ಸುದ್ದಿಲೈವ್/ಶಿವಮೊಗ್ಗ
ತುಂಗಭದ್ರಾ ಸೇತುವೆ ಮೇಲೆ ಹೋಗುತ್ತಿದ್ದ ಕರಡಿಯೊಂದರ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಇದರಿಂದ ಹೊಳಲೂರು ಸುತ್ತಮುತ್ತ ಪುನಃ ಕರಡಿ ಅತಂಕ ಶುರುವಾಗಿದೆ.
ಹೊಳಲೂರು ಸುತ್ತಮುತ್ತಲಿನ ಅಗಸನಹಳ್ಳಿ, ಡಣಾಯಕಪುರ ಗ್ರಾಮಗಳಲ್ಲಿ ಕರಡಿಗಳು ಸೆರೆಯಾಗಿದ್ದವು. ಈಚೆಗೆ ಮಲ್ಲಾಪುರ ಸರ್ಕಲ್‌ನಲ್ಲಿ ಮನೆಯೊಂದರ ಬಳಿ ಕರಡಿ ಕಾಣಿಸಿಕೊಂಡಿತ್ತು. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಸನ್ಯಾಸಿಕೊಡಮಗ್ಗಿ ಸಮೀಪದ ಸೇತುವೆ ಮೇಲೆ ಕರಡಿ ಕಾಣಿಸಿಕೊಂಡಿದೆ.
ಕರಡಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವಿವಿಧ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಭಾಗದ ಜನರು ತಮ್ಮ ಜಮೀನಿಗೆ ಹೋಗಲು, ಸಂಜೆ ವೇಳೆ ವಿವಿಧ ಕೆಲಸಕ್ಕೆ ತೆರಳುವವರು, ಒಬ್ಬಂಟಿಯಾಗಿ ಓಡಾಡುವುದಕ್ಕೆ ಹೆದರುವಂತಾಗಿದೆ.