![]() |
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ |
ಸುದ್ದಿಲೈವ್/ಶಿವಮೊಗ್ಗ
ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲು ಅಂಬೇಡ್ಕರ್ ಜಾಥವನ್ನ ಆರಂಭಿಸಿದೆ. ಈ ಬಾರಿಯೂ ಬೇಡಿಕೆ ಈಡೇರಿಸಲು ಅಂಬೇಡ್ಕರ್ ಜಾಥ-2 ಎಂಬ ಹೆಸರಿನ ಅಡಿ ಜಾಥ ಆರಂಭಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಮಾತನಾಡಿ, ಸರ್ಕಾರಕ್ಕೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉಡುಪಿಯಿಂದ ಜಾಥ ಆರಂಭಗೊಂಡಿದೆ. ಮಂಗಳೂರು ಚಿಕ್ಕಮಂಗಳೂರು ಮೂಲಕ ಡಿ.12 ರಂದು ಜಾಥ ಡಿ.16 ರಂದು ಬೆಳಗಾವಿ ತಲುಪಲಿದೆ. ರಿಯಾಜ್ ಕಡಂಬು, ಭಾಸ್ಕರ್ ಪ್ರಸಾದ್ ಸೇರಿ 22 ನಾಯಕರು ಜಾಥದಲ್ಲಿ ಭಾಗಿಯಾಗಲಿದ್ದಾರೆ.
ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಡಿ.12ರಂದು ಜಾಥ ಶಿವಮೊಗ್ಗ ತಲುಪಲಿದ್ದು, ಬೈಪಾಸ್ ನಲ್ಲಿರುವ ದಿಲ್ಲಿ ದರ್ಬಾರ್ ಹೋಟೆಲ್ ನ ಎದುರಿನ ಜಾಗದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ನಗರಕ್ಕೆ ಜಾಥ ತಲುಪುವುದಾಗಿ ಹೇಳಿದರು.
ಒಳಮೀಸಲಾತಿ ಜಾರಿ. ಕಾಂತರಾಜ ವರದಿ ಜಾರಿ, 2 ಬಿ ಮೀಸಲಾತಿಯನ್ನ 4 ರಿಂದ 8 % ಗೆ ಏರಿಸುವಂತೆ. ವಕ್ಫ್ ಗೆ ಸೂಕ್ತ ಆಸ್ತಿಯನ್ನ ನಿಗದಿ ಪಡಿಸಬೇಕು ಎಂಬ ಬೇಡಿಕೆಯೊಂದಿಗೆ ಜಾಥ ಹೊರಟಿದ್ದು, ಶಿವಮೊಗ್ಗದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಿಯಾಜ್ ಕಡಂಬು, ಭಾಸ್ಕರ್ ಪ್ರಸಾದ್ ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫೈರೋಜ್, ಜಿಲಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಕ್ ಅಹಮದ್ ಮೊದಲಾದವರು ಭಾಗಿಯಾಗಿದ್ದರು.