ಕೇಂದ್ರ ವಕ್ಫ್ ಸಮಿತಿ ಎದುರು ರೈತರನ್ನ ಕರೆಸುತ್ತೇವೆ: ಕುಮಾರ್ ಬಂಗಾರಪ್ಪ



ಸುದ್ದಿಲೈವ್/ಸೊರಬ

ಕೇಂದ್ರ ವಕ್ಫ್ ಸಮಿತಿ ಎದುರು, ನಾವು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿರುವ ಸಂತ್ತಸ್ತ ರೈತರನ್ನ ಸರದಿ ಸಾಲಿನಲ್ಲಿ ನಿಲ್ಲಿಸಿ ಸಮಸ್ಯೆಗಳನ್ನ ಹೇಳಿಸಲಾಗುವುದು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದರು. 

ಸೊರಬದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ವಕ್ಫ್ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ರೈತರನ್ನ ಭೇಟಿ ಮಾಡಿ ಮಾಹಿತಿ ಕಲೆಹಾಕಿದ್ದೇವೆ. ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ. 

ವರದಿಯನ್ನ Jagadambika pal, the chiraman of the joint committee of parliament examining the Waqf ( amendment) bill ಗೆ ನೀಡಿದ್ದೇವೆ. ನಾನು ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಬಳಿ ಸುಧೀರ್ಘವಾಗಿ ಎರಡು ಗಂಟೆ ಮಾತನಾಡಿದ್ದೇವೆ. 

ನಾನು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನಿರ್ವಹಿಸಿದ ಜಬಾವ್ದಾರಿಗಳ ಅನುಭವವನ್ನೂ ಹಂಚಿಕೊಂಡಿದ್ದೇನೆ. ಅವರು ನಮ್ಮ ವರದಿಯನ್ನ ಮೆಚ್ಚಿಕೊಂಡು ಈ ವರದಿಯನ್ನ ಕರ್ನಾಟಕ ಮಾಡೆಲ್ ಎಂದು ಪರಿಗಣಿಸಿದ್ದಾರೆ. ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ಬರಬೇಕಿತ್ತು‌. ಆದರೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಇದು ಚರ್ಚೆಗೆ ಬರಲಿದೆ. ಅಷ್ಟರಲ್ಲಿ ಸಲಹೆಗಳನ್ನ ಕಳಿಸಲು ನಮಗೆ ಹೇಳಿದ್ದಾರೆ. ಶಿವಮೊಗ್ಗದಲ್ಲಿಯೂ ವಕ್ಫ್ ಸಂಬಂಧಿಸಿದ ಸಮಸ್ಯೆಗಳಿವೆ. ಇಲ್ಲಿಯೂ ಪರಿಶೀಲನೆ ಮಾಡಿ ಜಮೀನಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇವೆ. 

ವಕ್ಫ್ ಕಾನೂನು ಬಂದಾಗಿನಿಂದ ಈ ತನಕ ದಾನಿಗಳು ನೀಡಿದ ಆಸ್ತಿಯನ್ನ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಕೇಂದ್ರ ಸಮಿತಿ ರಾಜ್ಯಕ್ಕೆ ಭೇಟಿ ನೀಡಿದಾಗ ಸಂಬಂಧಪಟ್ಟ ಅಧಿಕಾರಿಗಳನ್ನ ಸಮಿತಿ ಮುಂದೆ ನಿಲ್ಲಿಸುತ್ತೇವೆ. ಮೂರು ಸಾವಿರ ಪುಟಗಳ ವರದಿಯಲ್ಲಿ ರೈತರ ವಿವರ ಇವೆ‌‌. ರೈತರನ್ನೇ ಕರೆಸುತ್ತೇವೆ. ಸುಮಾರು ಮೂರು ಲಕ್ಷ ಸಂತ್ರಸ್ತರು ರಾಜ್ಯದಲ್ಲಿದ್ದಾರೆ ಎಂದರು.

ಒಟ್ಟು 239 ಬೂತ್ ಗಳಿವೆ, ಈಗಾಗ
ಲೇ ಸದಸ್ಯತ್ವ ಅಭಿಯಾನ ಮುಗಿದಿದೆ. ಸೊರಬದಲ್ಲಿ ಮೂವತ್ತು ಸಾವಿರ ಸದಸ್ಯರನ್ನ ಮಾಡಿದ್ದೇವೆ. ನಮ್ಮ ಟಾರ್ಗೆಟ್ ಐವತ್ತು ಸಾವಿರ ಇತ್ತು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close