ಎಸ್ ಎಂ ಕೃಷ್ಣ ನಿಧನ, ನಾಳೆ ರಜೆ ಘೋಷಣೆ, ಗಣ್ಯರ ಸಂತಾಪ

 


ಸುದ್ದಿಲೈವ್/ಶಿವಮೊಗ್ಗ

ಮಾಜಿ ಸಿಎಂ ಎಸ್ ಎಂ ಕೃಷ್ಣರವರ ನಿಧನರಾಗಿದ್ದು, ಅವರಿಗೆ 92 ವರ್ಷ ವಯಸ್ಸಾಗಿತದತು. ಬೆಂಗಳೂರಿನ ನಿವಾಸದಲ್ಲಿ ನಿಧರಾಗಿದ್ದು ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.

ಮಾಜಿ‌ಮುಖ್ಯಮಂತ್ರಿಗಳ ನಿಧನಕ್ಕೆ ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜು, ಸರ್ಕಾರಿ ಇಲಾಖೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆದಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹೆಚ್ ಎಂ ಚಂದ್ರಶೇಖರಪ್ಪ ಭಾಗಿ

ಮಾಜಿ ಗೃಹ ಸಚಿವ ಆರಗ ಸಂತಾಪ


ಮಾಜಿ ಮುಖ್ಯಮಂತ್ರಿಯ ನಿಧನಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದು ಕೃಷ್ಣರವರು ಕುಡುಮಲ್ಲಿಗೆ ಅಳಿಯ, ನಾನು ಶಾಸಕರಾಗಿದ್ದಾಗ  ಅವರ ಮನೆಗೆ ಹೋದಾಗ ಗೌರವಿಸಿ ಕೆಲಸ ಮಾಡಿಕೊಡುತ್ತಿದ್ದರು. ಬೆಂಗಳೂರನ್ನ ಸಿಂಗಾಪುರ ಮಾಡಲು ಹೊರಟ ಧೀಮಂತ ವ್ಯಕ್ತಿಯಾಗಿದ್ದರು.

ಅಪರೂಪದ ರಾಜಕಾರಣಿಗಳು, ಸೌಮ್ಯ ಸ್ವಭಾವದ ಎಸ್ ಎಂ ಕೃಷ್ಣರನ್ನ ಕಳೆದುಕೊಂಡು ರಾಜ್ಯ ಮತ್ತು ದೇಶ ಬಡವಾಗಿದೆ ಅವರ ನಿಧನದ ದುಖವನ್ನ ಭರಿಸುವಂತಾಗಲಿ ಎಂದು ಮಾಜಿ ಬಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಸಂತಾಪ ಸೂಚನೆ


ಅದರಂತೆ ಸಚಿವ ಮಧು ಬಂಗಾರಪ್ಪ ಸಹ ಮಾಜಿ ಸಿಎಂಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು ಎಸ್ ಎಂ ಕೃಷ್ಣರಾಗಿದ್ದರು. ಅವರು ನಮ್ಮ‌ಜಿಲ್ಲೆಯವರು ಎಂಬುದೇ ಹೆಗ್ಗಳಿಕೆ ಆಗಿದೆ. ಅವರ ಅಗಲಿಕೆ ತುಂಬಲಾಗದ ನಷ್ಠವಾಗಿದ್ದು ಮೃತರ ಕುಟುಂಬಕ್ಕೆ ದುಖ ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಕೋರಿದ್ದಾರೆ.

ಈಶ್ವರಪ್ಪ ಸಂತಾಪ


ಸಂಸದ ರಾಘವೇಂದ್ರ, ಮಾಜಿ ಡಿಸಿಎಂ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ. ಈಶ್ವರಪ್ಪನವರು ಮಾತನಾಡಿ 1989 ರಲ್ಲಿ ಶಾಸಕರಾಗಿ ಮೊದಲಬಾರಿಗೆ ಆಯ್ಕೆಯಾದಾಗ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಭಾಧ್ಯಕ್ಷರಾದ ಅವರಿಗೆ ಅಭಿನಂದಿಸಿ ಶಿವಮೊಗ್ಗದವನು ಎಂದಿದ್ದೆ.

ಹಿಂದುಳಿದವನಾಗಿರುವ ನೀನು ಗೆದ್ದಿದ್ದು ಹೇಗೆ ಎಂದಿದ್ದರು. ಆಗ ನಾನು ಉತ್ತರಿಸಲಿಲ್ಲ. ಆಗ ಹೇಗೆ ಎಂಬ ಕುತೂಹಲದಿಂದ ಅವರು ಮತ್ತೆ ಕೇಳಿದ್ದಕ್ಕೆ ಹಿಂದುಳಿದ ಎಂಬ ಭಾವನೆ ಇಲ್ಲ, ಹಿಂದುತ್ವ ಇದೆ ಎಂದಿದ್ದೆ. ನನಗೆ ವಿಧಾನ ಸಭೆಯಲ್ಲಿ ಹೇಗೆ ನಡೆದುಕೊಳ್ಫುವುದನ್ನ ಕೃಷ್ಣರವರಿಂದ ಕಲಿತೆ ಎಂದರು. ಅವರು ರಾಜಕೀಯ ಗುರುಗಳಾಗಿದ್ದರು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close