ಕೋಡಿಕೊಪ್ಪ ಗ್ರಾಮದಲ್ಲಿ ಅಪರೂಪದ ಸ್ಪರ್ಧೆ!


ಸುದ್ದಿಲೈವ್/ಶಿಕಾರಿಪುರ

ಪಶು ಸಂಗೋಪನಾ ಇಲಾಖೆಯ ವತಿಯಿಂದ ಶಿಕಾರಿಪುರ ತಾಲೂಕಿನ ಕೋಡಿಕೊಪ್ಪ ಗ್ರಾಮದಲ್ಲಿ ಹೈನುಗಾರಿಕೆ ಪ್ರೋತ್ಸಾಹ ನಿಟ್ಟಿನಲ್ಲಿ ಹಾಲು ಕರೆಯುವ  ಸ್ಪರ್ಧೆಯನ್ನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿತ್ತು. 

ಕೋಡಿಕೊಪ್ಪ ಹಸು ಹಾಲು ಡೇರಿ ಎದುರು ಮೂವತ್ತಕ್ಕೂ ಅಧಿಕ ಹಸುಗಳನ್ನ ನಿಲ್ಲಿಸಿ ಹಾಲು ಹಿಂಡಿ ಪಶು ಇಲಾಖೆ ಸಿಬ್ಬಂದಿ ಎದುರೇ ಅಳೆದು ಕೊಡಲಾಯಿತು. ಹೆಚ್ಚು ಹಾಲು ಹಿಂಡಿದ ಬೂದೇಶ್ ಎಂಬುವರಿಗೆ ಮೊದಲ ಬಹುಮಾನ, ಏಳು ಲೀಟರ್ ಹಾಲಿಗಾಗಿ ಮಂಜುನಾಥಯ್ಯ ಅವರ ಹಸು ಎರಡನೇ ಬಹುಮಾನ ಪಡೆದರೆ, ಬಸವಣ್ಣನವರ ಹಸು ಮೂರನೇ ಬಹುಮಾನ‌ ಪಡೆಯಿತು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡುವ ಮೂಲಕ ಹೈನುಗಾರಿಕೆಯನ್ನ ಪ್ರೋತ್ಸಹಿಸಲಾಯಿತು.  ನಾನಾ ಗಾತ್ರದ ಹಾಲು ತುಂಬುವ ಪಾತ್ರೆಗಳನ್ನ ಬಹುಮಾನವಾಗಿ ನೀಡಿರುವುದು ವಿಶೇಷವಾಗಿತ್ತು. 

ಇದು ನಮ್ಮ ಜಿಲ್ಲೆಯಲ್ಲಿ ಹೊಸದಾಗಿ ಬಂದ ಕಾರ್ಯಕ್ರಮವಾಗಿದೆ. ಹೋರಿ ಬೆದರಿಸುವ ಸ್ಪರ್ಧೆ, ಜೆಲ್ಲಿಕಟ್ಟು, ಕಂಬಳ ಹೀಗೆ ವಿವಿಧ ಸ್ಪರ್ಧೆಗಳು ಇವೆ. ಆದರೆ  ಹಾಲು ಕರೆಯುವ ಸ್ಪರ್ಧೆ ಯಾವ ಹಸು ಹೆಚ್ಚು ಹಾಲನ್ನು ನೀಡುತ್ತದೆ ಅಂತ ಹಸುವಿಗೆ ನಾವು ಬಹುಮಾನವನ್ನು ಕೊಡುತ್ತೇವೆ ಇದು ರೈತರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಈ ಕಾರ್ಯಕ್ರಮದಿಂದ ರೈತರು ಸ್ಪರ್ಧಾತ್ಮಕ ಮನೋಭಾವದಿಂದ ಹಸುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಕೊಡಿಕೊಪ್ಪದ ಜನ ಚೆನ್ನಾಗಿ ಸ್ಪಂದನೆ ಮಾಡಿ ಹಾಲನ್ನ ಹಿಂಡಿಕೊಟ್ಟಿದ್ದಾರೆ.  

ಯಾವ ಹಸು ಹೆಚ್ಚಿಗೆ ಹಾಲನ್ನ ಕೊಟ್ಟಿದೆ ಆ ಹಸುವಿಗೆ  ಬಹುಮಾನ ಕೊಟ್ಟಿದ್ದೇವೆ.  ಭಾಗವಹಿಸಿದ ಎಲ್ಲಾ ರೈತರಿಗೂ ಕೂಡ ಸಮಾಧಾನಕ ಬಹುಮಾನ ಜೊತೆಗೆ ಹಸುಗಳಿಗೆ ಕೆಲವು ಔಷಧಿಗಳನ್ನು ಕೊಟ್ಟಿದ್ದೇವೆ ಎಂದು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾಕ್ಟರ್ ರವಿಕುಮಾರ್  ಹೇಳಿದರು.


ಇನ್ನು ಮೊದಲ ಬಹುಮಾನ ಪಡೆದ ಬೂದೇಶ್ ಮಾತನಾಡಿ ಊರಿನಲ್ಲಿ ಹಾಲಿನ ಡೇರಿ ತರಲು ಬಹಳಷ್ಟು ಕಷ್ಟಪಟ್ಟಿದ್ದೆವು ಸುಮಾರು ನೂರು ಮನೆಗಳಿವೆ ಜನರು ಎಲ್ಲರೂ ಹಸು ಕಟ್ಟಿ ಹಾಲು ಕರೆಯುತ್ತಾರೆ ಹತ್ತು ಲೀಟರ್ 2ಎಂಎಲ್ ಹಾಲು ನೀಡಿದ್ದಕ್ಕಾಗಿ ನಮ್ಮ ಹಸುವಿಗೆ ಪ್ರಥಮ ಬಹುಮಾನ ನೀಡಿದ್ದಾರೆ ಮನೆಯಲ್ಲಿ ಇನ್ನೂ ಒಂದು ಲೀಟರ್ ಹೆಚ್ಚಿಗೆ ಕೊಡುತ್ತಿತ್ತು ಇಲ್ಲಿ ಕರೆತಂದಕ್ಕಾಗಿ ಸ್ವಲ್ಪ ಕಡಿಮೆಯಾಗಿದೆ ಆದರೂ ಮೊದಲ ಪ್ರಶಸ್ತಿ ಬಂದಿದೆ ಎಂದು ಖುಷಿ ಪಟ್ಟರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close