ಸುದ್ದಿಲೈವ್/ಶಿವಮೊಗ್ಗ
ಡಿ.17 ರಂದು ಶ್ರೀರಾಮ್ ಫೈನಾನ್ಸ್ ನವರ ಮತ್ತೊಂದು ಶಾಖೆ ಆರಂಭವಾಗಲಿದೆ. ಒಂದು ಶಾಖೆ ಈಗಾಗಲೇ ಬಿಹೆಚ್ ರಸ್ತೆಯಲ್ಲಿದೆ. ಮತ್ತೊಂದು ಶಾಖೆ ಈಗ ವಿನೋಬ ನಗರದಲ್ಲಿ ಆರಂಭವಾಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧಿಕಾರಿ ಮೋಹನ್ ಕುಮಾರ್, 51 ವರ್ಷದಿಂದ ನಾನ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶ್ರೀರಾಮ್ ಫೈನಾನ್ಸ್ ಸೇವೆ ಸಲ್ಲಿಸುತ್ತಿದೆ. 3500 ಕ್ಕೂ ಹೆಚ್ಚು ಸಂಸ್ಥೆಗಳನ್ನ ದೇಶಾದ್ಯಂತ ಸ್ಥಾಪನೆ ಮಾಡಲಾಗಿದೆ. 75 ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. 5 ಲಕ್ಷ ವಹಿವಾಟಿನೊಂದಿಗೆ ಆರಂಭದ ವ್ಯವಹಾರ ಇಂದು ದೊಡ್ಡಮಟ್ಟದ ವರೆಗೆ ಬೆಳೆದಿದೆ ಎಂದರು.
ಸಾರಿಗೆ ವಿಭಾಗದಲ್ಲಿ ಬ್ಯಾಂಕ್ ನಲ್ಲಿ ಸಾಲ ಸಿಗ್ತ ಇರಲಿಲ್ಲ ಪಡೆಯುವುದು ಕಷ್ಟವಿತ್ತು. ಸಂಸ್ಥೆಯ ಸ್ಥಾಪಕ ತ್ಯಾಗರಾಜನ್ ಇದನ್ನ ಅರಿತು ಶ್ರೀರಾಮ್ ಫೈನಾನ್ಸ್ ಆರಂಭಿಸಿದರು. 85 ಲಕ್ಷ ಜನ ಗ್ರಾಹಕರು ಇದರ ಲಾಭಪಡೆದಿದ್ದಾರೆ. ಗ್ರೀನ್ ಎನರ್ಜಿಗೆ ಫೈನಾನ್ಸ್ ಆರಂಭಿಸಲಾಗಿದೆ. ಎಲೆಕ್ಟ್ರಿಕ್ ಕಾರು, ದ್ವಿಚಕ್ರ ವಾಹನ ಚಾರ್ಚಿಂಗ್ ಪಾಯಿಂಟ್ ಪೆಟ್ರೋಲ್ ಬಂಕ್ ಗೆ ಸಂಸ್ಥೆ ಸಾಲ ಕೊಡುತ್ತಿದೆ ಎಂದರು.
ಸಾರಿಗೆ ವಿಭಾಗದಲ್ಲಿರುವ ಚಾಲಕ ಮತ್ತು ಕ್ಲೀನರ್ ಮಕ್ಕಳಿಗೆ ವಿದ್ಯಾರ್ಥಿಗಳಾದ 7-11 ನೇ ತರಗತಿಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 60% ನಲ್ಲಿ ತೇರ್ಗಡೆಯಾದರೆ ವಿದ್ಯಾರ್ಥಿ ವೇತನ ನೀಲಗುತ್ತಿದೆ. ಕಿವುಡು ಮತ್ತು ಕುರುಡರಿಗೆ, ಅಂಬ್ಯುಲೆನ್ಸ್ ಸೇವೆಗೂ ಸಂಸ್ಥೆ ಡೊನೇಟ್ ಮಾಡುತ್ತಿದೆ ಎಂದರು.
30 ವರ್ಷದ ಹಿಂದೆ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿ ಕಚೇರಿ ಆರಂಭಿಸಲಾಯಿತು. ಬಿಹೆಚ್ ರಸ್ತೆಯಲ್ಲಿ ವಿನಾಯಕ ಕಂಪ್ಲೆಕ್ಸ್ ನಲ್ಲಿ ಸೇವೆ ನೀಡಲಾರಂಭಿಸಲಾಯಿತು. ಈಗ ಹೊಸ ಕಟ್ಟಡಕ್ಕೆ ಶೀಫ್ಟ್ ಆಗಿದೆ. ಗ್ರಾಹಕರಿಗೆ ಅನುಕೂಲವಾಗಲೆಂದು ವಿನೋಬ ನಗರದಲ್ಲಿ ಫ್ರೀಡಂ ಪಾರ್ಕ್ ಬಳಿಯ ಮೋರ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಹೊಸ ಶಾಖೆ ಆರಂಭಿಸಲಾಗುತ್ತಿದೆ. ಈ ವೇಳೆ 184 ಜನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗಣೇಶ್ ಭಟ್ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಸುರೇಶ್ ಸಯ್ಯದ್ ಅಜ್ಮಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.