ಆಹಾರ ಪಾರ್ಕ್ ನ ಜಾಗದಲ್ಲಿ ಅಕ್ರಮ ಮರಳು ಸಾಗಾಣಿಕೆ-ಬಿತ್ತು ಕೇಸು!

 




ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಓತಿಘಟ್ಟದಲ್ಲಿ ಆಹಾರ  ಕರ್ನಾಟಕ ನಿಯಮಿತವು ಹೊಂದಿರುವ ಜಮೀನಿನಲ್ಲಿ ಅಕ್ರಮ ಮರಳನ್ನ‌ಕಳ್ಳ ಸಾಗಣೆ ಮಾಡುತ್ತಿದ್ದ ವಾಹನವನ್ನ ತಂದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ತಂದು ಇರಿಸಲಾಗಿದೆ. ಅಕ್ರಮ ಮಣ್ಣು ಸಾಗಾಣಿಕೆಯಿಂದ ರಾಜ್ಯಸರ್ಕಾರದ  ರಾಜಸ್ವಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ಶಿವಮೊಗ್ಗ ತಾಲೂಕು ನಿದಿಗೆ ಹೋಬಳಿ ಸೋಗಾನೆ ಗ್ರಾಮದ ಸರ್ವೆ ಸಂಖ್ಯೆ 120 ರಲ್ಲಿ, 97.36 ಎಕರೆ ಜಮೀನಿನಲ್ಲಿ ಆಹಾರ ಪಾರ್ಕ್ ನಿರ್ಮಿಸುವ ಸಲುವಾಗಿ ಆಹಾರ ಕರ್ನಾಟಕ ನಿಯಮಿತವು ಹೊಂದಿರುವ ಜಮೀನಿನಲ್ಲಿ ಅಪರಿಚಿತರು ಅಕ್ರಮವಾಗಿ ಆಹಾರ ಕರ್ನಾಟಕ ನಿಯಮಿತದ ಅನುಮತಿ ಇಲ್ಲದೆ ಮಣ್ಣನ್ನು ಬಳಸುತ್ತಿರುವ ಕುರಿತು  ಸೂಕ್ತ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಮಾಡಲಾಗಿತ್ತು.

ಅದರಂತೆ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಪ್ರಿಯಾ ಮತ್ತು ಜ್ಯೋತಿ ಕೆ.ಕೆ ರವರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದಾಗ  ಸೋಗಾನೆ ಸರ್ವೆ ಸಂಖ್ಯೆ 120ರ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಕಳ್ಳತನದಿಂದ ಸಾಗಾಣಿಕೆ ಮಾಡಿರುವ ಕುರುಹುಗಳು (ಗುಂಡಿಗಳು) ಕಂಡುಬಂದಿದೆ. ಆದರೆ ಆ ವೇಳೆ ಯಾವುದೇ ವಾಹನಗಳು ಪತ್ತೆಯಾಗಿರುವುದಿಲ್ಲ.  ಆದರೆ ಅಕ್ರಮವಾಗಿ ಮಣ್ಣನ್ನು ಎತ್ತುವಳಿ ಮಾಡಲು ಬಳಸಿದ  ಬಳಸಿದ ಎಕ್ಸವೇಟರ್ ನಿಂದ 15ಗುಂಟೆ ಪ್ರದೇಶದಲ್ಲಿ, ಸುಮಾರು 1,80,000/-ರೂನಷ್ಟು ಬೆಲೆಬಾಳುವ ಮಣ್ಣನ್ನು (ಮುರಂ) ಕಳ್ಳತನ ಮಾಡಿರುವುದು ಅಧಿಕಾರಿಗಳಿಗೆ ತಿಳಿದು ಬಂದಿದೆ.

ಎಜ್ಸಾವೇಟರ್ ವಾಹನವನ್ನ ತುಂಗನಗರ ಪೊಲೀಸ್ ಠಾಣೆಗೆ ತಂದು ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ.   ಹಾಗೂ ಈ ಕೃತ್ಯವು ದಿನಾಂಕ:07/11/2024 ರ ಮದ್ಯಾಹ್ನ 12:00 ಗಂಟೆಯಿಂದ ದಿನಾಂಕ:25/12/2024 ರ ಬೆಳಗ್ಗೆ 11:00 ಗಂಟೆಟಯವರೆಗೆ ನಡೆದಿದೆ ಎಂದು ದೂರಿನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಸೋಗಾಮೆ ಗ್ರಾಮದ ಸರ್ವೆ ಸಂಖ್ಯೆ 120 ರಲ್ಲಿ, ಆಕ್ರಮವಾಗಿ ಕಳ್ಳತನದಿಂದ ಮಣ್ಣು ತೆಗೆದು ಸರ್ಕಾರಕ್ಕೆ ರಾಜಸ್ಯವನ್ನು  ಮಾಡಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ದೂರು ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close