ಸುದ್ದಿಲೈವ್/ಶಿವಮೊಗ್ಗ
ಜಾತಿಗಣತಿ ಜಾರಿ ಆಗುವಂತೆ ಒತ್ತಾಯಿಸಿ ಹಾಗೂ ಪಂಚಮಸಾಲಿಯವರನ್ನ 2 ಎ ವರ್ಗೀಕರಣದ ಬೇಡಿಜೆ ವಿರುದ್ಧ ಆಗ್ರಹಿಸಿ ಅಹಿಂದ ಸಂಘಟನೆ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದೆ.
ಹಿಂದುಳಿದ ಜನ ಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಹಿಂದುಳಿದ ಸಮಾಜಗಳ ಅನ್ನ ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ ಎಂದು ಆರೋಪಿಸಲಾಯಿತು.
ಅಹಿಂದ ವೇದಿಕೆಯ ನ್ಯಾಯಯುತ ಭೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು. ಅಹಿಂದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಕೂಡಲೇ ಕಾಂತರಾಜ್ ವರದಿಯನ್ನ ಜಾರಿಗೊಳಿಸುವಂತೆ ಪ್ರತಿಭಟನಾಕಾರರ ಆಗ್ರಹಿಸಿದ್ದಾರೆ.
ಅಹಿಂದ ಸಂಘಟನೆಯ ಗೌರವಾಧ್ಯಕ್ಷ ಪ್ರೊ.ಹೆಚ್.ರಾಜಪ್ಪ, ಆರ್.ಪ್ರಸನ್ನ ಕುಮಾರ್, ಸಂಘಟನಾಕಾರ್ಯದರ್ಶಿ ಪ್ರೊ.ಚೆನ್ನವೀರಪ್ಪ ಗಾಮನಗಟ್ಟಿ, ಜನಮೇಜಿರಾವ್, ನಟರಾಜ್, ಪ್ರೊ. ಜಿ.ಪರಮೇಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದರು.