ಸುದ್ದಿಲೈವ್/ಶಿವಮೊಗ್ಗ
ಇಲ್ಲಿನ ಡಿಡಿಪಿಐ ಕಚೇರಿಯಲ್ಲಿನ ಶಿಕ್ಷಕಿಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಮೂರು ಇತರೆ ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ಗಳನ್ನ ಕಳುವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ಇದರಿಂದ ಸರ್ಕಾರಿ ಕಚೇರಿಯಲ್ಲಿ ಯಾವುದೇ ಸುರಕ್ಷತೆ ಇಲ್ಲವೆಂಬುದು ಸಾಬೀತಾಗಿದೆ.
ಇವಿಷ್ಟೇ ಆಗಿದ್ದರೆ ಹೋಗಲಿ ಬಿಡಿ ಮತ್ತೊಂದು ಮಾಡ್ಸೋಣ ಎಂದು ಬಿಡಬಹುದಿತ್ತು. ಆದರೆ ಮೂರು ಬ್ಯಾಂಕ್ ನ ಎಟಿಎಂ ಕಾರ್ಡ್ ನ್ನ ಕದ್ದಿರುವ ಕಳ್ಳ, ಯೂನಿಯನ್ ಬ್ಯಾಂಕ್ ಎಟಿಎಂನಿಂದ 36 ಸಾವಿರ ರೂ. ಹಣ ಬಿಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಡಿಡಿಪಿಐ ಕಚೇರಿ ಅಸುರಕ್ಷಿತವಾಗಿರುವುದು ಗೊತ್ತಾಗಿದೆ.
ಡಿಡಿಪಿಐ ಆಫೀಸ್‌ನಲ್ಲಿ ಪ್ರೈಮರಿ ಶಾಲೆಯ ಮತ್ತು ಹೈಸ್ಕೂಲ್ ಶಾಲೆಯ ಸೈನ್ ವಿಷಯಕ್ಕೆ ವಿಷಯ ಪರೀವಿಕ್ಷರಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದ ಶಿಕ್ಷಕಿಯೊಬ್ಬರು ತಮ್ಮ ಕೊಠಡಿಯಲ್ಲಿಟ್ಟಿದ್ದ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಎಟಿಎಂ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಗಳನ್ನ ಕಳುವು ಮಾಡಿಕೊಂಡು ಹೋಗಿದ್ದಾರೆ.
ಡಿ.16 ರಂದು ಡಿಡಿಪಿಐ ಕಛೇರಿಗೆ ಕೆಲಸಕ್ಕೆ ಬಂದ ಶಿಕ್ಷಕಿ ವ್ಯಾನಿಟಿ ಬ್ಯಾಗನ್ನು ಟೇಬಲ್ ಮೇಲೆ ಇಟ್ಟು, ಕೆಲಸ ನಿರ್ವಹಿಸಿದ್ದಾರೆ. ಅದೇ ದಿವಸ ಸಂಜೆ 4-30 ಗಂಟೆಗೆ ಡಿಡಿಪಿಐ ಕಛೇರಿಯಲ್ಲಿ ನಡೆದ ಸಭೆಗೆ ಹೋಗಿ ಸಂಜೆ 6-45 ಗಂಟೆಗೆ ವಾಪಾಸು ಕೊಠಡಿಗೆ ಬಂದು ನೋಡಿದಾಗ ವ್ಯಾನಿಟಿ ಬ್ಯಾಗಿನ ಎರಡು ಸೈಡ್ ನ ಜೀಪ್ ಒಪನ್ ಆಗಿತ್ತು.
ಅದರ ಒಳಗೆ ಇಟ್ಟಿದ್ದ ವ್ಯಾಲೇಟ್ ಇರಲಿಲ್ಲ, 1) ಆಧಾರ ಕಾರ್ಡ 2) ಪಾನ್ ಕಾರ್ಡ್, 3) ಡ್ರೈವಿಂಗ್ ಲೈಸನ್ಸ್ 4) ಯೂನಿಯನ್ ಬ್ಯಾಂಕ್ ಎಟಿಎಂ, ಬಜಾಜ್ ಫೈನಾನ್ಸ್ ಎಟಿಎಂ, ಕೆನೆರಾ ಬ್ಯಾಂಕ್ ನ ಎಟಿಎಂ ಕಾರ್ಡ್ಗಳು ಇದ್ದು, ಆ ವ್ಯಾಲೇಟನ್ನ ಕಳುವು ಮಾಡಲಾಗಿದೆ.
ಕಳವು ಮಾಡಿಕೊಂಡು ಹೋದ ದಿನವೇ ಶಿಕ್ಷಕಿಯ ಮೊಬೈಲ್‌ಗೆ ಮೇಸೇಜ್ ವೊಂದು ಬಂದಿದ್ದು ಒಟ್ಟು 4 ಬಾರಿ ತಮ್ಮ ಯುನಿಯನ್ ಬ್ಯಾಂಕಿನ ಎಟಿಎಂ ಕಾರ್ಡ್ ನಿಂದ ತಲಾ 9000/-ರೂ ದಂತೆ ಒಟ್ಟು 36.000/-ರೂ ಹಣ ಬಿಡಿಸಿರುವ ಬಗ್ಗೆ ಮೇಸೇಜ್ ಬಂದಿದೆ. ಯುನಿಯನ್ ಬ್ಯಾಂಕಿನ ಎಟಿಎಂ ಕಾರ್ಡನ್ನು ಬಳಸಿಕೊಂಡು ಹಣವನ್ನು ತೆಗೆದುಕೊಂಡಿರುತ್ತಾರೆ,
ಶಿಕ್ಷಕಿ ನಂತರ ತಮ್ನ ಪತಿಯೊಂದಿಗೆ ಮಾತನಾಡಿ,ಇತರೆ ಎರಡು ಎಟಿಎಂ ಕಾರ್ಡನ್ನು ಬ್ಲಾಕ್ ಮಾಡಿಸಿದ್ದಾರೆ. ಕಳುವಾಗಿರುವ ತಮ್ಮ ಎಟಿಎಂ ಕಾರ್ಡ್ ಗಳು, ಡ್ರೈವಿಂಗ್ ಲೈಸೆನ್ಸ್ ಮತ್ತು ಅಧಾರ್ ಕಾರ್ಡ್ ಇದ್ದ ವ್ಯಾಲೇಟನ್ನು ಪತ್ತೆ ಮಾಡಿ ಕೊಡುವಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.