ಸುದ್ದಿಲೈವ್/ಶಿವಮೊಗ್ಗ
ಮೊನ್ನೆ ಹಾಡೋನಹಳ್ಳಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳಿಗೆ ಏನೂ ಲಭ್ಯವಾಗಿರಲಿಲ್ಲ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ಅರಿತೆ ಕಾಲುಕಿತ್ತಿದ್ದ ಅಕ್ರಮ ಮರಳುಗಾರ ತಂಡಕ್ಕೆ ಕೊನೆಗೂ ಬುದ್ದಿಕಲಿಸುವಲ್ಲಿ ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಒಂದು ಲಾರಿಯ ಮಾಲೀಕ ಮತ್ತು ಚಾಲಕನ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.
ಮೊನ್ನೆ ರಾತ್ರಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಾದ ಪ್ರಿಯಾ ದೊಡ್ಡಗೌಡರವರು ಗಸ್ತು ತಿರುಗುವಾಗ KA -19 B-7930 ಲಾರಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಪತ್ತೆಯಾಗಿದೆ. ಲಾರಿಯೊಂದಿಗೆ ಬಂದ ಮಹಿಳಾ ಅಧಿಕಾರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ಡಿ.10ರಂದು ರಾತ್ರಿ 10-50 ಗಂಟೆ ಸಮಯದಲ್ಲಿ ಶಿವಮೊಗ್ಗ - ಶಿಕಾರಿಪುರ ಗಸ್ತು ಕಾರ್ಯದಲ್ಲಿರುವಾಗ ನಗರದ ರಾಗಿಗುಡ್ಡ ಹತ್ತಿರ ಲಾರಿಯಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದ ವಾಹನವನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಇದು ಅಕ್ರಮ ಮರಳು ಎಂಬುದು ಖಚಿತಗೊಂಡಿದೆ.
ಚಾಲಕನಿಗೆ ಮರಳು ಸಾಗಾಣಿಕೆ ಕುರಿತು ಪರವಾನಿಗೆ ಕೇಳಿದಾಗ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿದು ಬಂದಿದೆ. ಮರಳನ್ನು ಹಾಡೋನಹಳ್ಳಿ ಗ್ರಾಮದ ನದಿ ಪಾತ್ರದಲ್ಲಿ ತುಂಬಿಕೊಂಡು ಬರುತ್ತಿರುವುದಾಗಿ ಚಾಲಕ ತಿಳಿಸಿದ್ದ ತಡ ವಾಹನವನ್ನ ಸೀಜ್ ಮಾಡಲಾಗಿದೆ.
ವಾಹವನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಆವರಣಕ್ಕೆ ನಿಲ್ಲಿಸಿ ವಾಹವನದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದ ಲಾರಿ ಚಾಲಕ ಮತ್ತು ವಾಹನದ ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳು ದೂರು ದಾಖಲಿಸಿದ್ದಾರೆ.