ಸುದ್ದಿಲೈವ್/ಶಿವಮೊಗ್ಗ
ಅಂಬೇಡ್ಕರ್ ರವರನ್ನ ಅವಮಾನಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ರನ್ನ ಅವಮಾನಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾರನ್ನ ಕೇಂದ್ರ ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಪಂಜಿನ ಮೆರವಣಿಗೆಯು ಶಿವಪ್ಪ ನಾಯಕನ ವೃತ್ತದಿಂದ ಹೊರಟು ನೆಹರೂ ರಸ್ತೆ ಮೂಲಕ ಗೋಪಿವೃತ್ತದ ವರೆಗೆ ತಲುಪಿದೆ. ಡಿ.18 ರಂದು ಸದನದಲ್ಲಿ ಡಾ.ಅಂಬೇಡ್ಕರ್ ಬಗ್ಗೆ ಅಮಿತ್ ಶಾರವರು ತಮ್ಮ ಮನಸ್ಸಿನಲ್ಲಿರುವ ಮಾತನ್ನ ಆಡಿದ್ದಾರೆ.
ಅಂಬೇಡ್ಕರ್ ರವರ ಸ್ಮರಣೆ ಮಾಡುವುದೆ ಒಂದು ವ್ಯಸನವಾಗಿದೆ. ಎಂದು ಬಹಿರಂಗ ಹೇಳಿಕೆ ಖಂಡನೀಯ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದು ಕಾಂಗ್ರೆಸ್ ಗೆ ವ್ಯಸನವಲ್ಲ ಸ್ಮರಣೆ ಆಗಿದೆ.
ಅವಹೇಳನಕಾರಿಯಾಗಿ ಬಿಂಬಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಕೇಂದ್ರ ಗೃಹಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.