SUDDILIVE||ಡಿ.26
ಮಾಜಿ ಪ್ರಧಾನಿ ಮನಮೋಹನ ಸಿಂಗ್ ವಿಧಿವಶವಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಕಷ್ಟದ ಕಾಲದಲ್ಲಿ ದೇಶದ ಹಣಕಾಸಿನ ಮಂತ್ರಿಯಾಗಿ, ನಂತರ ಪ್ರಧಾನಿ ಮಂತ್ರಿಯಾಗಿ ಈ ದೇಶವನ್ನ ಮುನ್ನಡೆಸಿದ್ದರು. 5 ನೇ ಅತಿ ದೊಡ್ಡ ಆರ್ಥಿಕ ದೇಶ ಭಾರತ ಎನ್ನಲು ಅಡಿಪಾಯ ಹಾಕಿದ್ದವರೇ ಮನಮೋಹನ ಸಿಂಗ್ ರವರು.
2005-15 ರವರೆಗೆ 26% ರಷ್ಟು ಕಡುಬಡತನದಿಂದ ಮಧ್ಯಮವರ್ಗಕ್ಕೆ ಬಂದಂತಹ ಸಮಯವಾಗಿತ್ತು. ಆ ಸಮಯದಲ್ಲಿ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಇದ್ದರು. ಆರ್ಥಿಕ ಕ್ರಾಂತಿಕಾರ ಎಂದೇ ಹೇಳಲಾಗಿತ್ತು.
ಹಣಕಾಸು ಸಚಿವರಾಗಿದ್ದಾಗ ಚಿನ್ನವನ್ನ ಒತ್ತೆ ಇಟ್ಟು ಹಣವನ್ನ ತರಲಾಗಿತ್ತು. ಕಷ್ಟದ ಕಾಲದಲ್ಲಿ ಸಿಂಗ್ ದೇಶವನ್ನ ಮುಂದೆ ನಡೆಸಿದ್ದರು. ಎಲ್ ಪಿ ಜಿ ಮಾದರಿಯಲ್ಲಿ ಉದಾರ ನೀತಿಯನ್ನ ಜಾರಿಗೊಳಿಸಿದ್ದರು.
ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಅವರು ದೇಶದ ಪ್ರಧಾನಿಯಾಗಿದ್ದರು. ಗುರುವಾರ ಸಂಜೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮನಮೋಹನ್ ಸಿಂಗ್ 1991 ರಲ್ಲಿ ರಾಜ್ಯಸಭೆಗೆ ಪ್ರವೇಶ ಮಾಡುವ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದರು. ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು.
ನರೇಗಾ, 108 ಅಂಬ್ಯುಲೆನ್ಸ್ ಅರಂಭ, ಆದಿವಾಸಿಗಳಿಗೆ ಹಕ್ಕು ತಂದ ಕೀರ್ತಿ ಮನಮೋಹನ್ ಸಿಂಗ್ ರಿಗೆ ಸಲ್ಲುತ್ತದೆ.