ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ: ಮಹಾನಗರ ಪಾಲಿಕೆಯು ಆಯುಕ್ತ ಡಾ. ಕ"ತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ನೇ ಸಾಲಿನ ಬಜೆಟ್ ಪೂರ್ವಭಾ" ಸಭೆಯ ಆರಂಭದಲ್ಲಿ ಸಭೆಯು ಬಜೆಟ್ ಸಂಬಂಧಿಸಿದಂತೆ ಚರ್ಚೆ, ಸಲಹೆಗಳಿಂದ "ಮುಖಗೊಂಡು ಕುಂದುಕೊರತೆ ಸಭೆಯಾಗಿ ಮಾರ್ಪಾಟಿತು.
ನಾಗರೀಕ ಹಿತಾರಕ್ಷಣಾ ಸಮಿತಿಯ ಸಂಘಟನೆ ಕಾರ್ಯದರ್ಶಿ ಡಾ.ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ಕಳೆದ 10-15 ವರ್ಷಗಳಿಂದ ಈ ಸಭೆಯಲ್ಲಿ ಸಾರ್ವಜನಿಕರು ನಗರದ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಯಾವ ಸಮಸ್ಯೆಯು ಬಗೆಹರಿಯದೆ ಹಾಗೆಯೇ ಉಳಿದುಕೊಂಡಿದೆ. ಆದ್ಯತೆ ಮೇರೆಗೆ ಸಮಸ್ಯೆಗಳ ಪರಿಹಾರಕ್ಕೆ ಪಾಲಿಕೆ ಕಾರ್ಯೋನ್ಮುಖವಾಗಬೇಕೆಂದು ಸಲಹೆ ನೀಡಿದರು.
ಪ್ರಮುಖವಾಗಿ ನಗರದ ಹಸಿರೀಕರಣ, ಸ್ವಚ್ಛತೆ, ಹೈಜನಿಕ್ ವ್ಯವಸ್ಥೆ, ಪ್ರತ್ಯೇಕ ಮೀನು ಮಾರುಕಟ್ಟೆ , ಪಾಲಿಕೆಗೆಂದು ಸ್ಮಶಾನ ಅಭಿವೃದ್ಧಿ ಮೊದಲಾದವುಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಿ, ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾುಯಿಸಲಾಗಿತ್ತು. ಆದರೆ ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ವೆಚ್ಚಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ, ಇಂದಿನ ಸಭೆಯನ್ನು ಕರೆದಿರುವುದು ಸಮಂಜಸವಲ್ಲ ಎಂದರು.
ನಾಗರಿಕ ಹಿತರಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಬಿ.ಅಶೋಕ್‌ಕುಮಾರ್ ಮಾತನಾಡಿ, ಕನ್ಸರ್‌ವೆನ್ಸಿಗಳಲ್ಲಿ ಅನೇಕ ಕಡೆ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಕೆಲವೆಡೆ ಮೂತ್ರ ವಿಸರ್ಜನೆ ಇತ್ಯಾದಿಗಳಿಂದಾಗಿ ಓಡಾಡಲು ಆಗುತ್ತಿಲ್ಲ. ನಗರದಲ್ಲಿ 6 ವಾಣಿಜ್ಯ ಸಂಕೀರ್ಣಗಳು ಇದ್ದು, ಬಹುತೇಕ ಖಾಲಿ ಬಿದ್ದಿವೆ. ನಗರ ಮಧ್ಯದಲ್ಲಿ ಇರುವ ದೇವರಾಜ್ ಅರಸ್ ವಾಣಿಜ್ಯ ಸಂಕೀರ್ಣ ಸಂಪೂರ್ಣ ಪಾಳು ಬಿದ್ದಿದ್ದೆ.
ಅದರ ಸದ್ಭಳಕೆ ಪಾಲಿಕೆ ಮುಂದಾಗಬೇಕು ಎಂದು ಆಗ್ರ"ಸಿದರು. ನಗರ ಮಧ್ಯದಲ್ಲಿ ರಾಜಕಾಲುವೆ ಮೇಲೆಯೇ ವಾಣಿಜ್ಯ ಸಂಕೀರ್ಣವನ್ನು ನಿರ್ಣಯಿಸಿದೆ. ಇದು ಕಾನೂನು ಬಾಹಿರವಾಗಿದೆ. ಸಂಬಂಧಿಸಿದ ಅಧಿಕಾರಿ, ಇಂಜಿನಿಯರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾುಸಿದರು.
