ಸುದ್ದಿಲೈವ್/ಶಿವಮೊಗ್ಗ
ಭೂಸುಧಾರಣಾ ಕಾಯ್ದೆ ಮತ್ತುಎಂಎಸ್ಪಿ ಕುರಿತು ದೆಹಲಿಯಲ್ಲಿ ರೈತರು ಮತ್ತು ಸರ್ಕಾರದ ನಡುವೆ ಸಂಘರ್ಷ ಶುರುವಾಗಿದೆ. ರೈತರಿಗೆ ಎಂಎಸ್ ಪಿಯಿಂದಲೇ ಸಮಸ್ಯೆಯಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ವಿರುದ್ಧ ಯಡಿಯೂರಪ್ಪನವರ ಗಮನಕ್ಕೆ ತಂದಾಗ ಬಗೆಹರಿಸುವುದಾಗಿ ಹೇಳಿ ಯಾವುದೇ ಕ್ರಮ ಆಗಿರಲಿಲ್ಲ. ಈ ಸಿದ್ದರಾಮಯ್ಯ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಕಾದು ನೋಡುವುದಾಗಿ ತಿಳಿಸಿದರು.
ಕನಿಷ್ಠ ಬೆಂಬಲಬೆಲೆ ಮತ್ತು ಸ್ವಾಮಿನಾಥನ್ ವರದಿ ತರಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಮಾಡಿಲ್ಲ. ಎಂಎಸ್ಪಿ ಶಾಸನ ಬದ್ದವಾಗಿ ಜಾರಿಯಾಗಬೇಕು. ಇದರಿಂದ ಕ್ರಮ ಬದ್ಧವಾಗಿ ಬೆಲೆ ಮೋಸವನ್ನ ರೈತನಿಗೆ ತಪ್ಪಿಸುತ್ತದೆ. ಸರ್ಕಾರಿ ನೌಕರರಿಗೆ 7 ನೇ ಸರ್ಕಸರಿ ವೇತನ ಜಾರಿಗೊಳಿಸಿದಂತೆ ರೈತನಿಗೆ ಯಾವುದೇ ವೇತನ ಇರುವುದಿಲ್ಲ.
ಬೆಲೆ ಪ್ರತಿವರ್ಷ ರೈತನ ಬೆಳೆ ವ್ಯತ್ಯಾಸವಾಗಲಿದೆ. ಸರ್ಕಾರಿ ನೌಕರು ರೈತರು ಸಂಪತತನ್ನ ಸೃಷ್ಠಿಸುವರು. ಅವರನ್ನ ಆರ್ಥಿಕ ಸಂಕಷ್ಟಕ್ಕೆ ನೂಕಲಾಗುತ್ತಿದೆ ಹಾಗಾಗಿ ಶಾಸನ ಬದ್ಧ ಎಂಎಸ್ಪಿ ಜಾರಿಯಾಗಬೇಕು ಎಂದರು.
ಸಿಟಿ ರವಿ ನತ್ತು ಹೆಬ್ಬಾಳ್ಕರ್ ನಡುವಿನ ಸಂಘರ್ಷ ಸದನದ ವ್ಯವಸ್ಥೆಯನ್ನ ಹಾಳುಮಾಡಿದೆ. ಸಮಸ್ಯೆ ಬಗೆಹರಿಸಲು ಇರುವ ಸದನದಲ್ಲಿ ಥರ್ಡ್ ಲಾಂಗ್ವೇಜ್ ಬಳಸಿಕೊಂಡು ಕೂತರೆ ಹೇಗೆ? ಪೊಲೀಸರು ಸಿಟಿ ರವಿಯನ್ನ ನಡೆಸಿಕೊಂಡ ರೀತಿಯೂ ಖಂಡನೀಯ ಎಂದರು.
100 ವರ್ಷಗಳ ಹಿಂದೆ ಗಾಂಧೀಜಿ ಬೆಳಗಾವಿಗೆ ಬಂದಿದ್ದರು. ಅದರ ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ಘನಾಂದಾರಿ ಕೆಲಸ ಮಾಡಿಕೊಂಡಿದೆ ಎಂದು ದೂರಿದರು.
ಕೆಎಸ್ ಆರ್ ಟಿಸಿ ನೌಕರರ ಸಮಸ್ಯೆಯನ್ನ ಹಿಂದಿನ ಸರ್ಕಾರ ಕುಳಿತು ಬಗೆಹರಿಸಲಿಲ್ಲ. ಆದರೆ ನನ್ನ ಮೇಲೆ ಭ್ರಷ್ಠಾಚಾರದ ಆರೋಪ ನಡೆಸಿತ್ತು. ಇದು ಬಗೆಹರಿಸಲು ಆಗದ ಸಮಸ್ಯೆಯಲ್ಲ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಆಗಿನ ಸರ್ಕಾರ 7 ನೇ ವೇತನ ಕೊಡುವುದಾಗಿ ಹೇಳಿದ್ದರು. ಮಾಡಲಿಲ್ಲ. ಸರ್ಕಾರ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಸರ್ಕಾರದ ಬೇಡಿಕೆ ಇಡಲಾಗುವುದು ಎಂದರು.
ರೈತ ಸಂಘಟನೆಗಳು ಒಡೆದಿದೆ. ಪ್ರಚಾರಕ್ಕೆ ಸೀಮಿತವಾಗಿದೆ. ಸಂಘಟನೆಯ ಕೆಲವರು ನೈತಿಕತೆಯಾಗಿರಬೇಕಿದೆ. ಕೆಲವರನ್ನ ಹೊರಗಿಡಲಾಗಿದೆ. ಅವರು ಕಾರಣ ಮತ್ತು ಸಮಂಜಸವಾಗಿ ಉತ್ತರಿಸಿ ಒಳಗೆ ಬರಲಿ ನಾವು ಮುಕ್ತವಾಗಿದ್ದೇವೆ ಎಂದರು.