ಗಾಂಜಾ ಮಾರಾಟ ಮತ್ತು ಸೇವನೆಗೆ ಬ್ರೇಕ್ ಹಾಕಲು ಬಿಜೆಪಿ ನಿಯೋಗ ಎಸ್ಪಿಗೆ ಮನವಿ



ಸುದ್ದಿಲೈವ್/ಶಿವಮೊಗ್ಗ

ಮಾದಕ ವಸ್ತು ಗಾಂಜಾ ಹಾವಳಿ ತಡೆಗಟ್ಟಲು ಎಸ್‌ಪಿಗೆ  ಬಿಜೆಪಿ ನಿಯೋಗ ತೆರಳಿ ಮನವಿ ಸಲ್ಲಿಸಿದೆ. ಜಿಲ್ಲಾ ಬಿಜೆಪಿ ವ್ಯಾಪಾರ & ವಾಣಿಜ್ಯ ಪ್ರಕೊಷ್ಠ ವತಿಯಿಂದ ಎಸ್ ಪಿ ಮಿಥುನ್ ಕುಮಾರ್ ಗೆ ಮನವಿ ಸಲ್ಲಿಸಲಾಗಿದೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಹಾಗೂ ನಶಾ ಪದಾರ್ಥಗಳ ಅನಧಿಕೃತ ಮಾರಾಟ ಮಾಡುವವರ ಬಗ್ಗೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ  ಟಿ ಡಿ ಮೇಘರಾಜ್ ಹಾಗೂ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್ ದತ್ತಾತ್ರಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಗಾಂಜಾ ಸೇವಿಸಿ ಅಪರಾಧದ ಕೃತ್ಯಗಳನ್ನು ಎಸಗಲಾಗುತ್ತಿದೆ. ಮಾದಕ ವಸ್ತು ಗಾಂಜಾ ಮಾರಾಟ ಕೂಡ ಎಗ್ಗಿಲ್ಲದೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗಾಂಜಾ ಹಾವಳಿಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ನಿಯೋಗದಿಂದ ಆಗ್ರಹಿಸಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close