ಸುದ್ದಿಲೈವ್/ಶಿವಮೊಗ್ಗ
ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯು ಹನುಮಕ್ಕನವರ ನೇತೃತ್ವದಲ್ಲಿ ನಡೆದಿದ್ದು, ಈ ವೇಳೆ ಮಾತನಾಡಿದ ಅವರು, ಬಿಸಿಯೂಟ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತರಿಗೆ ಹಿಡಿಗಂಟು ಬಿಡುಗಡೆ ಮಾಡಿಲ್ಲ. ಗೌರವಧನ ಹೆಚ್ಚಿಸುವುದಾಗಿ ಭರವಸೆ ನೀಡಿದ ಸಿದ್ದರಾಮಯ್ಯನವರ ಸರ್ಕಾರ, ಎರಡು ಬಾರಿ ಮಾತುತಪ್ಪಿದೆ.
ಮೊಟ್ಟೆ ಸುಲಿಯಲು ಒಂದು ರೂ. ಕೊಡಬೇಕು. ಬೆಳಗಾವಿಯಲ್ಲಿ ಮತ್ತೆ ಬೆಂಗಳೂರು ಅಧಿವೇಶನ ಅನ್ನದೆ ಇದೇ ಅಧಿವೇಶನದಲ್ಲಿ ಸರ್ಕಾರ ಗೌರವಧನ ಹೆಚ್ಚಿಸಬೇಕು. ಮಾತುತಪ್ಪಿದರೆ ತಕ್ಕಪಾಠ ಕಲಿಸಲಾಗುವುದು.
ಬಿಟ್ಟಿ ಭಾಗ್ಯವನ್ನ ನಾವು ಕೇಳಿಲ್ಲ. 6 ಗಂಟೆ ಬಿಸಿಯೂಟದವರು ಕೆಲಸ ಮಾಡುತ್ತಿದ್ದೀವೆ. ಸರ್ಕಾರ ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದರೆ ಮಾಡುತ್ತಿಲ್ಲ. ದಿನಗೂಲಿ ನೌಕರರನ್ನಾಗಿ ಮಾಡಿ ಎಂದರೆ ಮಾಡಲಿಲ್ಲ. ಕೇಂದ್ರ ಸರ್ಕಾರವು ಸಹ 21 ವರ್ಷದಿಂದ ಗೌರವ ಧನ ಹೆಚ್ಚಿಸಿಲ್ಲ. ಅನುದಾನ ಕಡಿತ ಮಾಡಿದೆ. ಸದನದಲ್ಲಿ ಕೇಂದ್ರ ಚರ್ಚಿಸಿ, ಗೌರವಧನದ ಬಗ್ಗೆ ಪುನರ್ ಪರಿಶೀಲಿಸಬೇಕು. ಹರಿಯಾಣ ಮತ್ತು ಇತರೆ ರಾಜ್ಯಗಳಲ್ಲಿ 11 ರಿಂದ 15 ಸಾವಿರ ರೂ ಸಂಬಳವಿದೆ. ಆದರೆ ನಾವುಗಳು 3700 ರೂಗೆ ಕೆಲಸ ಮಾಡ್ತಾ ಇದ್ದೀವಿ. ಈ ಬಗ್ಗೆ ಶಿಕ್ಷಣ ಸಚಿವರು ಮತ್ತು ರಾಜ್ಯದ ಸಿಎಂ ಗಮನಹರಿಸಬೇಕಿದೆ ಎಂದರು.
ನಿನ್ನೆ ಸಚಿವೆ ಲಕ್ಷ್ಮೀಹೆಬ್ವಾಳ್ಕರ್ ಅವರು ಇಬ್ಬರು ಹೆಣ್ಮಕ್ಕಳು ಗೃಹಲಕ್ಷ್ಮಿಯಲ್ಲಿ ಮನೆ ವಸ್ತುಗಳ ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ನಾವು ಸಹ ಹೆಣ್ಮಕ್ಕಳೆ ಆದರೆ ನಮಗೆ ಯಾವ ಅನುಕೂಲವಾಗಿಲ್ಲ. ಆದರೆ ದಾವಣಗೆರೆ ಎಂಪಿ ಅವರು ನಮ್ಮ ಮನವಿಯನ್ನ ಪುನಸ್ಕರಿಸಿ ಸದನದಲ್ಲಿ ಮತನಾಡುವುದಾಗಿ ಹೇಳಿದ್ದಾರೆ. ಅದು ಸ್ವಾಗತಾರ್ಹ ಎಂದರು.