ಸುದ್ದಿಲೈವ್/ಶಿವಮೊಗ್ಗ
ಬ್ಯಾಂಕ್ ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಗೆ 16ಲಕ್ಷರೂ. ವಂಚಿಸಿರುವ ಘಟನೆ ಎರಡು ವರ್ಷಗಳ ಬಳಿಕ ದೂರಾಗಿ ದಾಖಲಾಗಿದೆ.
ವಿದೇಶದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಬೇಕಾದ ಹಣಕ್ಕೆ ತಾಯಿ ಮೋಸ ಹೋದ ಕಥೆಯಿದು. ಅಮಾಯಕರನ್ನ ಸುಲಿಗೆ ಮಾಡಿದ ಕಥೆಯಿದು. ಸಹಾಯ ಕೇಳಿದವರನ್ನ ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಘಟನೆಯಿದಾಗಿದೆ.
ವಿನೋಬ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ವಿಜಯವಾಣಿ ಎಂಬ ಮಹಿಳೆ 2014 ರಲ್ಲಿ ಹರ್ಬಲ್ ಲೈಫ್ ಮಾರಾಟ ಮಾಡಿಕೊಂಡು ಬಂದಿದ್ದು ವಿನೋಬನಗರದ ಹರ್ಬಲ್ ಲೈಫ್ ಕ್ಲಬ್ ನ್ನ ಸಹ ಆರಂಭಿಸಿದ್ದರು. ಹರ್ಬಲ್ ಲೈಫ್ ಮಾರುಕಟ್ಟೆ ಮಾಡುವಾಗ ಹರೀಶ್ ಎಂಬಾತ ಪರಿಚಯವಾಗುತ್ತಾನೆ.
ಆತ ಕ್ಲಬ್ ಗೆ ಬಂದು ಹೋಗುತ್ತಿದ್ದ. ಯಾವಾಗ ಮಹಿಳೆ ಯುಕೆಯಲ್ಲಿರುವ ಮಗಳ ವಿದ್ಯಾಭ್ಯಾಸಕ್ಕೆ ಎರಡು ಲಕ್ಷ ರೂ. ಅವಶ್ಯಕತೆ ಬಿದ್ದ ಕಾರಣ, ಬ್ಯಾಂಕ್ ಎಂಪ್ಲಾಯ್ ಎಂದು ಹೇಳಿಕೊಂಡ ಹರೀಶ್ ಬಳಿ ಸಾಲಕ್ಕೆ ಸಹಾಯ ಮಾಡುವಂತೆ ಕೋರಿದ್ದಾರೆ. ಹರೀಶ್ ತನಗೆ ಬೆಂಗಳೂರಿನ ನಳಿನಿ ಎಂಬ ಮಹಿಳೆ ಪರಿಚಯವಿದ್ದು ಅವರಿಂದ ಸವ್ಸಿಡಿ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ.
25 ಲಕ್ಷ ರೂ. ಸಬ್ಸಡಿ ಹಣವನ್ನ ನಿಮಗೆ ಕೊಡಿಸುವುದಾಗಿ ಮೊಬೈಲ್ ಕಾನ್ಫರೆನ್ಸ್ ಮೂಲಕ ಮಾತನಾಡಿಸಿ ಒಪ್ಪಿಸಿ 25 ಲಕ್ಷ ರೂ. ಸಬ್ಸಿಡಿ ರೂ. ಹಣ ಕೊಡಿಸುವುದಾಗಿ ನಂಬಿಸಲಾಗಿದೆ. 25 ಲಕ್ಷಕ್ಕೆ ಮೊದಲು ಕಮಿಷನ್ ಕೊಡಿಸಬೇಕಿದೆ ಎಂಬ ಶರತ್ತು ಹೇಳಲಾಗಿರುತ್ತದೆ.
ಹಣ ಸಂಗ್ರಹಿಸಿ ಕೊಟ್ಟ ಮಹಿಳೆಗೆ ಇಂದು ನಾಳೆ ಸಾಲ ಕೊಡಿಸುವುದಾಗಿ ಹೇಳಿ ನಂಬಿಸಿ ಒಂದು ದಿನ 1 ಕೋಟಿ ರೂ. ಹಣ ಕೊಡುವುದಾಗಿ ನಂಬಿಸಿ 21.5 ಸಬ್ಸಿಡಿ ಹಣ ಸಿಗಲಿದೆ. ಇದರಲ್ಲಿ 78.5 ಕೋಟಿ ಹಣಕ್ಕೆ ಕಡಿಮೆ ಬಡ್ಡಿ ಇರುತ್ತದೆ ಎಂದು ನಂಬಿಸಿದ್ದಾರೆ. ಇದಕ್ಕೂ ಕಮಿಷನ್ ಕೇಳಿದ್ದಾರೆ.
ನಂಬಿದ ಮಹಿಳೆ ಸಂಬಂಧಿಕರ, ಸ್ನೇಹಿತರ ಬಳಿ 16 ಲಕ್ಷ ಸಂಗ್ರಹಿಸಿ ಕೊಟ್ಟಿದ್ದಾರೆ. ಗಂಡನಿಗೆ ಹೇಳಬಾರದು ಎಂಬ ಹರೀಶ್ ಮಾತನ್ನ ನಂಬಿದ ಮಹಿಳೆ ಗಂಡನಿಗೂ ಹೇಳದೆ ಕೊಟ್ಟಿದ್ದಾರೆ. ಯಾವಾಗ ಎಲ್ಲೆಲ್ಲಿ ಹಣ ತೆಗೆದುಕೊಂಡು ಬಂದಿದ್ದರೋ ಅವರೆಲ್ಲಾ ಸಾಲ ಕೇಳಲು ಆರಂಭಿಸಿದ್ದಾರೆ.
ಮೀಟರ್ ಬಡ್ಡಿಗೂ ಸಾಲ ತಂದ ಮಹಿಳೆ ಖಿನ್ನತೆಗೆ ಹೋಗಿದ್ದಾರೆ. ಯಾವಾಗ ಪತಿ ಪತ್ನಿಯನ್ನ ಕೂರಿಸಿಕೊಂಡು ಕೇಳಿದಾಗ ಹರೀಶ್ ಮತ್ತು ನಳೀನಿಯ ಕಥೆಯನ್ನ ಹೇಳಿದ್ದಾರೆ. 2014 ರಿಂದ 2022 ರವರೆಗೆ ನಿರಂತರವಾಗಿ ಮೋಸ ಹೋದ ಬಗ್ಗೆ ವಿವರಿಸಿದ್ದಾರೆ. ಎರಡು ವರ್ಷದ ಬಳಿಕ ಮಹಿಳೆ ವಂಚಕರ ವಿರುದ್ಧ ದೂರು ದಾಖಲಾಗಿದೆ.