ಸುದ್ದಿಲೈವ್/ಶಿವಮೊಗ್ಗ
ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಹಣದ ವಿಚಾರದಲ್ಲಿ ಗಲಾಟೆಯಾಗಿದೆ. ಪೂರ್ವಿಕ್, ಸಂದೀಪ್ ಹಾಗು ದೀಕ್ಷಿತ್ ವಿರುದ್ಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿಯ ಪ್ರಣೀತ್ ಗೆ ಶಿವಮೊಗ್ಗದ ಪ್ರತಿಷ್ಠಿತಿಂಜಿನಿಯರ್ ಕಾಲೇಜಿನಲ್ಲಿ ಸೀಟು ಸಿಕ್ಕಿ 3 ನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದನು. ಈತನು ಶಿವಮೊಗ್ಗದ ನವುಲೆಯಲ್ಲಿ ರೂಮ್ ಮಾಡಿಕೊಂಡು ಕಾಲೇಜಿಗೆ ಓಡಾಡಿಕೊಂಡಿದ್ದ.
ಈತನ ರೂಮ್ ಗೆ ಪೂರ್ವಿಕ್ ಎಂಬಾತ ಓದಲು ಬರ್ತಿದ್ದ. ಸಲುಗೆ ಪಡೆದುಕೊಂಡ ಪೂರ್ವಿಕ್ ಸ್ನೇಹಿತರಾದ ಸಂದೀಪ್ ಹಾಗು ದೀಕ್ಷಿತ್ ರವರುಗಳನ್ನು ಕರೆದುಕೊಂಡು ಬಂದು ಮದ್ಯಪಾನ ಮಾಡುವುದು ಮಾಡತ್ತಿದ್ದನು. ಮದ್ಯಪಾನಕ್ಕೆ ಹಣ ಕಡಿಮೆಯಾದರೆ ಹಣಕ್ಕೆ ಪೀಡಿಸುತ್ತಿದ್ದ. ಹೀಗೆ ಈತನ ಹಾವಳಿಯಿಂದ ಪ್ರಣೀತ್ ತನ್ನ ರೂಮನ್ನೇ ಕಾಶಿಪುರಕ್ಕೆ ಶಿಫ್ಟ್ ಮಾಡಿಕೊಂಡಿದ್ದ.
ಬಾಡಿಗೆ ಮನೆ ಮಾಡಿಕೊಂಡಿದ್ದ ಪ್ರಣೀತ್ ಗೆ ಪೂರ್ವಿಕ್ ಮತ್ತು ಸ್ನೇಹಿತರಿಂದ ಹಣಕೊಡು ಇಲ್ಲವಾದರೆ ಗತಿ ಕಾಣಿಸುವುವುದಾಗಿ ಬೆದರಿಕೆಯನ್ನ ಹಾಕಿರುವುದಾಗಿ ಪ್ರಣೀತ್ ದೂರಿನಲ್ಲಿ ದೂರಿದ್ದಾರೆ.
ಡಿ.24 ರಂದು ರಾತ್ರಿ ಸುಮಾರು 08.30 ಗಂಟೆಗೆ ಪ್ರಣೀತ್ ತನ್ನ ಸ್ನೇಹಿತ ಕಾಶಿಪುರದ ಹರೀಶ್ ನೊಂದಿಗೆ ಸುತ್ತಾಡಿಕೊಂಡು ಬರೋಣವೆಂದು ಬೈಕ್ ನಲ್ಲಿ ಹೋಗುವಾಗ ಸೋಮಿನಕೊಪ್ಪ ರಸ್ತೆಯಲ್ಲಿರುವ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ.
ಬೈಕ್ ಅನ್ನು ತಿರುಗಿಸಿಕೊಂಡು ಬರುವ ಸಲುವಾಗಿ ರೈಲ್ವೆ ಬ್ರಿಡ್ಜ್ ಹತ್ತಿರ ಬೈಕ್ ತಿರುಗಿಸುತ್ತಿರುವಾಗ ರಾತ್ರಿ 10.30 ಗಂಟೆಯ ಸುಮಾರಿಗೆ ಪೂರ್ವಿಕ್, ಸಂದೀಪ್ ಮತ್ತು ದೀಕ್ಷಿತ್ ರವರುಗಳು ಇವರನ್ನ ನೋಡಿ ಬೈಕ್ ನ್ನ ಅಡ್ಡ ಹಾಕಿ ನಿಲ್ಲಿಸಿ ಅವ್ಯಾಚ್ಯಶಬ್ದಗಳಿಂದ ಬೈದು ಹಣಕೇಳಿದರೆ ಕೊಡಲ್ವಾ ಎಂದು ಗದರಿಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.