ಪಂಚಮಸಾಲಿ ಹೋರಾಟವನ್ನ ಖಂಡಿಸಿ ಡಿ.18 ರಂದು ಅಹಿಂದ ಸಂಘಟನೆಯ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ

ಮೀಸಲಾತಿ ವಿಚಾರದಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬಲಾಢ್ಯರಾದ ಪಂಚಮಸಾಲಿ ಸಮುದಾಯ 2 ಎಗೆ ಸೇರಿಸಲು ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿರುವುದು ಸರಿಯಲ್ಲ ಎಂದು ಅಹಿಂದ ಸಂಘಟನೆ ಆಕ್ಷೇಪಿಸಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಹಿಂದದ ನಿವೃತ್ತ ಪ್ರಾಂಶುಪಾಲರಾದ ರಾಜಪ್ಪ,  ಪ್ರಸ್ತುತ ಪಂಚಮಸಾಲಿಯವರು 3 ಬಿ ನಲ್ಲಿದ್ದಾರೆ. ಅದರ ಲಾಭವನ್ನೂ ಪಡೆಯುತ್ತಿದ್ದಾರೆ. ಇದರ ಮೂಲಕ ಸಾಕಷ್ಟು ಪ್ರಗತಿಯಾದರೂ ಪಂಚಮಸಾಲಿ ಸಮುದಾಯವನ್ನ 2ಎ ಯಲ್ಲಿ ಸೇರಬೇಕೆಂದು ಸ್ವಾಮೀಜಿಗಳು ಹಠಹಿಡಿಯುತ್ತಿದ್ದಾರೆ. 

ವಿಶ್ವಕರ್ಮ, ಅಗಸರು, ಕುರುಬ ಜನಾಂಗ ಸೇರಿ 102 ಗುಂಪುಗಳನ್ನ ಈ 2ಎ ನಲ್ಲಿದ್ದಾರೆ. ಈ ಸಣ್ಣ, ಸಣ್ಣ ಸಮುದಾಯಗಳು ಇವತ್ತಿಗೂ ಪ್ರಗತಿ ಕಂಡಿಲ್ಲ. ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟಿಸುತ್ತಿರುವುದು ಆಕ್ಷೇಪಾರ್ಹ ಎಂದರು. 

ಸ್ವಾಮೀಜಿ ಬೀದಿ ರಂಪಾಟ ಮಾಡುತ್ಯಿದ್ದಾರೆ. ಯಾವ ಯಾವ ಜಾತಿ ಎಷ್ಟೆಷ್ಟು ಪ್ರಾತಿನಿತ್ಯ ಪಡೆದಿದ್ದಾರೆ ಎಂದು ಚರ್ಚೆಗೆ ಬಂದರೆ ನಾವು ಅವರಿಗೆ ಸ್ಪಷ್ಟಪಡಿಸತ್ತೇವೆ. 2 ಎ ಜಾತಿಗೆ ಸೇರಿಸಲು ಬರೊಲ್ಲವೆಂದು ಐದು ಆಯೋಗಗಳು ತಿರಸ್ಕರಿಸಿದೆ. ಹಿಂದುಳಿದ ಆಯೋಗ ಸೇರಿಸಿದಾಗ ಮಾತ್ರ ಮೀಸಲಾತಿ ಸಿಗಲಿದೆ. ಗೂಂಡ ನಡವಳಿಕೆ ಮೂಲಕ ಮೀಸಲಾತಿ ಪಡೆಯುವ ಹಂತಕ್ಕೆ ಸ್ವಾಮೀಜಿಯವರು ಹೊರಟಿದ್ದಾರೆ.

ಇದನ್ನ ಖಂಡಿಸಿ ಡಿ.18 ರಂದು  ನಗರದಲ್ಲಿ ಸೈನ್ಸ್ ಫೀಲ್ಡ್ ನಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು. 

ಸಂಘಟನೆಯ ಮತ್ತೋರ್ವ ಮುಖಂಡ ಸನಾವುಲ್ಲಾ ಮಾತನಾಡಿ,  ಒಳಮೀಸಲಾತಿಗಾಗಿ ಕಾಂತರಾಜು ವರದಿ ಜಾರಿಯಾಗಬೇಕು. ಜಾತಿಗಣನೆ ಬಹಿರಂಗ ಪಡಿಸಲು ಹಿಂದೇಟು ಆಗುತ್ತಿರುವ ಬಗ್ಗೆ ಅಹಿಂದ ಆಕ್ಷೇಪಿಸುತ್ತದೆ. ಜಾತಿಗಣನೆ ಮಾಡಲು ಸರ್ಕಾರಕ್ಕೆ ಹಿಂದೇಟು ಹಾಕುತ್ತಿದೆ ಎಂದು ದೂರಿದರು. 72% ಅಹಿಂದದವರು ಇದ್ದಾರೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close