ಸುದ್ದಿಲೈವ್/ಶಿವಮೊಗ್ಗ
ರಾಜ್ಯದ ಮಠ, ಮಂದಿರ, ರೈತರ ಜಮೀನು ವಕ್ಫ್ ಆಸ್ತಿಯಿಂದ ತೆಗೆದಿಲ್ಲ ಬದಲಿಗೆ ವಕ್ಫ್ ಆಸ್ತಿಯನ್ನು ಅನೇಕ ರಾಜಕೀಯ ನಾಯಕರು ವಶ ಪಡಿಸಿಕೊಂಡಿದ್ದಾರೆ. ಇದು ಅನ್ವರ್ ಮಾಣಿಪ್ಪಾಡಿ ಅವರ ವರದಿಯಲ್ಲಿ ಬಹಿರಂಗವಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ರಾಷ್ಡ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಎಕರೆ ಜಮೀನನ್ನು ರಾಜಕಾರಣಿಗಳು ನುಂಗಿನೀರು ಕುಡಿದ್ದಾರೆ. ಅನ್ವರ್ ಪಾಣಿಪ್ಪಾಡಿ ವರದಿ ಚರ್ಚೆಗೆ ಬಿಟ್ಟಿಲ್ಲ. ವಕ್ಪ್ ವಿವಾದವನ್ನು ಟೇಬಲ್‌ಮಾಡಿ ಸಾರ್ವಜನಿಕ ಚರ್ಚೆಗೆ ಬಿಡಬೇಕು. ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ ಅವರ ಬಳಿ ಹೋಗಿ ಈ ವರದಿ ಬಿಡದಂತೆ ಹೇಳಿದ್ದಾರೆ ಎಂಬ ಸಿಎಂ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ದೂರಿದರು.
ಸಿಎಂ ಅವರು ಇದರ ಬಗ್ಗೆ ಸಿಬಿಐ ತನಿಖೆಗೆ ಒಳಪಡಿಸಬೇಕು. ರಾಜ್ಯದ ಮುಖ್ಯಮಂತ್ರಿ ಮೇಲೆ ಗುರುತರ ಆರೋಪ ಬಂದಿದೆ. ಮುಡಾ ಸೇರಿ ಹಲವು ಗುರುತರ ಆರೋಪ ಇದೆ. ಅನ್ವರ್ ಮಣಪ್ಪಾಡಿ ವರದಿ ಹಾಗೆ ಇದೆ. ಇದರ ವರದಿ ಇನ್ನ ಬಹಿರಂಗವಾಗಿಲ್ಲ, ವರದಿಯಲ್ಲಿ ಅನೇಕ ಕಾಂಗ್ರೆಸ್ ನಾಯಕರು ಹೆಸರು ಇವೆ. ಅನ್ವರ್ ಮಾಣಪ್ಪಾಡಿ ವರದಿ ಚರ್ಚೆಗೆ ಬರಲಿ, ಅವಾಗ ಯಾರ ಲೂಟಿ ಮಾಡಿದಾರೆ ಅವರ ಹೆಸರು ಬರುತ್ತೆ ಎಂದರು.
150 ಕೋಟಿ ಆಮಿಷ ಆರೋಪ ಮಾಡಿದ್ದಾರೆ. ಅನ್ವರ್ ಮಾಣಪ್ಪಾಡಿ ತಮ್ಮ ಹೇಳಿಕೆ ಬದಲಿಸಿದ್ದಾರೆ. ವಿಜಯೇಂದ್ರ ನಮ್ಮ ಮನೆಗೆ ಬಂದಿಲ್ಲ. ಅವರು ಬಿಜೆಪಿ ಕಚೇರಿಗೆ ಕರೆಸಿ ನನಗೆ ಮಾತನಾಡಿದ್ದರು. ಆಗ ತಮಾಷೆಗೆ ಕಾಂಗ್ರೆಸ್ ನವರು ದುಡ್ಡು ಕೊಟ್ರೆ ತೊಗೊಳಿ ಎಂದಿದ್ದರು ಎಂದು ಹೇಳಿದ್ದರು. ಇದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಬಿಐಗೆ ವಹಿಸಬೇಕು ಎಂದಿದ್ದಾರೆ. ಇದು ಬಹಳ ಗಂಭೀರವಾದ ವಿಚಾರವಾಗಿದೆ ಎಂದರು.
ಸಿಎಂ ಸೇರಿ ಕೆಲ ಕಾಂಗ್ರೆಸ್ ನಾಯಕರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಸಿಬಿಐ ಮೇಲೆ ಮೋಹ ಬಂದಿರುವುದು ಒಳ್ಳೆಯದು. ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ. ಆದರೆ ಸಿಬಿಐಗೆ ತನಿಖೆಗೆ ಕೊಡುವವರು ಯಾರು !?ಇವರೇ ಸಿಬಿಐ ತನಿಖೆಗೆ ಕೊಡಬೇಕಲ್ಲ ಎಂದು ಪ್ರಶ್ನಿಸಿದರು.
ಸಿಬಿಐ ಅಂದ್ರೆ ಕಾಂಗ್ರೆಸ್ ಗೆ ಈ ಹಿಂದೆ ಆಗುತ್ತಿರಲಿಲ್ಲ. ಈಗ ಸಿಬಿಐ ಮೇಲೆ ವಿಶ್ವಾಸ ಬಂದಿದೆ. ಪಹಣಿಯಲ್ಲಿ ವಕ್ಪ್ ಆಸ್ತಿಯಂತಿರುವುದು ವಾಪಸ್ ಪಡೆಯಬೇಕು. 150 ಕೋಟಿ ಆಫರ್ ಮಾಡಿರುವ ಬಗ್ಗೆ ಸಿಬಿಐ ತನಿಖೆಗೆ ಒಳಪಡಿಸಬೇಕು. ಈ ಮೂರು ಅಂಶಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಹಗುರವಾಗಿ ತೆಗೆದುಕೊಳ್ಳುತ್ತಿದೆ. ಮಠ ಮಂದಿರ, ದೇವಸ್ಥಾನ ರೈತರ ಜಮೀನು ಯಾವುದೇ ಕಾರಣಕ್ಕೂ ವಕ್ಫ್ ಆಸ್ತಿ ಆಗಲು ಸಾಧ್ಯವಿಲ್ಲ ಎಂದು ಗುಡುಗಿದರು.