ಸುದ್ದಿಲೈವ್/ಶಿವಮೊಗ್ಗ
ಮಹಿಳ ಮತ್ತು ಮಕ್ಕಳ ಕಲ್ತಾಣ ಇಲಾಖೆಯ ಅಡಿ ಬರುವ ವಿಕಲಚೇತನ ನವಕರ್ನಾಟಕ ಎಂಆರ್ ಡಬ್ಲೂ/ವಿಆರ್ ಡಬ್ಲೂ/ಯುಆರ್ ಡಬ್ಲು ಅವರಿಗೆ ಗೌರವಧನ ಹೆಚ್ಚಿಸುವಂತೆ ಮತ್ತು ಹುದ್ದೆ ಖಾಯಂಗೊಳಿಸುವಂತೆ ಆಗ್ರಹಿಸಲಾಯಿತು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಯುಆರ್ ಡಬ್ಲೂ, ವಿಆರ್ ಡಬ್ಲೂ ಅಡಿ ಕೆಲಸ ಮಾಡುವ ವಿಕಲಚೇತನರಿಗೆ 9 ಸಾವಿರ ಮತ್ತು ಎಂಆರ್ ಡಬ್ಲೂ 15 ಸಾವಿರ ಗೌರವ ಧನ ಪಡೆದು 17 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಇವರಿಗೆ ಕೆಲಸ ಖಾಯಂಗೊಳಿಸಬೇಕು ಸಂಬಳ ಹೆಚ್ಚಿಸಬೇಕೆಂದು ನವ ಕರ್ನಾಟಕ ವಿಕಲಚೇತನರ ಜಿಲ್ಲಾಧ್ಯಕ್ಷರಾದ ಯಶೋಧ ತಿಳಿಸಿದ್ದಾರೆ.
ರಾಜ್ಯದಲ್ಲಿ ಯುಆರ್ ಡಬ್ಲು, ವಿಆರ್ ಡಬ್ಲು ಎಂಆರ್ ಡಬ್ಲೂ 6780 ಜನ ಇದ್ದೇವೆ ಜಿಲ್ಲೆಯಲ್ಲಿ 280 ಜನ ಇದ್ದಾರೆ. ವಿಕಲಚೇತನರಲ್ಲಿ 21 ವಿವಿಧವಿಕಲತೆಯರಿದ್ದಾರೆ. ಈಗಾಗಲೇ ಶಾಸಕರಾದ ಸಂಗಮೇಶ್ವರ್, ವಿಜೇಂದ್ರರಿಗೆ ಶಾರದಾ ಪೂರ್ಯನಾಯ್ಕ್ ರಿಗೆ ಮನವಿ ನೀಡಿದ್ದೇವೆ.
ಆದರೆ ನಮ್ಮ ಬಗ್ಗೆ ಸರ್ಕಾರ ಮನವಿ ಪರಿಗಣಿಸುತ್ತಿಲ್ಲ. ಮತದಾನದ ಜಾಗೃತಿ, ವಾಹನದ ವ್ಯವಸ್ಥೆ, ಕೊರೋನ ಸಮಯದಲ್ಲಿ ನಮ್ಮನ್ನ ವಾರಿಯರ್ಸ್ ಎಂದು ಗುರುತಿಸಿಲ್ಲ. ವಿಆರ್ ಡಬ್ಲೂ ಮತ್ತು ಎಂಆರ್ ಡಬ್ಲೂ ರಿಗೆ18 ಸಾವಿರ ಎಂಆರ್ ಡಬ್ಲೂ 35 ಸಾವಿರ ಕವೇತನ ನೀಡಬೇಕು ಎಂದರು.