ಮಾಜಿ ಕಾರ್ಪರೇಟರ್ ವಿಶ್ವಾಸ್ ವಿರುದ್ಧ ಎಫ್ಐಆರ್


ಸುದ್ದಿಲೈವ್/ಶಿವಮೊಗ್ಗ

ಮಾಜಿ ಕಾರ್ಪರೇಟರ್ ಇ.ವಿಶ್ವಾಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈಲ್ವೆ ಇಂಜಿನಿಯರ್ ರವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಪ್ರಕರಣದ ಹಿಂದೆ ಬಸವೇಶ್ವರ ಕೋಆಪರೇಟಿವ್ ಸೊಸೈಟಿಯ ಚುನಾವಣೆಯ ವಾಸನೆಯೂ ಹೊಡೆಯುತ್ತಿದೆ. 

ಘಟನೆಯ ವಿವರ

ಸವಳಂಗ ರೈಲ್ವೆ ಓವರ್ ಬ್ರಿಡ್ಜ್ ನ ರಸ್ತೆ ದುರಸ್ತಿಕಾರ್ಯ ನಡೆದಿತ್ತು. ಈ ಕಾಮಗಾರಿ ರಾತ್ರಿ 1 ಗಂಟೆಯ ವೇಳೆ ಸ್ಥಳಕ್ಕೆ ಬಂದ ಮಾಜಿ ಕಾರ್ಪರೇಟರ್ ಇಲ್ಲಿ ಹಂಪ್ ಹಾಕಲು ಕೋರಿದ್ದಾರೆ. ಹಂಪ್ ಹಾಕಲು ನೀವು ಹೇಳಿದಂತೆ ಮಾಡಲು ಆಗಲ್ಲ ಎಂದು ಇಂಜಿನಿಯರ್ ತಿಳಿಸಿದ್ದಾರೆ. 

ಈ ವಿಚಾರದಲ್ಲಿ ಇಂಜಿನಯರ್ ಮತ್ತು ವಿಶ್ವಾಸ್ ನಡುವೆ ಮಾತಿನ ಚಕಮಕಿ ನಡೆದಿದೆ. ವಿಶ್ವಾಸ್ ಇಂಜಿನಿಯರ್ ರಾಜ್ ಕುಮಾರ್ ಗೆ ಸಾರ್ವಜನಿಕ ಕೆಲಸವಿದು ನಾವು ಹೇಳಿದಂತೆ ಮಾಡಬೇಕು ಎಂದಿದ್ದಾರೆ. ಅವ್ಯಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರುಲಿನಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನ ಕೇಳಿ ಜಗಳ ಬಿಡಿಸಲು ಬಂದ ಎಸ್ ಆರ್ ಸಿ ಕಂಪನಿ ಇನ್ಫ್ರಾ ಪ್ರೈವೆಟ್ ಲಿಮಿಟೆಡ್ ನ ಪ್ರಾಜೆಕ್ಟ್ ಮ್ಯಾನೇಜರ್ ಅನೂಜ್ ಕುಮಾರ್ ಬಿಡಿಸಲು ಬಂದಿದ್ದಾರೆ. ಇವರ ಮೇಲು ವಿಶ್ವಾಸ್ ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ರ‌್ಯಾಖರ್ ನಿಂದ ವಿಶ್ವಾಸ್ ಹಲ್ಲೆ ಮಾಡಲು ಬಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಏನಿದು ಲಿಂಕು?

ಬಸವೇಶ್ವರ ಸೊಸೈಟಿಗೂ ವಿಶ್ವಾಸ್ ರೈಲ್ವೆ ಇಲಾಖೆ ಇಂಜಿನಿಯರ್ ಜೊತೆ ಜಗಳವಾಡಿದ್ದಕ್ಕೂ ಏನು ಸಂಬಂಧ ಎಂದು ಕೇಳಿದರೆ ವಿಶ್ವಾಸ್ ಇದೆ ಎಂದಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡ ಕೆಲವರು ಈ ಜಗಳ ನಡೆದಿದ್ದ ವೇಳೆ ರಾತ್ರಿ 1 ಗಂಟೆಯ ವೇಳೆಗೆ ಹಾಜರಿದ್ದರು. 


ಬಿಜೆಪಿಯಲ್ಲಿ ಗುರುತಿಸಿಕೊಂಡ ಕೆಲವರ ಪೈಕಿ ಈಗ ಬಸವೇಶ್ವರ ಸೊಸೈಟಿಯ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದ್ದಾರೆ. ವಿಶ್ವಾಸ್ ಇವರ ಎದುರಾಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದು ಚುನಾವಣೆಯ ಕಾವು ಇಲ್ಲಿಯವರೆಗೆ ಈ ಘಟನೆಯನ್ನ ಎಳೆದುಕೊಂಡು ಬಂದಿದೆ ಎಂಬ ಮಾಹಿತಿ ಕೇಳಿ ಬಂದಿದೆ. ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಕಾದು ನೊಡಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close