ಮನೆಗಳವು ಪ್ರಕರಣಗಳಲ್ಲಿ ಆರೋಪಿಗಳು ಪುನರಾವರ್ತನೆಗೊಂಡರೆ ಅಂತಹವರನ್ನ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗುವುದು-ಎಸ್ಪಿ ಮಿಥುನ್ ಕುಮಾರ್




ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದಲ್ಲಿ 612 ಸ್ವತ್ತು ಕಳವು  ಪ್ರಕರಣಗಳು ದಾಖಲಾಗಿದ್ದರೆ,  ಇದರಲ್ಲಿ 298 ಪ್ರಕರಣಗಳನ್ನ ಜಿಲ್ಲಾ ಪೊಲೀಸರು ಪತ್ತೆ ಮಾಡಿ ವಾಪಾಸ್ ಮಾಲೀಕರಿಗೆ ಕಳುವು ವಸ್ತುಗಳನ್ನ ವಾಅಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರೆ. 

ಈ ಕುರಿತು ಇಂದು ಡಿಎಆರ್ ಮೈದಾನದಲ್ಲಿ ಚಿನ್ನಾಭರಣ, ಹಣ , ವಾಹನ, ಮನೆಕಳ್ಳತನದ ಆರೋಪಿಗಳನ್ನ ಪತ್ತೆಹಚ್ಚಿ  ಕಳೆದು ಕಳೆದುಕೊಂಡ ಸಂತ್ರಸ್ತರಿಗೆ ವಸ್ತುಗಳನ್ನ ವಾಪಾಸ್ ನೀಡುವ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಜನವರಿ 16 ರಿಂದ ಡಿಸೆಂಬರ್ 16 ರವರೆಗೆ ನಡೆದ ಕಳವು ಪ್ರಕರಣದಲ್ಲಿ 3,76,99,299 ಹಣ ರಿಕವರಿ ಮಾಡಲಾಗಿದೆ.  477 ಮೊಬೈಲ್ ಗಳನ್ನ ಇಸಿಐಆರ್ ಪೋರ್ಟಲ್ ನಲ್ಲಿ ಪತ್ತೆಹಚ್ಚಲಾಗಿದೆ. 612 ಸ್ವತ್ತು ಪ್ರಕರಣಗಳಲ್ಲಿ 2 ಕೊಲೆ ಪ್ರಕರಣ, 3 ದರೋಡೆ, 19 ಸುಲಿಗೆ, 4 ಸರಗಳ್ಳತನ, 51 ಕನ್ನಕಳುವು, 14 ಮನೆಗಳವು, 62 ಸಾಮಾನ್ಯಕಳುವು, 6 ಜಾನುವಾರುಕಳುವು, 70 ವಾಹನ ಕಳುವು, 13 ವಂಚನೆ ಪ್ರಕರಣ ದಾಖಲಾಗಿದ್ದವು. ಇದರಲ್ಲಿ 244 ಪ್ರಕರಣಗಳನ್ನ ಪತ್ತೆಮಾಡಲಾಗಿದೆ ಎಂದರು‌ 

ಇದರಲ್ಲಿ 3,22, 37,654 ಮೌಲ್ಯಗಳ ಎಲೆಕ್ಟ್ರಾನಿಕ್ಸ್ ವಸ್ತುಗಳು, ಜಾನುವಾರು, ಅಡಿಕೆ, ಬಂಗಾರ, ಬೆಳ್ಳಿ, ಮೊಬೈಲ್ ಫೊನ್, ವಾಹನಗಳು ಮೊದಲಾದ ವಸ್ತುಗಳನ್ನ ಪತ್ತೆ ಮಾಡಲಾಗಿದೆ. ಹಿಂದಿನ‌ ವರ್ಷದ 54 ಪ್ರಕರಣಗಳು ಈ ವರ್ಷ ಪತ್ತೆಯಾಗಿದೆ. ಇದರಲ್ಲಿ 26 ಮನೆಕಳ್ಳತನ, 11 ಸಾಮಾನ್ಯಕಳವು ಹಾಗು 17 ವಾಹನ ಸೇರಿದಂತೆ 54 ಪ್ರಕರಣಗಳು ಪತ್ತೆಯಾಗಿದೆ ಇವುಗಳು ಸೇರಿ 298 ಪ್ರಕರಣಗಳ ಪತ್ತೆಯಾಗಿದೆ ಎಂದರು. 

ಮನೆಕಳವು ಪ್ರಕರಣಗಳಲ್ಲಿ  ರಿಪೀಟರ್ ಆರೋಪಿಗಳಿರುತ್ತಾರೆ. ಅವರಿಗೆ ರೌಡಿಶೀಟರ್ ತೆಗೆಯುವುದಾಗಿ ಹೇಳಿದ ಎಸ್ಪಿ ಮಿಥುನ್ ಕುಮಾರ್ ಸೈಬರ್ ಪ್ರಕರಣಗಳು ಇದರಲ್ಲಿ ಇಲ್ಲ.  ಡಿಟಜಿಟಲ್ ಫ್ರಾಡ್ ಗಳಲ್ಲಿ ಹಣ ಹೆಚ್ಚಿಗೆ ಕೊಡುವುದಾಗಿ ನಂಬಿಸಿ ಮೋಸಮಾಡುವುದು, ಸ್ಟಾಕ್ ಇನ್ ವೆಸ್ಟ್ ಮೆಂಟ್ ಮಾಡಿಸುವುದಾಗಿ ಹೇಳಿ ನಂಬಿಸಿ‌ಮೋಸ ಮಾಡುವುದು ಹೆಚ್ಚಾಗಿದೆ. 

ಈ ಮೊದಲು ನಿಮಗೆ ಗಿಫ್ಟ್ ಬಂದಿದೆ ಎಂದು, ಕೆಲಸದ ಆಮಿಷವೊಡ್ಡಲಾಗುತ್ತಿತ್ತು. ಈಗ ಬದಲಾಗಿದೆ. ಎಲ್ಲದಕ್ಕಿನ ಮೊಬೈಲ್ ನಲ್ಲಿ ನಡೆಯುವ ಸಂಭಾಷಣೆಗಳಲ್ಲಿ ಯಾವುದೇ ಕಾರಣಕ್ಕೂ ಸೂಚನೆಗಳನ್ನ ಪಾಲಿಸಬೇಡಿ. ಹಣಹಾಕಲು ಸೂಚಿಸಿದರೆ 112 ಗೆ ಕರೆ ಮಾಡಿ, ಸಾಪ್ಟ್ ವೇರ್, ಇಂಜಿನಿಯರ್ ಗಳೇ ಸೈಬರ್ ನಲ್ಲಿ ಹೆಚ್ಚು ಮೋಸ ಹೋಗುತ್ತಿದ್ದಾರೆ. ಟ್ರಸ್ಟೆಡ್ ಹೂಡಿಕೆ ಮಾಡಿ. 20% ಇಂಟರೆಸ್ಟ್ ಕೊಡ್ತಿವಿ ಎಂದರೆ ಮೋಸಹೋಗಬೇಡಿ ಎಂದು ಮನವಿ ಮಾಡಿಕೊಂಡರು.‌

ಈ ವರ್ಷ ಶೇ.48 ಕ್ಕೂ ಹೆಚ್ಚು ವಸ್ತುಗಳ ಪತ್ತೆ ಮಾಡುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಲ ಸ್ಟೇಷನ್ ಗಳಲ್ಲಿ  ರಿಕವರಿ ರೇಟು ಶೇ.150 ರಷ್ಟಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close