ಹಿಂದೂ ಸಂಘಟನೆಯ ಕಾರ್ಯಕರ್ತನ ವಿರುದ್ಧ ಕಿಡ್ನ್ಯಾಪ್ ಪ್ರಕಣ ದಾಖಲು



ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಶಿರಾಳಕೊಪ್ಪದಲ್ಲಿ ಹಿಂದೂ ಜಾಗರಣ ವೇದಿಕೆಯ ಪವನ್,  ತಡಗಣಿ ಮಂಜಪ್ಪ ಮತ್ತು ಇತರೆ ಮೂವರ ವಿರುದ್ಧ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ. 27 ವರ್ಷದ ಅನ್ಯ ಕೋಮಿನ ಯುವಕನನ್ನ ಕಿಡ್ನ್ಯಾಪ್ ಮಾಡಿ ಆತನನ್ನ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಾಳಕೊಪ್ಪದಲ್ಲಿ ಪ್ರಕರಣ ದಾಖಲಾಗಿದೆ. 

ಬರ್ತ ಡೇ ಇರುವುದರಿಂದ ಪರಿಚಯಸ್ಥ  ಅನ್ಯಕೋಮಿನ ಯುವಕನನ್ನ ಭೇಟಿಯಾಗಲು ನಿಶ್ಚಿಯಿಸಿ ನಿರ್ದಿಷ್ಟ ಜಾಗಕ್ಕೆ ಬರಲು ತಿಳಿದ ಹಿನ್ನಲೆಯಲ್ಲಿ ತೆರಳಿದ್ದ ಯುವಕನಿಗೆ ಹಿಂದೂ ಜಾಗರಣ ವೇದಿಕೆಯ ಪವನ್ ಮತ್ತು ಇತರರು ಎದುರಾಗಿದ್ದಾರೆ. 

ಹಿಂದೂ ಹುಡುಗಿಯರು ಬೇಕಾ ನಿನಗೆ ಎಂದು ಬೈದು ವಾಹನದಲ್ಲಿ ಕೂರಿಸಿಕೊಂಡು ಅನೇಕಕಡೆ ಈ ಹುಡುಗರು ಸುತ್ತಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರ ಶಿರಾಳಕೊಪ್ಪದ ಬಳಿ ಕರೆತಂದು ಹುಡುಗನನ್ನ ಥಳಿಸಿ ಬಿಟ್ಟು ಹೋಗಿದ್ದಾರೆ. ನಂತರ ಯುವಕನ ತನ್ನ ಸಂಬಂಧಿಕರು ಮತ್ತು ಸ್ನೇಹಿತರನ್ನ ಕರೆಯಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಠಾಣೆಗೆ ದೂರು ಕೊಡೋಣ ಎಂದು ಸಂಬಂಧಿಕರು ತಿಳಿದಿದ್ದಕ್ಕೆ ಬೇರೆ ಅವರು ಹೊಡಿಯುತ್ತಾರೆ ಎಂದು ಹೇಳಿ ಊರಿಗೆ ತೆರಳಿದ್ದಾನೆ. ಆದರೆ ನೋವು ಹೆಚ್ಚಾಗಿದ್ದರಿಂದ ಯುವಕ ವಾಪಾಸ್ ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾನೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close