ಕನ್ನಡ ಸಾಹಿತ್ಯಚಟುವಟಿಕೆಗಳಿಗೆ ಅನುದಾನ ಮಿಸಸಲಿಡುವುದು, ಕ್ರೀಡಾಕೂಟ. ಕ್ರೀಡಾಪಟುಗಳಿಗೆ ಪ್ರೋತ್ಸಾಹಕವಾಗಿ ಅನುದಾನ ನೀಡುವ ಬೇಡಿಕೆಗಳು, ಟ್ರಾಫಿಕ್ ವ್ಯವಸ್ಥೆ ನಿರ್ವಹಣೆ, ರಸ್ತೆ ಗುಂಡಿ ಮುಚ್ಚುವುದು, ಗ್ರಂಥಾಲಯ ಸ್ಥಾಪನೆ, ವಾಕಿಂಗ್ ಪಾಥ್ ನಿರ್ಮಾಣ, ಪಾರ್ಕ್ ಅಭಿವೃದ್ದಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಪಟ್ಟಿಯೇ ಆಯುಕ್ತರ ಮುಂದೆ ಮಂಡಿಸಲ್ಪಟ್ಟಿದ್ದು, ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ನಾಗರೀಕ ಸಂಘಟನೆಗಳ ಮುಖಂಡರಿಂದ ಕೇಳಿಬಂದವು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ,ಟಿ ಅರುಣ್ ಮಾತನಾಡಿ ಪತ್ರಕರ್ತರ ಕಲ್ಯಾಣ ನಿಧಿಗೆ ಇದುವರೆಗೂ ಮೀಸಸಲಿಡುತ್ತಿದ್ದ 20 ಲಕ್ಷ ರೂಗಳನ್ನು 1 ಕೋಟಿ ರೂ ಗೆ ಹೆಚ್ಚಿಸಬೇಕು. ಪತ್ರಕರ್ತರ ಅರೋಗ್ಯವಿಮೆ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಹಣ ಮೀಸಸಲಿರಿಸಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಕರ್ತ ಎನ್. ರವಿಕುಮಾರ್ ಅವರು ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿ 143 ಅಂಗನವಾಡಿಗಳು, 245 ಸರ್ಕಾರಿ ಹೈಯರ್ ಪ್ರೆಮರಿ ಶಾಲೆಗಳಿದ್ದು ಇವುಗಳ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಹೆಚ್ಚು ಆಧ್ಯತೆ ನೀಡಬೇಕು, ಅಭಿವೃದ್ದಿ ಎಂದರೆ ಕೇವಲ ಚರಂಡಿ, ರಸ್ತೆ ಗೆ ಮಾತ್ರವೇ ಅಲ್ಲವೆಂದು ಸಲಹೆ ನೀಡಿದರು.
ಬೀದಿ ಬದಿ ವ್ಯಾಪಾರಿ ಸಂಘದ ಚನ್ನವೀರ ಗಾಮನಗಟ್ಟಿ ಮಾತನಾಡಿ, ವ್ಯಾಪಾರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಡಬೇಕು. ಅದಕ್ಕೆ ಪಾಲಿಕೆ ಅನುದಾನ ಮೀಸಲಿಡಬೇಕು ಎಂದು ಒತ್ತಾುಸಿದರು. ಶಿವಪ್ಪ ನಾಯಕ ಬಡಾವಣೆ ನಿವಾಸಿಗಳ ಸಂಘದ ಟಿ.ಕುಮಾರ್ ಅಲ್ಲಿ ರಸ್ತೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದರು.
ಪ್ರಿಯದರ್ಶಿನಿ ಬಡಾವಣೆ, ವಿನೋಬನಗರ, ವೀರಣ್ಣ ಲೇಔಟ್ ಸಂಘದ ಪ್ರತಿನಿಧಿಗಳು ಆರ್.ಎಂ.ಎಲ್.ನಗರದ ನಿವಾಸಿಗಳು, ಅಲಾರಿಂ ಬಡಾವಣೆ ನಿವಾಸಿಗಳ ಸಂಘ, ರವೀಂದ್ರನಗರ ಪ್ರೇರಣಾ ಮಹಿಳಾ ಸಂಘ, ಇನ್ನಿತರ ಬಡಾವಣೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಹೇಳಿಕೊಂಡರು ಎಂದು ಆಗ್ರಹಿಸಿದರು.
ಸಭೆಯಲ್ಲಿ ಉಪ ಆಯುಕ್ತರಾದ ನಿಂಗೇಗೌಡರು, ತುಷಾರ್, ಬಿ ಹೊಸೂರು, ಲೆಕ್ಕಾಧಿಕಾರಿ ಡಕಣನಾಯ್ಕ ಉಪಸ್ಥಿತರಿದ್ದರು.