕೆ ಬಂದು. ಅಳತೆ ಮಾಡಿಕೊಂಡು ಹೋಗಿದ್ದು, ಈ-ಖಾತಾ ಕೊಡುವಂತೆ ಹಲವಾರು ಬಾರಿ ಈಶ್ವರಪ್ಪ ರವರ ಹತ್ತಿರ ಕೇಳಿದಾಗ ಅವರು ಪಿರ್ಯಾದುದಾರರಿಗೆ ಈ-ಖಾತಾವನ್ನು ಕೊಟ್ಟಿರುವುದಿಲ್ಲ.
ಡಿ.20 ರಂದು ಈಶ್ವರಪ್ಪ ರವರು ಪಿರ್ಯಾದಿ ಬಳಿ ಈ ಸ್ವತ್ತು ಮಾಡಿಕೊಡಲು 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪಿರ್ಯಾದುದಾರರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಈಶ್ವರಪನವರ ವಿರುದ್ಧ ಕ್ರಮಕ್ಕಾಗಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿ ಡಿ.24 ರಂದು ಬೆಳಿಗ್ಗೆ ಸೊರಬ ಪೋಸ್ಟ್ ಆಫೀಸ್ ಕಛೇರಿ ಬಳಿ ಅಪಾದಿತ ಅಧಿಕಾರಿ ಪಿರ್ಯಾದಿಯಿಂದ 5000/- ಲಂಚದ ಹಣವನ್ನು ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಈ ಕಾರ್ಯಾಚರಣೆಯನ್ನು ಮಂಜುನಾಥ ಚೌದರಿ. ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಹೆಚ್.ಎಸ್ ಸುರೇಶ್, ಸಿಬ್ಬಂದಿಯವರಾದ ಯೋಗೇಶ್ ಸಿ.ಹೆಚ್.ಸಿ, ಮಂಜುನಾಥ ಎಂ. ಸಿ.ಹೆಚ್.ಸಿ, ಸುರೇಂದ್ರ ಸಿ.ಹೆಚ್.ಸಿ, ಪ್ರಶಾಂತ್ ಕುಮಾರ್,ಹೆಚ್. ಸಿ.ಪಿ.ಸಿ. ಚೆನ್ನೇಶ್, ಸಿ.ಪಿ.ಸಿ ದೇವರಾಜ್, ಸಿ.ಪಿ.ಸಿ, ಅರುಣ್ ಕುಮಾರ್ ಯು.ಬಿ ಸಿ.ಪಿ.ಸಿ. ಅಂಜಲಿ, ಮ.ಪಿ.ಸಿ ಜಯಂತ್ ಎ.ಪಿ.ಸಿ ಮತ್ತು ಪ್ರದೀಪ್ ಎ.ಪಿ.ಸಿ. ರವರು ಪಾಲ್ಗೊಂಡಿರುತ್ತಾರೆ. (ಛಾಯಾಚಿತ್ರ ಲಗತ್ತಿಸಿದೆ)