ಹಾಲು ನೀಡಲು ಡೈರಿಗೆ ಹೋಗುವಾಗ ಹಳ್ಳಕ್ಕೆ ಬಿದ್ದು ಬೈಕ್ ಸವಾರ ಸಾವು


ಸುದ್ದಿಲೈವ್/ಶಿವಮೊಗ್ಗ

ಹೊಸನಗರ ತಾಲೂಕು ಹಾರೋಹಿತ್ತಲು ಗ್ರಾಮದ ಮತ್ತಲಿಜೆಡ್ಡಿನಲ್ಲಿ ಬೈಕ್ ನಲ್ಲಿ ಸ್ಕಿಡ್ ಆಗಿ ಪಕ್ಕದ ಗುಂಡಿಗೆ ಬಿದ್ದು ಸವಾರ ಸಾವುಕಙಡಿರುವ ಘಟನೆ ವರದಿಯಾಗಿದೆ. 

ಹಾರೋಹಿತ್ತಲು ಗ್ರಾಮ ಮತ್ತಲಿಜೆಡ್ಡು ವಾಸಿ ದೇವೇಂದ್ರ(55) ಎಂಬುವರು ಹತ್ತಿರದ  ಬೆಳ್ಳೂರು ಬಳಿಯ ಅಡ್ಡೇರಿಯಲ್ಲಿರುವ ಡೈರಿಗೆ ಹಾಲು ಕೊಡಲು ಬೈಕ್ ನಲ್ಲಿ ಹೋಗುವಾಗ  ಗಿರೀಶ್ ರವರ ಮನೆಯ ಬಳಿ ರಸ್ತೆಯ ಪಕ್ಕದಲ್ಲಿರುವ ಹಳ್ಳಕ್ಕೆ ಬಿದ್ದು ಸತ್ತಿದ್ದು, ಹಳ್ಳವನ್ನ ಸರಿಪಡಿಸದೆ ಜನಪ್ರತಿನಿಧಿಗಳು ಬಲಿಪಡೆದಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಳೆಗಾಲದಲ್ಲಿ ಕಾಡಿನಿಂದ ಹರಿದು ಬರುವ ಮಳೆ ನೀರು ಸಾಗಿಸಲು ಚಾನೆಲ್ ಮೂಲಕ ಹರಿದು ಹೋಗಲು ತೋಡಿರುವ ಗುಂಡಿಯನ್ನ ಮುಚ್ಚದೆ ತೆರೆದಿಟ್ಟ ಪರಿಣಾಮ ಬೈಕ್ ನಿಂದ ಬಿದ್ದ ದೇವೇಂದ್ರರವರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದು ಆಕಸ್ಮಿಕ ಸಾವಲ್ಲ, ಗುಂಡಿಯನ್ನ ಸರಿಪಡಿಸದೆ  ನಿರ್ಲಕ್ಷ ಮಾಡಿದ ಪರಿಣಾಮ ಬಲಿಪಡೆಯಲಾಗಿದೆ ಎಙದು ಸಹ ಗ್ರಾಮಸ್ಥರು ದೂರಿದ್ದಾರೆ.  ಈ ಹಳ್ಳಕ್ಕೆ ಜಾನುವಾರುಗಳು ಬಿದ್ದು ಜೀವಕಳೆದುಕೊಂಡಿದ್ದಾಗಲೇ ಜನಪ್ರತಿನಿಧಿಗಳಿಗೆ ತಿಳಿಸಿದಾಗ ನಿರ್ಲಕ್ಷಿಸಿದ ಪರಿಣಾಮ ಇಂದು ದೇವೇಂದ್ರರನ್ನ ಕಳೆದುಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ‌ 

ಮೃತ ದೇವೇಂದ್ರಪ್ಪನವರಿಗೆ ಮೂರು ಜನ ಮಕ್ಕಳು ಮೂವರಿಗೂ ಮದುವೆಯಾಗಿದೆ. ಕೃಷಿ ಕಾರ್ಮಿಕರಾಗಿ ದೇವೇಂದ್ರಪ್ಪ ಜೀವನ ಸಾಗಿಸುತ್ತಿದ್ದರು. ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close