ಸಿಬಿಐನಲ್ಲಿರುವ ನುರಿತ ಸಿಬ್ಬಂದಿಗಳು ಲೋಕಯುಕ್ತಕ್ಕೆ ಬೇಕಿದೆ-ಉಪಲೋಕಾಯುಕ್ತ ಫಣೀಂದ್ರ




ಸುದ್ದಿಲೈವ್/ಶಿವಮೊಗ್ಗ

ಸಿಬಿಐನಲ್ಲಿರುವ ನುರಿತ ತರಬೇತಿ ಹೊಂದಿದ ಸಿಬ್ಬಂದಿಗಳು ಲೋಕಾಯುಕ್ತಕ್ಕೆ ಬೇಕಿದೆ ಎಂದು ಉಪಲೋಕಾಯುಕ್ತ-1 ಫಣೀಂದ್ರ ತಿಳಿಸಿದರು. 

ಇಂದು ಶಿವಮೊಗ್ಗದ ಐಬಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನಿವೃತ್ತ ಸೈನಿಕ ಅಧಿಕಾರಿ ನೇಮಕ ಒಳ್ಳೆಯದು. ಈಗಾಗಲೇ ಲೋಕಾಯುಕ್ತಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ದಕ್ಷ ಪೊಲೀಸ್ ಅಧಿಕಾರಿ ನೇಮಕ ಮಾಡುವ ನಿರೀಕ್ಷೆಯಿದೆ ಎಂದರು. 

ಬಾಬು ಪಾಳ್ಯ ಕಟ್ಟಡ ಬಿದ್ದ ಪ್ರಕರಣದಲ್ಲಿ ಎಲ್ಲಾ ಅಧಿಕಾರಿಗಳ ಮೇಲೆ ಕೇಸ್ ದಾಖಲಾಗಿದೆ. ಲೋಕಾಯುಕ್ತಕ್ಕೂ, ಭ್ರಷ್ಟಾಚಾರ ತಡೆ ಕಾಯಿದೆಗೂ ಸಂಬಂಧ ಇಲ್ಲ. ಪೊಲೀಸ್ ಮತ್ತು ನ್ಯಾಯಾಲಯದ ನಡುವೆ ನಡೆಯುತ್ತದೆ. ಎಲೆಕ್ಟ್ರಾನಿಕ್ ಸಾಕ್ಷಿ ಸರಿಯಾಗಿ ಬಳಸಲು ಲೋಕಾಯುಕ್ತ ಸಿಬ್ಬಂದಿಗಳಿಗೆ ಕೊರತೆಯಿದೆ. 

ಲಂಚ ಪಡೆಯುವ ಸ್ವರೂಪ ಬದಲಾಗಿದೆ. ಪೊಲೀಸ್ ರಿಗೆ ಇನ್ನೂ ತರಬೇತಿ ಸಾಕಾಗಲ್ಲ. ಸಿಬಿಐ ತರಹ‌ ತರಬೇತಿ ಆದವರು ಬೇಕು. ಸಾಫ್ಟ್‌ವೇರ್ ಇಂಜಿನಿಯರ್, ತಾಂತ್ರಿಕ ಪರಿಣಿತರನ್ನ ಜೋಡಿಸಿಕೊಙಡು ತಂಡಕಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದರು. 

ಇನ್ನೂ ಇಬ್ಬರು ಗುಲ್ಬರ್ಗಾ, ಧಾರವಾಡ ವಲಯ ಉಪ ಲೋಕಾಯುಕ್ತ ನೇಮಕ ಆಗಬೇಕು. ಸಾಕಷ್ಟು ದೂರು ಬರುತ್ತಿದೆ ಎಂದ ಅವರು  ಖಾಸಗಿ ಭೇಟಿ ಹಿನ್ನಲೆಯಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಿದೆ. ಲೋಕಾಯುಕ್ತ ಕಾಯಿದೆ, ವಿವರಣೆ ನೀಡಿರುವೆ ಎಂದರು. 

ಎಲ್ಲಿ ತಪ್ಪು ಆಗಿದೆ, ತಿದ್ದಿಕೊಳ್ಳಲು ಮಾಹಿತಿ ನೀಡಿರುವೆ. ಭ್ರಷ್ಟಾಚಾರ ತಡೆ ಕಾಯಿದೆ ಅಡಿ ದೂರುಗಳು ಬಂದರೆ ಲೋಕಾಯುಕ್ತಕ್ಕೆ ನೇರ ಚಾರ್ಜಶೀಟ್ ಹಾಕಲು ಬರೊಲ್ಲ ಎಂದ ಅವರು 88 ಕೇಸ್ ಭ್ರಷ್ಟಾಚಾರ ತಡೆ ಕಾಯಿದೆ ಅಡಿ ದಾಖಲಾಗಿದ್ದು, 24 ಪ್ರಕರಣ ನ್ಯಾಯಾಲಯದಲ್ಲಿದೆ.  ಒಂದು ಪ್ರಕರಣ ಅಂತಿಮ ಹಂತಗಳಲ್ಲಿ ಇದೆ ಎಂದು ವಿವರಿಸಿದರು.

