ಮಂಗಳೂರಿನಿಂಗ ಜೋಗಕ್ಕೆ ಹೊರಟಿದ್ದ ಬಸ್ ಪಲ್ಟಿ-15-20 ಜನರಿಗೆ ಗಾಯ

ಸುದ್ದಿಲೈವ್/ಜೋಗ

ಮಂಗಳೂರಿನಿಂದ ಜೋಗಕ್ಕೆ ಹೊರಟಿದ್ದ ಖಾಸಗಿ ಬಸ್ ಸಾಗರದ ಮುಪ್ಪಾನೆ ಬಳಿ ಮಗಚಿ ಬಿದ್ದಿದೆ.  ಬಸ್ ನಲ್ಲಿದ್ದ 15 ರಿಂದ 20 ಜನರಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು,  ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸಲಾಗಿದೆ. 

ಮಂಗಳೂರಿನಿಂದ ಭಟ್ಕಳ ಮತ್ತು ಜೋಗಕ್ಕೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಸಾಗರದ ಮುಪ್ಪಾನೆ ಬಳಿ ತಿರುವಿನಲ್ಲಿ ತಿರುಗಿಸಲು ಹೋಗಿ ಪಲ್ಟಿಯಾಗಿದೆ. ಅತಿಯಾದ ವೇಗದಲ್ಲಿ ಬಂದ ಬಸ್ ತಿರುವಿನಲ್ಲಿ ಸಾಗಲು ಬ್ರೇಕ್ ಹಾಕಿದ ಪರಿಣಾಮ ಬಸ್ ಪಲ್ಟಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. 

ಬಸ್ ನಲ್ಲಿ 50  ಜನ ಪ್ರಯಾಣಿಕರಿದ್ದು ಇದರಲ್ಲಿ 15-20  ಜನರಿಗೆ ಗಾಯವಾಗಿದೆ. ಇವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜೆ ಇದ್ದ ಕಾರಣ ಕುಟುಂಬಸ್ಥರೇ ವಾಹನ ಮಾಡಿಕೊಂಡು ಪ್ರವಾಸಿ ತಾಣಗಳಿಗೆ ತೆರಳಿತ್ತಿದ್ದಾಗ ಈ ಘಟನೆ ನಡೆದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. 

ಕಾರ್ಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ. ರಸ್ತೆಯ ಮೇಲೆ ಬಸ್ ಉರುಳಿಬಿದ್ದಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close