ಪ್ರೆಸ್ ಮೀಟ್ ಮಧ್ಯೆ ಡಿವೈಎಸ್ಪಿ, ಪಿಐ ಗುರುರಾಜ್ ಕೆ.ಟಿ. ರಿಗೆ, ಕೈಮುಗಿದ ಮಹಿಳೆ, ನ್ಯೂಟೌನ್ ಕ್ರೈಂ ಪಿಸಿಗಳ ಕಾರ್ಯಗಳನ್ನ ಹಾಡಿಹೊಗಳಿದ ಮತ್ತೋರ್ವ ಮಹಿಳೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ 298 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೆ ಸಾರ್ವಜನಿಕರಲ್ಲಿ ಪೊಲೀಸರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎರಡು ಪ್ರಕರಣಗಳು ಮಾತ್ರ ತುಂಬ ಗಮನಸೆಳೆದಿದೆ. ಪೊಲೀಸರ ಕಾರ್ಯದ ಬಗ್ಗೆ ಸಾರ್ವಜನಿಕರ ಮೆಚ್ಚಿಗೆ ವ್ಯಕ್ತವಾಗಿದೆ. 

ತುಂಗನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕೆ.ಟಿ, ಭದ್ರಾವತಿ ನ್ಯೂಟೌನ್ ಕ್ರೈಂ ಪೊಲೀಸರಾದ ನವೀನ್ ಮತ್ತು ಪ್ರಸನ್ನರ ಬಗ್ಗೆ ಸಂತ್ರಸ್ತರು ಮನತುಂಬಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆಯಲ್ಲಿ ಡಿವೈಎಸ್ಪಿ ಬಾಬು ಅಂಜನಪ್ಪನವರ ಪಾಲು ಇದೆ. 

ತುಂಗ ನಗರ ಪೊಲೀಸ್ ಠಾಣೆಯ ಪಿಐ ಹಾಗೂ ದಕ್ಷ ಅಧಿಕಾರಿ ಎನಿಸಿಕೊಂಡಿರುವ ಗುರುರಾಜ್ ಕೆಟಿ ಅವರಿಗೆ ನಾಗರತ್ನಮ್ಮ ಎಂಬ ಮಹಿಳೆ ಎಸ್ಪಿ ಪ್ರೆಸ್ ಮೀಟ್ ಮಧ್ಯದಲ್ಲೇ ಕೈಮುಗಿಯುವ ಮೂಲಕ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಧನ್ಯವಾದಗಳನ್ನ ಹೇಳಿದ್ದಾರೆ. 

ಮಲವಗೊಪ್ಪದ ನಿವಾಸಿಯಾಗಿದ್ದ ನಾಗರತ್ನಮ್ಮ ಗೃಹಪ್ರವೇಶಕ್ಕೆ ತೆರಳಿದ ವೇಳೆ ಮನೆಕಳ್ಳತನ ನಡೆದಿತ್ತು. 40 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ ಜೊತೆಗೆ 2000 ರೂ. ನಗದು ಕಳುವಾಗಿತ್ತು. ಈ ಪ್ರಕರಣವನ್ನ 4 ದಿನಗಳಲ್ಲಿ ಪತ್ತೆ ಮಾಡುವಲ್ಲಿ ಡಿವೈಎಸ್ಪಿ ಬಾಬು ಅಂಜನಪ್ಪ, ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆ.ಟಿ ಯಶಸ್ವಿಯಾಗಿದ್ದಾರೆ. 

ಕಳುವು ಮಾಲನ್ನ ಹಿಂತಿರುಗಿಸಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರೆಸ್ ಮೀಟ್ ಮಧ್ಯದಲ್ಲಿಯೇ ಎಸ್ಪಿ ಅವರಿಗೆ ಇಬ್ಬರು ಅಧಿಕಾರಿಗಳಿಗೆ ಥ್ಯಾಂಕ್ಸ್ ತಿಳಿಸಿ ಸಾರ್ ಎಂದು ಹೇಳಿ ಧನ್ಯತೆ ಮೆರೆದಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗದ ಪ್ರಭಾವತಿ ಎಂಬುವರು ದೀಪಾವಳಿಗೆ ಭದ್ರಾವತಿಯಲ್ಲಿರುವ ತಾಯಿಯ ಮನೆಗೆ ಹೋದಾಗ ಭದ್ರಾವತಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಬಸ್ ನಿಲ್ದಾಣದಿಂದ ಅಮ್ಮನ ಮನೆಗೆ ಹೋಗಲು 290 ಗ್ರಾಂ‌ ಬ್ಯಾಗ್ ನ್ನ ಬಸ್ ನಿಲ್ದಾಣದಲ್ಲೇ ಬಿಟ್ಟು ತೆರಳಿದ್ದರು. 

ಸುಮಾರು ಒಂದು ಗಂಟೆಯ ನಂತರ ಚಿನ್ನಾಭರಣದ ಬಗ್ಗೆ ನೆನಪಾಗಿದೆ. ಹೋಗಿ ನೋಡಿದಾಗ ಒಂದು ಹೆಂಗಸು ಆ ಬ್ಯಾಗ್ ನ್ನ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನ ಬೇಧಿಸಿದ ಪೊಲೀಸರು ಅಷ್ಟು ಚಿನ್ನವನ್ನ ವಾಪಾಸ್ ಪ್ರಭಾವತಿಗೆ ಒಪ್ಪಿಸಿದ್ದಾರೆ. 

ಎಸ್ಪಿ ಅವರು 7 ಸ್ಟಾಲ್ ಗಳಲ್ಲಿ ನ್ಯೂಟೌನ್ ಪೊಲೀಸರ ಬಳಿ ಬರ್ತಿದ್ದಂತೆ ಪ್ರಭಾವತಿಯವರು ಮುಂದು ಬಂದು ನಿಮಗೂ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ ಕ್ರೈಂ ಪೊಲೀಸರಾದ ನವೀನ್ ಮತ್ತು ಪ್ರಸನ್ನವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ವೇಳೆ ಕ್ರೈಂ ಪೊಲೀಸರು ಹಾಜರಿರಲಿಲ್ಲದಿದ್ದರೂ ಮನಪೂರಕ ಧನ್ಯವಾದಗಳನ್ನ ಹೇಳಿದ್ದಾರೆ. 


ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಪದಕಕ್ಕಾಗಿ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಪೈಪೋಟಿ ಇರುತ್ತದೆ. ಈ ಬಾರಿ ನಮಗೆ ಬೇಕು ಎಂಬ ಬಯಕೆ ಇರುತ್ತದೆ. ಸಾರ್ವಜನಿಕರ ಹೆಗ್ಗಳಿಕೆಗಿಂತ ಮುಖ್ಯಮಂತ್ರಿಗಳ ಪದಕ ಯಾಕೆ ಬೇಕು? ಹಾಗಂತ ಮುಖ್ಯಮಂತ್ರಿಗಳ ಪದಕವನ್ನ ಹೀಗಳಿಯುತ್ತಿಲ್ಲ. ಆದರೆ ಸಾರ್ವಜನಿಕರ ಮನಸ್ಪೂರಕ ಧನ್ಯವಾದಗಳು ಸದಾಕಾಪಾಡಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close