ಸುದೀಪ ಅಭಿನಯದ 'ಮ್ಯಾಕ್' ಸಿನಿಮಾದ ಸ್ಟಿಲ್ |
ಸುದ್ದಿಲೈವ್/ಶಿವಮೊಗ್ಗ
ನಟ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಎರಡು ವರೆ ವರ್ಷದ ನಂತರ ಬಿಡುಗಡೆಯಾಗಿದೆ. ಉಪ್ಪಿ ಅಭಿನಯದ ಯುಐ ಸಿನಿಮಾ ಏನ್ ಸಿನಿಮಾ ಎಂದು ತಲೆಕೆಡಿಸಿಕೊಂಡು ಕುಳಿತಿದ್ದ ಪ್ರೇಕ್ಷಕನಿಗೆ ಮ್ಯಾಕ್ಸ್ ಸಿನಿಮಾ ರೋಮಾಂಚನವನ್ನ ಉಣಬಡಿಸಿದೆ.
ಒಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ನಡೆಯುವ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಮೂವಿನೇ ಮ್ಯಾಕ್ಸ್ ಸಿನಿಮಾವಾಗಿದೆ. ಸ್ಕ್ರೀನ್ ಪ್ಲೇ ಮತ್ತು ಕಥೆ ಉರುಳುವುದೇ ಪ್ರೇಕ್ಷನಿಗೆಗೊತ್ತಾಗೊಲ್ಲ. ಆ ರೀತಿ 132 ನಿಮಿಷದ ಸಿನಿಮಾ ಮುಕ್ತಾಯಗೊಳ್ಳುತ್ತದೆ.
ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಏನು ಬೇಕು ಅದನ್ನ ಅಭಿನಯದಲ್ಲಿ ಎಲ್ಲವನ್ನೂ ತೋರ್ಸಿದ್ದಾರೆ. ನಟ ಸುದೀಪ್ ಫ್ಯಾನ್ಸ್ ಗೆ ರಸದೌತಣ ನೀಡಿದ್ದಾರೆ ಎಂದರೆ ತಪ್ಪಾಗಲಾಗದು. ಬಿಗ್ ಬಾಸ್ ನಲ್ಲಿರುವ ಉಗ್ರಂ ಮಂಜುರವರ ಪಾತ್ರ ಸಹ ಪ್ರೇಕ್ಷಕನನ್ನ ಹಿಡಿದಿಟ್ಟಿದೆ.
ಮಂಜು ಅವರ ಪಾತ್ರ ಸೊಗಸಾಗಿ ಮೂಡಿ ಬಂದಿದೆ. ನೆಗೆಟಿವ್ ಆಸ್ಪೆಕ್ಟ್ಸ್ ಎಂದರೆ ಫೈಟಿಂಗ್, ಕುಟುಂಬ ಸಮೇತರಾಗಿ ಬರುವ ವೀಕ್ಷಕನಿಗೆ ಫೈಟಿಂಗ್ ಕೊಂಚ ಜಾಸ್ತಿನೆ ಇದೆ ಎನಿಸಬಹುದು. ಆದರೂ ವರ್ಷದ ಕೊನೆಯಲ್ಲಿ ಮ್ಯಾಕ್ಸ್ ಮತ್ತು ಯುಐ ಕನ್ನಡಿಗರ ಪಾಲಿಗೆ ಅದ್ಭುತ ಸಿನಿಮಾಗಳೆ.
ತಮಿಳು ನಟ ಕಾರ್ತಿಕ್ ಅಭಿನಯದ 'ಕೈಥಿ' ಸಿನಿಮಾ ಈ ಹಿಂದೆ ಬಿಡುಗಡೆಯಾಗಿತ್ತು. ಆದೇ ಕಥೆಗೆ ಮಸಾಲೆಹಾಕಿ ಮ್ಯಾಕ್ಸ್ ತಯಾರಿಸಲಾಗಿದೆ. ಖಡಕ್ ಪೊಲೀಸ್ ಅಧಿಕಾರಿಯಾದ ಅರ್ಜುನ್ ಮಹಾಕ್ಷಯ್ (ಸುದೀಪ್) ತನ್ನ ಖಡಕ್ ಕರ್ತವ್ಯದಿಂದಾಗಿ ಠಾಣೆಯಿಂದ ಠಾಣೆಗೆ ವರ್ಗಾವಣೆಯಾಗುತ್ತಾನೆ.
ವರ್ಗಾವಣೆ ಆಗುವ ಠಾಣೆಗೆ ಬರುವ ದಾರಿಯಲ್ಲಿ ರಾಜಕಾರಣಿಗಳ ಮಕ್ಕಳ ಅಟ್ಟಹಾಸ ಮೆರೆಯುವಾಗ ಅವರನ್ನ ಠಾಣೆಗೆ ಕರೆತಂದು ಎಫ್ಐಆರ್ ದಾಖಲಿಸುತ್ತಾರೆ. ಒಂದೆಡೆ ಸರ್ಕಾರವನ್ನೇ ಬೀಳಿಸಲು ಹೊರಟ ರಾಜಕಾರಣಿ ಮತ್ತೊಂದೊಡೆ ಠಾಣೆಯಲ್ಲಿ ಅವರ ಮಕ್ಕಳಿಬ್ಬರ ವಿರುದ್ಧ ಎಫ್ಐಆರ್, ಮಂದೆ ಏನಾಗುತ್ತೆ ಎಂಬುದೇ ಸಿನಿಮಾದ ರೋಚಕತೆ ಹಿಡಿದಿಟ್ಟುಕೊಂಡಿದೆ.
ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ಚಿತ್ರದ ಕಥೆಯನ್ನು ಆರಂಭಿಸಿರುವ ನಿರ್ದೇಶಕ ವಿಜಯಕಾರ್ತಿಕ್ ರಾತ್ರಿಯಿಂದ ಬೆಳಗಿನವರೆಗಿನ ಘಟನೆಗಳನ್ನು ಕಟ್ಟಿಕೊಟ್ಟಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಹೆಡ್ ಕಾನ್‌ಸ್ಟೆಬಲ್ ಪಾತ್ರದಲ್ಲಿ ಇಳವರಸು ನಟನೆ ಚೆನ್ನಾಗಿದೆ. ಉಗ್ರಂ ಮಂಜು, ಸುನೀಲ್, ವರಲಕ್ಷ್ಮಿ, ಸಂಯುಕ್ತ ಹೊರನಾಡು ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕಥೆಯ ವೇಗಕ್ಕೆ ಸೂಕ್ತವಾಗಿದೆ.