ಸುದ್ದಿಲೈವ್/ಶಿವಮೊಗ್ಗ
ಪರಿಷತ್ ಸದಸ್ಯರಿಗೆ ಸಭಾಪತಿಗಳ ರಕ್ಷಣೆ ಮಾಡುವ ಜವಬ್ದಾರಿಯಿಲ್ಲವಾ ಎಂದು ಮಾಜಿ ಡಿಸಿಎಂ ಈಶ್ವರಪ್ಪಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಘೋಷಿತ ಪೊಲೀಸ್ ರಾಜ್ಯ ಜಾರಿಯಿದೆಯಾ? ಸಭಾಪತಿ ಪೀಠ ಪವಿತ್ರವಾದುದ್ದು, ಈ ಪೀಠಕ್ಕೆ ಅಗೌರವವಾಗಿದ್ದು ದುಖಕರ ಸಂಗತಿಯಾಗಿದೆ. ಕಾನೂನು ತಜ್ಞರ ಬಳಕೆ ಮಾಡಿಕೊಂಡು ಸಭಾಪತಿಗಳು ಎಂಎಲ್ ಸಿಗಳ ರಕ್ಷಣೆ ಕುರಿತು ಚಿಂತಿಸಲಿ ಎಂದು ಸಲಹೆ ನೀಡಿದರು.
ಎಲ್ಲಾ ಎಂಎಲ್ ಸಿಗಳಿಗೆ ರಕ್ಷಣೆ ನೀಡುವುದು ಸಭಾಪತಿಗಳದ್ದು, ಅವರ ಅನುಮತಿ ಪಡೆಯದೆ ನಮ್ಮ ನಾಯಕ ಸಿಟಿ ರವಿಗೆ ಎಫ್ಐಆರ್ ಹಾಕಿ ಬಂಧಿಸಿ, ರಾತ್ರಿಯಿಡಿ ಸುತ್ತಿಸಿದ್ದಾರೆ. ಹೈಕೋರ್ಟ್ ಕಾಂಗ್ರೆಸ್ ಗೆ ಕಪಾಳಮೋಕ್ಷವಾದ ನಂತರ ಬೀದಿಯಲ್ಲಿ ಬಿಡಲಾಗಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರವಿಯನ್ನ ಎನ್ ಕೌಂಟರ್ ಮಾಡುವ ಹುನ್ನಾರ ನಡೆಸಿದೆ. ಪರಿಷತ್ ನಲ್ಲಿ ಅಶ್ಲಿಲ ಪದ ಬಳಕೆ ಕುರಿತು ಗೊಂದಲದ ಹೇಳಿಜೆ ಇದೆ. ಕೆಲವರು ಪದ ಬಳಸಿದ್ದಾರೆ ರವಿ ಎಂದೂ ಮತ್ತೆ ಕೆಲವರು ಪದ ಬಳಸಿಲ್ಲ ಎಂದಿದ್ದಾರೆ ಇದು ತನಿಖೆಯಾಗಬೇಕು. ಸಭಾಪತಿ ಹೊರಟ್ಟಿಯವರು ರವಿಯವರ ಎಂಎಲ್ ಸಿ ಸ್ಥಾನಕ್ಕೆ ಚ್ಯುತಿ ತಂದಿರುವ ಬಗ್ಗೆ ಏನು ಕ್ರಮ ಜರುಗಿಸಲಿದ್ದಾರೆ ಎಂದು ಪ್ರಶ್ನಿಸಿದರು.
ಸಿಟಿ ರವಿ ಹಲ್ಲೆಯಾಗಿದೆ ಎಂದಿದ್ದಾರೆ. ಹಾಗಾದರೆ ಸಭಾಪತಿಗಳ ಜವಬ್ದಾರಿ ಏನು? ಒಂದು ವೇಳೆ ಕೊಲೆಯಾಗಿದ್ದರೆ ಸಭಾಪತಿಗಳ ಕ್ರಮವೇನು? ನಿನ್ನೆ ರವಿ ದೂರು ನೀಡುವವರೆಗೆ 10 ಜನರ ಮೇಲೆ ಕ್ರಮ ಜರುಗಿಸಿರಲಿಲ್ಲ. ರವಿ ಮತ್ತು ಹೆಬ್ಬಾಳ್ಕರ್ ಅವರ ಪ್ರಶ್ನೆ ಇದಲ್ಲ. ಸಭಾಪತಿ ಪೀಠ ಎಂಎಲ್ ಸಿ ಅವರನ್ನ ರಕ್ಷಿಸುವುದರಲ್ಲಿ ವಿಫಲವಾಯಿತಾ ಎಂದು ಅನುಮಾನಿಸಿದ್ದಾರೆ.
ಸಭಾಪತಿ ಪೀಠದ ಗೌರವ ಹಾಳಾಯಿತೋ ಇಲ್ವೋ, ಎಂಎಲ್ ಸಿಗಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೋ ಇಲ್ಲವೋ ಎಂಬುದನ್ನ ಸ್ಪಷ್ಟಪಡಿಸಬೇಕು. ನಾನು ಪರಿಷತ್ ನಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿರುವ ಅನುಭವವಿದೆ. ನನ್ನ ವೈಯುಕ್ತಿಕ ಅನುಭವದಲ್ಲಿ ಸಭಾಪತಿಗಳಿಗೆ ಪ್ರಶ್ನಿಸುವೆ. ರವಿಯನ್ನ ಸುತ್ತಿಸಿದ್ದೇಕೆ? ಕಬ್ಬಿನಗದ್ದೆಯನ್ನ ಪೊಲೀಸರು ತೋರಿಸಿದ್ದೇಕೆ? ರವಿಯರವರನ್ನ ಅರೆಸ್ಟ್ ಮಾಡಿದ್ದು ಗೊತ್ತಿಲ್ಲ ಎಂದು ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳೆ ಹೇಳಿದ್ದಾರೆ.
ಡಿಕೆಶಿ ಅವರು ಇದೇ ದಾಟಿಯಲ್ಲಿ ಹೇಳಿದ್ದಾರೆ. ಹಾಗಾದರೆ ರಾಜ್ಯದಲ್ಲಿ ಪೊಲೀಸ್ ನವರ ಗೂಂಡಾ ರಾಜ್ಯವಿದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಪೊಲೀಸ್ ಅಧಿಕಾರಿಗಳು ಪ್ರಭಾವಿ ವ್ಯಕ್ತಿಯ ಸೂಚನೆಯಂತೆ ಸಿಟಿ ರವಿಯವರನ್ನ ಕ್ರಿಮಿನಲ್ ಗಿಂತನೂ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿದ ಪ್ರಭಾವಿ ವ್ಯಕ್ತಿಯಾರು? ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸರ್ಕಾರದ ವೈಫಲ್ಯ, ಪೊಲೀಸ್ ವೈಫಲ್ಯ ಆಗಿದ್ದಕ್ಕೆ ಯಾರು ಕಾರಣ? ಪ್ರಜಾಪ್ರಭುತ್ವದ ಬಗ್ಗೆ ರಾಜ್ಯದಲ್ಲಿ ಪ್ರಶ್ನಾತೀತವಾಗಿದೆ. ಸಚಿವೆ ಹೆಬ್ವಾಳ್ಕರ್ ಮತ್ತು ಸಿಟಿ ರವಿ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.