ಬಾಯ್ಲರ್ ಸ್ಪೋಟ-ನಾಪತ್ತೆಯಾಗಿದ್ದ ರಘು ಶವವಾಗಿ ಪತ್ತೆ



ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯ ರೈಸ್ ಮಿಲ್ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರಘುವಿನ(48) ಮೃತ ದೇಹ ಪತ್ತೆಯಾಗಿದೆ. ಇದರಿಂದ ಪ್ರಕರಣದ ಮೊದಲ ಸಾವಿನ ಪ್ರಕರಣ ವರದಿಯಾಗಿದೆ. 

ಬಾಯ್ಲರ್ ಸ್ಪೋಟದಲ್ಲಿ ನಾಪತ್ತೆಯಾಗಿದ್ದ ರಘುವಿನಿಗಾಗಿ ಹುಡುಕಾಟ ಮುಂದುವರೆದಿತ್ತು. ಬೆಳಗಿನ ಜಾವ 1-30 ರಿಂದ 2 ಗಂಟೆಯ ವೇಳೆಗೆ ಆತನ ಮೃತದೇಹ ಪತ್ತೆಯಾಗಿದೆ. ಭದ್ರಾವತಿ ಅಗ್ನಿಶಾಮಕದಳದ ತೀವ್ರಶೋಧದ ನಡುವೆ ರಘು ಶವವಾಗಿ ಪತ್ತೆಯಾಗಿದ್ದಾನೆ. 

ಸ್ಪೋಟದ ತೀವ್ರತೆಗೆ ರೈಸ್ ಮಿಲ್ ಛಿದ್ರವಾಗಿತ್ತು. ಕಟ್ಟಡದ ಅವಶೇಷದಲ್ಲಿ ರಘುವಿನ ಮೃತ ದೇಹ ಹುದಗಿಹೋಗಿತ್ತು. ಅವಶೇಷದ ಕಟ್ಟಡದ ಒಳಗೆ ಹುದಗಿದ್ದ  ರಘುವಿನ ಮೃತದೇಹವನ್ನ ಹೊರಗೆ ತೆಗೆಯಲಾಗಿದೆ. 

ರಘು ಬಾಯ್ಲರ್ ಆಪರೇಟರ್ ಆಗಿದ್ದು, ಔದ್ರಾವತಿ ಚನ್ನಗಿರಿ ರೈಸ್ ಮಿಲ್ ನಲ್ಲಿ ಕಳೆದ ೧೫ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ್ದ ರಘು ರೈಸ್ ಮಿಲ್ ಹಿಂಭಾಗದ ಮಲ್ಲಿಕಾರ್ಜುನ್ ಬಡಾವಣೆ ನಿವಾಸಿಯಾಗಿದ್ದರು. 

ರಘು ಸಾವಿನ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close