ಲೋಕಾಯುಕ್ತ ಪ್ರಕರಣದಲ್ಲಿ ಶಿಕ್ಷೆ ಕಡಿಮೆ ಇದೆ. ನಕಲಿ ದೂರು ಸಹ ಬರುತ್ತದೆ. ದೂರು ನಕಲಿ ಆದರೆ ದೂರುದಾರನ ಮೇಲೆ ಕ್ರಮವಾಗಲಿದೆ. ಈಗ ಎಲ್ಲ ಪ್ರಕರಣಗಳಲ್ಲಿ  ಆಧಾರ್ ಕಾರ್ಡ್ ಖಡ್ಡಾಯವಾಗಿದೆ.  ಲೋಕಾಯುಕ್ತದಲ್ಲಿ ಟ್ರ್ಯಾಪ್ ಆದ ಸರ್ಕಾರಿ ನೌಕರ ಅಥವ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಆ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದರು. 

ಟ್ರ್ಯಾಪ್ ಆದ ಅಧಿಕಾರಿ ಅಥವಾ ಸಿಬ್ಬಂದಿ ಬಡ್ತಿ ಪಡೆದು ಅದೇ ಜಾಗಕ್ಕೆ ನಿಯುಕ್ತಿಗೊಂಡಿರುವ ಉದಾಹರಣೆಗಳಿವೆ. ಇದರಿಂದ ದಾಳಿ ನಡೆದು ಏನು ಪ್ರಯೋಜನ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಉಪಲೋಕಾಯುಕ್ತರು, ಅದೇ ಜಾಗಕ್ಕೆ ಬರುವ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.  ಜಾಮೀನು ಮೇಲೆ ಬಂದಾಗಲೂ ಅದೇ ಜಾಗಕ್ಕೆ ಬಂದಿರುವ ಬಗ್ಗೆ ಗಮನಕ್ಕೆ ಬಂದ ತಕ್ಷಣ ಕ್ರಮ ಜರುಗಿಸುತ್ತೇವೆ ಎಂದರು. 

ಇಲಾಖಾ ವಾರು ತನಿಖೆಯನ್ನ ಪೊಲೀಸರು ಮಾಡ್ತಾರೆ. ಇದು ಲೋಕಾಯುಕ್ತಕ್ಕೆ ಬರೋದಿಲ್ಲ. ಸರ್ಕಾರ ಅಧಿಕಾರಕೊಟ್ಟರೆ ನಾವು ನಡೆಸುತ್ತೇವೆ. ಅದೇ ಲೋಕಾಯುಕ್ತ ನ್ಯಾಯಾಲಯಕ್ಕೆ ಹೋದರೆ ಶಿಕ್ಷೆ ಗ್ಯಾರೆಂಟಿಯಾಗಲಿದೆ. 

ಇತರೆ ಕೋರ್ಟ್ ಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಕೆಲ ಪ್ರೋಸೆಸ್ ಗಳು ಕೋರ್ಟ್ ಗಳನ್ನ ತಡೆಯುತ್ತಿವೆ. ಹಾಗಾಗಿ ನ್ಯಾ.ಸಂತೋಷ್ ಹೆಗಡೆಯವರು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡುವಂತೆ ಹೇಳಿದ್ದಾರೆ ಎಂದರು. 

ಶಿಕ್ಷೆ ಪ್ರಮಾಣ ಬಹಳ ಕಡಿಮೆ. ನ್ಯೂನತೆ ಬಗ್ಗೆ ಅವಲೋಕನ ಮಾಡಲಾಗಿದೆ. ಕೋರ್ಟ್ ಗೆ ಹೋಗುವ ಪ್ರಕರಣದಲ್ಲಿ ದೂರುದಾರರು ಸಾಕ್ಷಿ ಹೇಳಲು ಬರೊಲ್ಲ. ತನಿಖೆ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿಧ. ಎಸಿಬಿ ಕೇಸ್ ಪೆಂಡಿಂಗ್ ಇವೆ. 26 ಪಾಯಿಂಟ್ಸ್ ಗಳಲ್ಲಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ ಕ್ರಮಜರುಗಿಸಲು ಸೂಚಿಸಲಾಗಿದೆ ಎಂದರು. 

ಫೆಬ್ರವರಿ ಅಥವಾ ಮಾರ್ಚ್ ತಿಂಗಳಲಿ್ಲಿ ನಾಲ್ಕುದಿನ ಶಿವಮೊಗ್ಗಕ್ಕೆ ಬರುತ್ತಿದ್ದೇನೆ. ಟಿಪಿ ಹಾಕಿ ಬರುವುದರಿಂದ ಇಲಾಖೆಗಳಲ್ಲಿ ಸಂಚಲನ ಮೂಡಲಿದೆ. ಪ್ರವಾಸ ಕಾರ್ಯಕ್ರಮ ಬಂದು ಹೋಗುವ ತನಕ ಇಲಾಖೆ ಅಧಿಕಾರಿಗಳು ಖಡಕ್ ಆಗಿ ಕೆಲಸ ಮಾಡುತ್ತಾರೆ.  ಟಿಪಿ (ಪ್ರವಾಸದ ವೇಳಾಪಟ್ಟಿ)  ಹಾಕದೆ ಬಂದರೆ ಒಂದು ಅಥವಾ ಎರಡು ಇಲಾಖೆಗೆ ಅನಿರೀಕ್ಷಿತ ಭೇಟಿ ನೀಡಿ ಕ್ರಮಕೈಗೊಳ್ಳಬಹುದು. ಆದರೆ ಟಿಪಿ ಹಾಕುವ ಮೂಲಕ ಎಕ್ಲಾ ಇಲಾಖೆಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಾರೆ ಎಂದು ಗುಟ್ಟುಬಿಟ್ಟುಕೊಟ್ಟರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close