ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಸ್ವವಿದ್ಯಾಲಯದಲ್ಲಿ ಭ್ರಷ್ಠಾಚಾರ ಹಾಗೂ ಅಸಮರ್ಪಕ ಆಡಳಿತ ನಿರ್ವಾಹಣೆಯನ್ನ ಕೊನೆಗಾಣಿಸುವಂತೆ ಆಗ್ರಹಿಸಿ ಹಾಗೂ ಭ್ರಷ್ಠಾಚಾರದಲ್ಲಿ ತೊಡಗಿರುವ ಕುಲ ಸಚಿವರನ್ನ ಅಮಾನತ್ತು ಮಾಡಿ ಸರ್ಕಾರದ ಮಟ್ಟದಲ್ಲಿ ಸೂಕ್ತ ತನಿಖೆಯಾಗುವಂತೆ ಒತ್ತಾಯಿಸಿ ಡಿ.24 ರಂದು ಎಬಿವಿಪಿ ಕುವೆಂಪು ವಿವಿಯಲ್ಲಿ ಪ್ರತಿಭಟಿಸಲು ತೀರ್ಮಾನಿಸಿದೆ.
ಸುದ್ದಿಗೋಷ್ಠಿ ನಡೆಸಿದ ಎಬಿವಿಪಿಯ ರಾಜ್ಯಕಾರ್ಯದರ್ಶಿ ಪ್ರವೀಣ್, ಕುವೆಂಪು ವಿವಿಯಲ್ಲಿ ಕುಲಸಚಿವರಾಗಿದ್ದಾಗ ಎಲ್ ಎಂ ಎಸ್ 1.35 ಕೋಟಿಯಲ್ಲಿ ಸಾಫ್ಟವೇರ್ ಖರೀದಿಗೆ ಸಿಂಡಿಕೇಟ್ ತೀರ್ಮಾನಿಸಿತ್ತು. ಸಿಂಡಿಕೇಟ್ ತೀರ್ಮಾನ ಹೆಚ್ಚಿಗೆ ಆಗಿದೆ ಎಂದು ತೀರ್ಮಾನಿಸಿದ್ದ ಲೋಖಂಡೆ ಕೆಲ ನಿರ್ಧಾರಗಳನ್ನ ಮಾಡಿ ಖರೀದಿಗೆ ಮುಙದಾಗಿದ್ದರು.
25 ಲಕ್ಷ ಮುಂಗಡವಾಗಿ ನೀಡಿ ಆನಂತರದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರತಿ ವಿದ್ಯಾರ್ಥಿಗಳಿಂದ ಸಂದಾಯವಾಗುವ ಶುಲ್ಕ ಶೇ.70ವರಷ್ಟು ವಿಶ್ವ ವಿದ್ಯಾಲಯ ಉಳಿಸಿಕೊಂಡು ಶೇ.30 ರಷ್ಟು ಶುಲ್ಕವನ್ನ ಟೆಂಡರ್ ಆದ ಫೀಮಾ ಸಾಫ್ಟ್ ವೇರ್ ಲಿಮಿಟೆಡ್ ಇವರಿಗೆ ಸೇವಾ ಶುಲ್ಕ ನೀಡುವಂತೆ 2023 ಸಾಲಿನ ಸೆ. 22 ರಂದು ಸಿಂಡಿಕೇಟ್ ನಿರ್ಧರಿಸುತ್ತದೆ.
ಆದರೆ ಸಾಫ್ಟ್ ವೇರ್ ಅಳವಡಿಸಲು ಗುತ್ತಿಗೆ ಹಿಡಿದ ಫಿಮೆ ಸಾಫ್ಟ್ ವೇರ್ ಲಿಮಿಟೆಡ್ ಮುಂದೆ ಬರಲೇ ಇಲ್ಲ. ಲೋಖಂಡೆಯವರು ವರ್ಗಾವಣೆಯಾದ ನಂತರ ತರಾತುರಿಯಲ್ಲಿ ಎಲ್ ಎಲ್ ಎಂಎಸ್ ನ ಸಾಫ್ಟವೇರ್ ಅಳವಡಿಕೆಗೆ ಸಂಸ್ಥೆ ಮುಂದಾಗಿತ್ತು. ನಂತರ ಈ ವರ್ಷದ ಆರಂಭದಲ್ಲಿ ನಡೆದ ದರ ಸಂಧಾನದಲ್ಲಿ ಸಂಸ್ಥೆಗೆ ಲೋಖಂಡೆ ಅವರು ಇದ್ದಾಗ ನಡೆದ ತೀರ್ಮಾನದ ಬದಲು ದರ ಸಂಧಾನಕ್ಕೆ ಸಮಿತಿ ರಚಿಸಲು ವಿವಿ ತೀರ್ಮಾನಿಸಿತು.
ಆಡಳಿತಾತ್ಮಕ ನಿರ್ಣಯ ತೆಗೆದುಕೊಂಡು ಲೋಖಂಡೆಯವರ ಸಿಂಡಿಕೇಟ್ ನಿರ್ಣಯವನ್ನ ಮೂಲೆಗುಂಪು ಮಾಡಿ 96ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ವಿದ್ಯಾರ್ಥಿಗಳ ಶೇರನ್ನ 30% ನಿಂದ 47% ಗೆ ಹೆಚ್ಚಿಸಲಾಗಿದೆ ಎಂದು ದೂರಿದರು.
ಪ್ರಸಾರರಂಗದಲ್ಲಿ 50 ಲಕ್ಷರೂ. ಹಣಕಾಸು ಅವ್ಯವಹಾರ ನಡೆದಿದೆ. ಈ ಪ್ರಲರಣ ಲೋಕಾಯುಕ್ತದಲ್ಲಿ ಕುಲಸಚಿವರ ವಿರುದ್ಧ ದೂರು ದಾಖಲಾಗಿದೆ. ಅಂಕಪಟ್ಟಿ ಮುದ್ರಣ ವಿಚಾರದಲ್ಲಿ ಅವ್ಯವಹಾರ ಹೀಗೆ ಹಲವಾರು ಭ್ರಷ್ಠಾಚಾರ ವಿರುದ್ಧ ನಾಳೆ ಸಾಂಕೇತಿಕವಾಗಿ ಪ್ರತಿಭಟಿಸಲಾಗುತ್ತಿದೆ.
ಜ.22 ರಂದು ಘಟಿಕೋತ್ಸವ ದಿನಾಂಕ ನಿಗದಿಯಾಗಿದ್ದು, ಒಂದು ವೇಳೆ ಘಟಿಕೋತ್ಸವದಂದು ಈ ಎಲ್ಲಾ ಸಮಸ್ಯೆಗಳು ಬಗೆಹರಿಸದಿದ್ದರೆ ಘಟಿಕೋತ್ಸವದ ದಿನವೇ ತೀವ್ರಸ್ವರೂಪ ಪ್ರತಿಭಟನೆ ನಡೆಸುವುದಾಗಿ ಪ್ರವೀಣ್ ಎಚ್ಚರಿಸಿದ್ದಾರೆ.