ಸುದ್ದಿಲೈವ್/ಶಿವಮೊಗ್ಗ
ಹೊಸವರ್ಷದ ಸ್ವಾಗತಕ್ಕೆ ನಗರದ ಪ್ರಮುಖ ಸ್ಥಳಗಳು ಆಚರಣೆಗೆ ಸಿದ್ದಗೊಂಡಿವೆ. ಕಂಟ್ರಿಕ್ಲಬ್, ಕಾಸ್ಮೋ, ಕ್ಲಿಫ್ ಆಂಬೆಸಿ, ಕಿಮ್ಮನೆ, ಮಲ್ನಾಡ್ ಶೈರ್ ಮೊದಲಾದ ಕಡೆ ಹೊಸವರ್ಷಾಚರಣೆಗೆ ಸಿದ್ಧತೆ ಜೋರಾಗಿದೆ.
ಶಿವಮೊಗ್ಗದ ವಿವಿಧೆಡೆ ಹೊಸ ವರ್ಷ ಸಂಭ್ರಮಾಚರಣೆಗೆ ರಂಗೇರಿದೆ. ವಿದ್ಯಾನಗರದಲ್ಲಿರುವ ಕಂಟ್ರಿ ಕ್ಲಬ್ ನಲ್ಲಿ ಮ್ಯೂಸಿಕಲ್ ನೈಟ್ ಶುರುವಾಗಿದೆ.
ಬೆಂಗಳೂರಿನ ಮ್ಯೂಸಿಕಲ್ ಬ್ಯಾಂಡ್ಒನ್ ನೈಟ್ ಇನ್ ಟುಮಾರೊಲ್ಯಾಂಡ್ ಮ್ಯೂಸಿಕ್ ಪಾರ್ಟಿ ಮ್ಯೂಸಿಕಲ್ ಸಂಗೀತದ ರಸದೌತಣ ನೀಡುತ್ತಿದೆ. ಲೈಟಿಂಗ್ ಸೆಟಪ್ ಗಳು ಮ್ಯೂಸಿಕ್, ಊಟದ ವ್ಯವಸ್ಥೆಗಳನ್ನ ಕಂಟ್ರಿ ಕ್ಲಬ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ
.
ಮ್ಯೂಸಿಕಲ್ ನಲ್ಲಿ ವಿಶೇಷವೆಂದರೆ ಕನ್ನಡ ಹಾಡುಗಳು ಕೇಳಿ ಬರುತ್ತಿರುವುದು ಗಮನಾರ್ಹ, ರಾಜ್ ಕುಮಾರ್ ಸಿನಿಮಾಗಳ ಕನ್ನಡ ಹಾಡಿಗೆ ರ್ಯಾಪ್ ಮೂಸಿಕ್ ಸೇರಿಸಿ ಹಾಡುತ್ತಿರುವುದು ವಿಶೇಷವಾಗಿದೆ.